ಜಿಲ್ಲಾ ಸುದ್ದಿಗಳು
ಶಿರಸಿ :
ಉತ್ತರ ಕನ್ನಡ ಜಿಲ್ಲೆಯ 9 ಸರ್ಕಾರಿ ಆಸ್ಪತ್ರೆಗಳ 50 ಕ್ಕೂ ಅಧಿಕ ಸಿಬ್ಬಂದಿಗಳಿಗೆ, ಕಳೆದ ನಾಲ್ಕು ತಿಂಗಳಿನಿಂದ ವೇತನ ದೊರಕದೇ ಪರದಾಡುತ್ತಿದ್ದಾರೆ.
ಬಿ.ಆರ್.ಎಸ್ ಆರೋಗ್ಯ ಸಂಸ್ಥೆಯ ಅಡಿಯಲ್ಲಿ ಕೆಲಸ ನಿರ್ವಹಿಸುತ್ತಿರುವ ಇವರಿಗೆ ಸರ್ಕಾರದಿಂದ ಅನುದಾನ ಬಿಡುಗಡೆಯಾಗದೇ ಅತಂತ್ರ ಪರಿಸ್ಥಿತಿ ಎದುರಾಗಿದೆ.
ಜಿಲ್ಲೆಯಲ್ಲಿ ಡೈಯಾಲಿಸಿಸ್ ರೋಗಿಗಳ ಸಂಖ್ಯೆ ಈಗಾಗಲೇ ಅಧಿಕವಾಗಿದ್ದು, ನಿರ್ವಹಣೆ ಕೊರತೆಯಿಂದಾಗಿ ರೋಗಿಗಳೂ ಪರದಾಡುವ ಪರಿಸ್ಥಿತಿ ಎದುರಾಗಿದೆ.
ಜಿಲ್ಲೆಯ ರಾಜಕೀಯ ನಾಯಕರು ಕಣ್ಮುಚ್ಚಿ ಕುಳಿತಿದ್ದರೆ, ಅಧಿಕಾರಿಗಳು ಜಾಣ ಕಿವುಡುತನಕ್ಕೆ ಒಳಗಾಗಿದ್ದಾರೆ. ಸಿಬ್ಬಂದಿಗಳು ಹಲವು ಬಾರಿ ಮನವಿ ಸಲ್ಲಿಸಿದ್ದರೂ ಸಹ ಯಾವುದೇ ಪ್ರಯೋಜನ ಇಲ್ಲವಾಗಿದೆ.
ಕೊವಿಡ್ ವೈಪರಿತ್ಯದ ಸಂದರ್ಭದಲ್ಲೂ ಜೀವದ ಹಂಗು ತೊರೆದು ಸೇವೆ ಸಲ್ಲಿಸಿದ್ದಾರೆ ಸಿಬ್ಬಂದಿಗಳು. ಸರ್ಕಾರದ ಅಸ್ಪಷ್ಟ ನೀತಿಯಿಂದಾಗಿ ಅತಂತ್ರತೆ ಮುಂದುವರೆದಿದೆ.
ಜಿಲ್ಲೆಯಲ್ಲಿ ಆರೋಗ್ಯ ವ್ಯವಸ್ಥೆ ಹದಗೆಟ್ಟಿದ್ದು, ಹಗರಣ ನಡೆಸುವ ಸಂಸ್ಥೆಗಳಿಗೆ ಪ್ರಾಧಾನ್ಯತೆ ನೀಡಲಾಗುತ್ತದೆ ಎನ್ನುವ ಅಪವಾದವೂ ಇದೆ.
ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿ ಈ ಕೆಳಗಿನ ಬೇಡಿಕೆ ಸಲ್ಲಿಸಿದ್ದಾರೆ.
ಪ್ರಮುಖ ಬೇಡಿಕೆಗಳು
* ವೇತನ, ಪಿ.ಎಫ್ ಹಾಗೂ ಇ.ಎಸ್.ಐ ಹಣವನ್ನು ಬಿಡುಗಡೆ ಮಾಡಬೇಕು
* ಬಿ.ಆರ್.ಎಸ್ ಒಪ್ಪಂದದ ಬಗ್ಗೆ ಸಂಪೂರ್ಣ ಮಾಹಿತಿ
* ಬಿ.ಆರ್.ಎಸ್ ಒಪ್ಪಂದ ರದ್ದಾದರೆ ಎನ್.ಎಚ್.ಎಂ ಅಡಿಯಲ್ಲಿ ನೇಮಕ ಪತ್ರ ನೀಡುವುದು
* ಬೇರೆ ಏಜೆನ್ಸಿಗೆ ವಹಿಸುವುದಾದರೆ ಹಾಲಿ ಸಿಬ್ಬಂದಿ ಮುಂದುವರಿಸಬೇಕು
* ಎನ್.ಎಚ್.ಎಂ/ ಎ.ಆರ್.ಎಸ್.ನಿಂದ ಉದ್ಯೋಗ ಪತ್ರ
* ಸಿಬ್ಬಂದಿಗೆ ಸಮಾನ ವೇತನ ಪಾವತಿ
Be the first to comment