ಜಿಲ್ಲಾ ಸುದ್ದಿಗಳು
ಮಸ್ಕಿ
ಪಟ್ಟಣದ ವಾರ್ಡ್ ನಂಬರ್ 22 ರಲ್ಲಿ ಸಿದ್ದಾರ್ಥ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಸಾರ್ವಜನಿಕರಿಗೆ ಶಿಕ್ಷಕರಿಗೆ ಪ್ರತಿ ವಾರ್ಡ್ ಗಳಲ್ಲಿ ಲಸಿಕೆ ನೀಡಲಾಯಿತು. ಕೋವಿಡ್ ಮೂರನೇ ಅಲೆ ಎಚ್ಚರಿಕೆ ನಡುವೆಯೇ ಆರೋಗ್ಯ ಇಲಾಖೆ ಲಸಿಕೆ ಮೇಳ ಕಾರ್ಯಕ್ರಮ ಮೂಲಕ ಕೋವಿಡ್ ಲಸಿಕೆ ಗುರಿ ಮುಟ್ಟಲು ಪಟ್ಟಣ ಸೇರಿದಂತೆ ಹಳ್ಳಿಗಳತ್ತ ದೌಡಾಯಿಸಿದೆ ಲಕ್ಷಕ್ಕೂ ಅಧಿಕ ಗುರಿ ಹೊಂದಿದೆ. ಈಗಾಗಲೇ ಅಧಿಕ ಪ್ರಮಾಣದ ಗಡಿದಾಟಿದೆ. ನ್ಯಾಯಬೆಲೆ ಅಂಗಡಿ, ಬಸ್ ನಿಲ್ದಾಣ, ಸರ್ಕಾರಿ ಕಚೇರಿಯಲ್ಲಿ ಆರೋಗ್ಯ ಇಲಾಖೆ ಸಿಬ್ಬಂದಿಗಳು ಬೀಡು ಬಿಟ್ಟಿದ್ದಾರೆ..
*ಲಸಿಕೆ ಗುರಿ:* ಕೋವಿಡ್ ಎರಡನೇ ಅಲೆಯ ಭೀತಿಯಲ್ಲಿ ಅನೇಕರು ಕೋವಿಡ್‌ನಿಂದ ಪ್ರಾಣ ಕಳೆದುಕೊಂಡರು.ಮೂರನೇಅಲೆಯ ಎಚ್ಚರಿಕೆ ಮಧ್ಯೆಯೂ ಆರೋಗ್ಯ ಇಲಾಖೆ 18 ವರ್ಷ ಮೇಲ್ಪಟ್ಟಿರುವ ಪ್ರತಿಯೊಬ್ಬರಿಗೂ ಲಸಿಕೆ ಹಾಕುವ ಸಕಲ ಸಿದ್ಧತೆ ನಡೆಸಿದೆ. ಇನ್ನು ಒಂದೂವರೆ ತಿಂಗಳಲ್ಲಿ ಅಂದುಕೊಂಡಂತೆ ಗುರಿ ಮುಟ್ಟಲು ಲಸಿಕೆ ಸಿದ್ಧತೆ ಜೋರಾಗಿದೆ. ಖಾಸಗಿ ಸಂಘ-ಸಂಸ್ಥೆಗಳು ಕೋವಿಡ್ ಲಸಿಕೆ ಕುರಿತು ಗ್ರಾಮೀಣ ಭಾಗದಲ್ಲಿ ಜಾಗೃತಿ ಮೂಡಿಸಿವೆ.
*ಮೊದಲನೇ ಎರಡನೇ ಡೋಸ್:* ಕೋವಿಡ್ ಲಸಿಕೆ ಗುರಿ ಬೆನ್ನತ್ತಿದ್ದ ಆರೋಗ್ಯ ಇಲಾಖೆ ಕಂದಾಯ, ತಾಪಂ, ಗ್ರಾಮ ಪಂಚಾಯಿತಿ,
ಅಂಗನವಾಡಿ, ಆಶಾ ಕಾರ್ಯಕರ್ತೆಯರು ಸೇರಿ ಇತರೆ ಇಲಾಖೆ ಸಹಕಾರದೊಂದಿಗೆ ಮೊದಲನೇ ಡೋಸ್ ಅನ್ನು ಇಂದಿಗೆ ಸಾವಿರಕ್ಕೂ ಅಧಿಕ ಜನರಿಗೆ ಲಸಿಕೆ ಹಾಕಲಾಗಿದೆ. ಎರಡನೇ ಡೋಸ್ 15 ಸಾವಿರ ಅಸುಪಾಸಿನಲ್ಲಿ ಹಾಕಲಾಗಿದೆ. ಲಸಿಕೆ ಮೇಳ ಕಾರ್ಯಕ್ರಮ ಮೂಲಕ ಒಂದೇ ದಿನದಲ್ಲಿ 3 ಸಾವಿರ ಜನರಿಗೆ ಲಸಿಕೆ ಹಾಕಲಾಗಿದೆ.ಕೋವಿಡ್ ಲಸಿಕೆ ಹಾಕಲು ಪ್ರತಿ ಹಳ್ಳಿಗಳಲ್ಲಿ ಆರೋಗ್ಯ ಇಲಾಖೆ ಸಿಬ್ಬಂದಿ ಬೀಡು ಬಿಟ್ಟಿದ್ದಾರೆ.
