ಕಬ್ಬಿನಲ್ಲಿ ಗೊಣ್ಣೆ ಹುಳುವಿನ ಸಮಗ್ರ ನಿರ್ವಹಣೆ

ವರದಿ: ಶರಣಪ್ಪ ಹೆಳವರ ಬಾಗಲಕೋಟೆ

ಜಿಲ್ಲಾ ಸುದ್ದಿಗಳು

ಬಾಗಲಕೋಟೆ : ನೀರಾವರಿ ಪ್ರದೇಶಗಳಲ್ಲಿ ಮುಖ್ಯವಾಗಿ ಕಬ್ಬಿನ ಕ್ಷೇತ್ರಗಳಲ್ಲಿ ಅನುಸರಿಸಬೇಕಾದ ಹತೋಟಿ ಕ್ರಮಗಳು ಇಂತಿವೆ. ಜನೇವರಿ : ಪ್ರತಿ ಎಕರೆಗೆ ಸಂಯುಕ್ತ ಕೀಟನಾಶಕ 150 ಗ್ರಾಂ. ಇಮಿಡಾಕ್ಲೋಪ್ರಿಡ್ (40%) + ಪಿಪ್ರೋನಿಲ್ (40%) 80 ಡಬ್ಲ್ಯೂ.ಜಿ. ನ್ನು ಮಣ್ಣಿಗೆ (ಬೋದಿನ ಮೇಲೆ/ ಪಕ್ಕದಲ್ಲಿ) ಉಣಿಸುವುದು.

ಫೆಬ್ರುವರಿ : ದೀಪದ ಬಲೆಗಳನ್ನು ಅಳವಡಿಸಿ ದುಂಬಿಗಳ ಚಟುವಟಿಕೆಗಳನುಸಾರವಾಗಿ ಬೆಳೆಗಳಿದ್ದ ಕ್ಷೇತ್ರಗಳಲ್ಲಿ ತಾತ್ಕಾಲಿಕ ನಿರ್ವಹಣಾ ಕ್ರಮವಾಗಿ ಪ್ರತಿ ಎಕರೆಗೆ 8 ಕಿ. ಗ್ರಾಂ. ಪಿಪ್ರೋನಿಲ್ 0.3 % ಜಿ. ಅಥವಾ ಕ್ಲೋರ್ಯಾಂಟ್ರಿನಿಲಿಪ್ರೋಲ್ 4 ಜಿ. ಯನ್ನು 5 ಕಿ. ಗ್ರಾಂ. ಹಸಿ ಮರಳಿನೊಂದಿಗೆ ಮಿಶ್ರಣ ಮಾಡಿ ಕ್ಷೇತ್ರಗಳಲ್ಲಿ ಹರಡಬೇಕು/ಎರಚಬೇಕು ಈ ಕ್ರಮವನ್ನು ಮಾರ್ಚ್ ತಿಂಗಳವರೆಗೆ ಮಾಡುವುದು ಸೂಕ್ತವಾಗಿದೆ. ಫೆಬ್ರುವರಿ ತಿಂಗಳಲ್ಲಿ ಸಾಯಂಕಾಲ ಭೂಮಿಯಿಂದ ಹೊರಬರುವ ದುಂಬಿಗಳನ್ನು ಆಶ್ರಿತ ಸಸ್ಯ/ ಮರಗಳಾದ ಬೇವು ಮತ್ತು ಹುಣಸೆ ಜಾತಿ ಇತ್ಯಾದಿ ಮರಗಳ ಹತ್ತಿರ ಪೆಟ್ರೋಮ್ಯಾಕ್ಸ್ / ದೀಪಾಕರ್ಷಣೆ ಸಾಮೂಹಿಕ ಕ್ರಮವಾಗಿ ಮಾಡಿ ದುಂಬಿಗಳನ್ನು ನಾಶಪಡಿಸಬೇಕು.


ಇಂತಹ ಮರಗಳು ಹತ್ತಿರದಲ್ಲಿ ಇಲ್ಲದಿದ್ದಲ್ಲಿ ಅಲ್ಲಲ್ಲಿ 4-6 ಅಡಿ ಎತ್ತರವುಳ್ಳ ಬೇವಿನ ರೆಂಬೆಗಳನ್ನು ನೆಟ್ಟು ಅವುಗಳ ಮೇಲೆ ದುಂಬಿಗಳು ಆಶ್ರಯಿಸಿದ ನಂತರ ಮೊನೊಕ್ರೋಟೋಫಾಸ್ 36 ಎಸ್. ಎಲ್. @ 1 ಮಿ ಲೀ ಅಥವಾ ಕ್ವಿನಾಲ್ ಫಾಸ್ 25 ಎ.ಸಿ. @ 2 ಮಿ ಲಿ ಪ್ರತಿ ಲೀಟರ್ ನೀರಿನಲ್ಲಿ ಬೆರೆಸಿ ಸಿಂಪಡಿಸಬೇಕು. ಆಕರ್ಷಕ ಬೆಳೆಯಾದ ಈರುಳ್ಳಿಯನ್ನು ಜನೇವರಿ-ಮಾರ್ಚ್ ತಿಂಗಳ ಅವಧಿಯಲ್ಲಿ ಬೆಳೆಗಳ ಮಧ್ಯದಲ್ಲಿ ಬೆಳೆಯುವುದರಿಂದ ಮುಖ್ಯ ಬೆಳೆಗಾಗುವ ಭಾಧೆಯನ್ನು ತಕ್ಕ ಮಟ್ಟಿಗೆ ಕಡಿಮೆ ಮಾಡಬಹುದು.

ಏಪ್ರಿಲ್ ತಿಂಗಳಲ್ಲಿ ಜೈವಿಕ ಕ್ರಮವಾಗಿ ಮೆಟರೈಜಿಯಂ ಅನಿಸ್ಲೋಪಿಯೆ ಶಿಲೀಂಧ್ರವನ್ನು ಪ್ರತಿ ಎಕರೆಗೆ 5-10ಕಿ.ಗ್ರಾಂ (ಭಾಧೆಗನುಸಾರವಾಗಿ) 250 ಕಿ. ಗ್ರಾಂ. ಕೊಟ್ಟಿಗೆ ಗೊಬ್ಬರದೊಂದಿಗೆ ಮಿಶ್ರಣ ಮಾಡಿ ಬೆಳೆಯ ಸಾಲಿನಲ್ಲಿ ಹಾಕಿ ನೀರು ಕೊಡಬೇಕು. ಕಪ್ಪು ಮತ್ತು ಆಳವಾದ ಕಪ್ಪು ಮಣ್ಣಿನ ಕ್ಷೇತ್ರಗಳಲ್ಲಿ ಮೇ ತಿಂಗಳಲ್ಲಿ ಸುಮಾರು 2-3 ಗಂಟೆ ನೀರನ್ನು ಕಟ್ಟಿ ನಿಲ್ಲಿಸುವುದು ಸೂಕ್ತ. ಗದ್ದೆಯಲ್ಲಿ ನಿಂತ ಕಬ್ಬಿನ ಬೆಳೆಗೆ ಬೇಸಿಗೆ ಮಳೆ ಬಿದ್ದ ತಕ್ಷಣವೇ ಕಬ್ಬಿನ ಬುಡದ ಸುತ್ತಲೂ ಕ್ಲೋರೋಪೈರಿಫಾಸ್ 20 ಇ.ಸಿ. @ 10 ಮಿ.ಲೀ. ಪ್ರತಿ ಲೀಟರ್ ನೀರಿಗೆ ಬೆರೆಸಿ ಮಿಶ್ರಣವನ್ನು ಭೂಮಿ ನೆನೆಯುವಂತೆ ಹಾಕಬೇಕು.

ಮಳೆಯಾಶ್ರಿತ ಬೆಳೆಗಳಲ್ಲಿ ಕ್ರಮಗಳು

ವರ್ಷದ ಮೊದಲ ಮಳೆ ಬಂದ ನಂತರ ಏಪ್ರಿಲ್-ಮೇ ತಿಂಗಳಲ್ಲಿ ದೀಪದ ಬಲೆಗಳನ್ನು ಅಳವಡಿಸಿ ದುಂಬಿಗಳ ಚಟುವಟಿಕೆಗಳಿಗನುಸಾರವಾಗಿ ಬೆಳೆಗಳಿದ್ದ ಕೇತ್ರಗಳಲ್ಲಿ ತಾತ್ಕಾಲಿಕ ನಿರ್ವಹಣಾ ಕ್ರಮವಾಗಿ ಪ್ರತಿ ಎಕರೆಗೆ 8 ಕಿ.ಗ್ರಾಂ. ಪಿಪ್ರೋನಿಲ್ 0.3 % ಜಿ ಅಥವಾ ಕ್ಲೋರ್ಯಾಂಟ್ರಿನಿಲಿಪ್ರೋಲ್ 4 ಜಿ. ಯನ್ನು 5 ಕಿ ಗ್ರಾಂ ಹಸಿ ಮರಳಿನೊಂದಿಗೆ ಮಿಶ್ರಣ ಮಾಡಿ ಕ್ಷೇತ್ರಗಳಲ್ಲಿ ಹರಡಬೇಕು/ಎರಚಬೇಕು ಈ ಕ್ರಮವನ್ನು ಮೇ-ಜೂನ್ ತಿಂಗಳವರೆಗೆ ಮಾಡುವುದು ಸೂಕ್ತ.