ಆರೋಗ್ಯ ಇಲಾಖೆ ಸೇರಿದಂತೆ ಎಲ್ಲಾ ಇಲಾಖೆಗಳ ಕೋವಿಡ್ ಅಲೆ ತಡೆಗಟ್ಟುವ ನಿಟ್ಟಿನಲ್ಲಿ ಹಗಲು-ರಾತ್ರಿ ಪರಿ ಶ್ರಮ ಪಡುತ್ತಿದ್ದೇವೆ ಹಾಗಾಗಿ ಸಾರ್ವಜನಿಕರು ಆದಷ್ಟು ಬೇಗನೆ ಎಲ್ಲರೂ ಲಸಿಕೆ ಹಾಕಿಸಿಕೊಂಡು ಎಲ್ಲಾ ಮಸ್ಕಿಯನ್ನು ಕೊರೊನಾ ಮುಕ್ತವನ್ನಾಗಿ ಮಾಡಬೇಕೆಂದು ಸಾರ್ವಜನಿಕರಲ್ಲಿ ವಿನಂತಿ ಮಾಡಿಕೊಳ್ಳುತ್ತಿದ್ದೇವೆ ಗದ್ದೆಪ್ಪ ಆರೋಗ್ಯ ನಿರೀಕ್ಷಣ ಅಧಿಕಾರಿಗಳು ಪ್ರಾಥಮಿಕ ಆರೋಗ್ಯ ಕೇಂದ್ರ ಮಸ್ಕಿ.
*ನ್ಯಾಯಬೆಲೆ ಅಂಗಡಿ:* ಪಟ್ಟಣ ಸೇರಿ ತಾಲೂಕಿನಾದ್ಯಂತನ್ಯಾಯಬೆಲೆಅಂಗಡಿಗಳಲ್ಲಿ ಕೋವಿಡ್ ಲಸಿಕೆ ಹಾಕಲಾಗುತ್ತಿದೆ. ಪ್ರತಿ ತಿಂಗಳ ಪಡಿತರ ಚೀಟಿ ಫಲಾನುಭವಿಗಳು ಆಹಾರ ಧ್ಯಾನ ತೆಗೆದುಕೊಂಡು ಹೋಗಲು ಬರುವಂತಹವರಿಗೆ ಲಸಿಕೆ ಹಾಕಿಸಿಕೊಳ್ಳದಂತಹ ಫಲಾನುಭವಿಗಳಿಗೆ
ಕಡ್ಡಾಯ ಲಸಿಕೆ ಪಡೆದ ನಂತರವೇ ಆಹಾರ ಪೂರೈಸಲಾಗುತ್ತದೆ. ಬಹುತೇಕರು ಲಸಿಕೆ ಸೌಲಭ್ಯ ಪಡೆಯಲು ಹಿಂದೇಟು ಹಾಕಿದ ಮಾಹಿತಿ ಕಲೆ ಹಾಕಿ ಪ್ರತಿಯೊಬ್ಬ ಫಲಾನುಭವಿಗಳಿಗೆ ಕೋವಿಡ್ ಲಸಿಕೆ ಹಾಕಲಾಗುತ್ತಿದೆ. ಇದೇ ಸಂದರ್ಭದಲ್ಲಿ ಡಾ,, ಬಸವಶ್ರೀ ಆಡಳಿತ ವೈದ್ಯಾದಿಕಾರಿಗಳು ಡಾ,ಮೌನೇಶ ಹಾಗೂ ಆರೋಗ್ಯ ಇಲಾಖೆಯ ಸಿಬ್ಬಂದಿ ಗದ್ದೆಪ್ಪ ,ಮಂಜುಳಾ ಪುರಸಭೆ ಸಿಬ್ಬಂದಿಗಳಾದ ರಮೇಶ ಶಿವರಾಜ್,ಅಂಗನವಾಡಿ ಕಾರ್ಯಕರ್ತರಾದ ಶ್ರೀಮತಿ ಜೋಸ್ಪಿನ್ ಮತ್ತು ಶ್ರೀಮತಿ ಶರಣಮ್ಮ ದೈಹಿಕ ಶಿಕ್ಷಕರಾದ ಶಿವಪ್ಪ ಹಸಮಕಲ್ ಹಾಗೂ ಸಾರ್ವಜನಿಕರು ಇದ್ದರು.
Be the first to comment