ಏಪ್ರಿಲ್ – ಸಾಯಂಕಾಲ ಭೂಮಿಯಿಂದ ಹೊರಬರುವ ದುಂಬಿಗಳನ್ನು ಆಶ್ರಿತ ಮರಗಳಾದ ಬೇವು ಮತ್ತು ಹುಣಸೆ ಜಾತಿ ಇತ್ಯಾದಿ ಮರಗಳ ಹತ್ತಿರ ಪೆಟ್ರೋಮ್ಯಾಕ್ಸ್ / ದೀಪಾಕರ್ಷಣೆ ಸಾಮೂಹಿಕ ಕ್ರಮವಾಗಿ ಮಾಡಿ ದುಂಬಿಗಳನ್ನು ನಾಶಪಡಿಸಿ ಸಾಮೂಹಿಕ ಕ್ರಮ ಕೈಗೊಳ್ಳುವುದು. ಆಕರ್ಷಕ ಬೆಳೆಯಾದ ಈರುಳ್ಳಿಯನ್ನು ಮೇ-ಜೂನ್ ತಿಂಗಳ ಅವಧಿಯಲ್ಲಿ ಬೆಳೆಗಳ ಮಧ್ಯದಲ್ಲಿ ಬೆಳೆಯುವುದರಿಂದ ಮುಖ್ಯ ಬೆಳೆಗಾಗುವ ಭಾಧೆಯನ್ನು ತಕ್ಕ ಮಟ್ಟಿಗೆ ಕಡಿಮೆ ಮಾಡಬಹುದು.ಜೂನ್ ತಿಂಗಳಲ್ಲಿ ಜೈವಿಕ ಕ್ರಮವಾಗಿ ಮೆಟರೈಜಿಯಂ ಅನಿಸ್ಲೋಪಿಯೆ ಶಿಲೀಂಧ್ರವನ್ನು ಪ್ರತಿ ಎಕರೆಗೆ 5-10 ಕಿ.ಗ್ರಾಂ (ಭಾಧೆಗನುಸಾರವಾಗಿ) 250 ಕಿ. ಗ್ರಾಂ. ಕೊಟ್ಟಿಗೆ ಗೊಬ್ಬರದೊಂದಿಗೆ ಮಿಶ್ರಣ ಮಾಡಿ ಬೆಳೆಯ ಸಾಲಿನಲ್ಲಿ ಹಾಕಿ ನೀರು ಕೊಡಬೇಕು.

ಕೃಷಿ ಇಲಾಖೆಯ ಸಹಾಯಕ ಕೃಷಿ ಅಧಿಕಾರಿಗಳಾದ ಎಸ್.ಎ.ಪಟ್ಟಣಶೆಟ್ಟಿ ಮತ್ತು ತಾಲೂಕಾ ತಾಂತ್ರಿಕ ವ್ಯವಸ್ಥಾಪಕ ಐ.ಎನ್.ಕೆಂಗಾರ ಮತ್ತು ಕೃಷಿ ಸಂಜೀವಿನಿ ತಾಂತ್ರಿಕ ಸಹಾಯಕ ಮಹಾಂತೇಶ ಕುಂಟೋಜಿ ಅವರು ಹಿರೇಮುಚ್ಚಳಗುಡ್ಡ ರೈತರ ತಾಕಿನಲ್ಲಿ ಗೊಣ್ಣೆ ಹುಳು ಭಾಧಿತ ಕೇತ್ರವನ್ನು ಪರಿಶೀಲಿಸಿ ಅಗತ್ಯ ಕ್ರಮಗಳನ್ನು ತಿಳಿಸಿದರು.

Be the first to comment

Leave a Reply

Your email address will not be published.


*