ಗುಣಾತ್ಮಕ ಶಿಕ್ಷಣದೊಂದಿಗೆ ಉತ್ತಮ ಫಲಿತಾಂಶವೇ ಇಲಾಖೆಯ ಮುಖ್ಯಗುರಿ: ಬಿಇಓ ವೀರೇಶ ಜೇವರ್ಗಿ

ವರದಿ: ಚೇತನ ಕೆಂದೂಳಿ, ಸುದ್ದಿ ಸಂಪಾದಕರು

ಜಿಲ್ಲಾ ಸುದ್ದಿಲೋಕ 

ಮುದ್ದೇಬಿಹಾಳ:

CHETAN KENDULI

ಗುಣಾತ್ಮಕ ಶಿಕ್ಷಣದೊಂದಿಗೆ ಉತ್ತಮ ಫಲಿತಾಂಶವೇ ಶಿಕ್ಷಣ ಇಲಾಖೆಯ ಮುಖ್ಯ ಉದ್ದೇಶವಾಗಿದ್ದು ತಮ್ಮಲ್ಲಿರುವ ವಿಷಯ ಸಂಪತ್ತನ್ನು ವಿದ್ಯಾರ್ಥಿಗಳಿಗೆ ಮುಟ್ಟಿಸುವ ಜವಾಬ್ದಾರಿ ಶಿಕ್ಷಕರದಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ವಿರೇಶ ಜೇವರ್ಗಿ ಹೇಳಿದರು.


ಪಟ್ಟಣದ ವೀ.ವಿ.ಬಾಲಕಿಯರ ಪ್ರೌಢ ಶಾಲೆಯಲ್ಲಿ 2020-21ನೇ ಸಾಲಿನ ಸಮಾಜ ವಿಜ್ಞಾನ ವಿಷಯದ ದ್ವಿತೀಯ ಕಾರ್ಯಾಗಾರದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿ, ಸಕಲ ಸಿದ್ಧತೆಯೊಂದಿಗೆ ಕಾಲಹರಣ ಮಾಡದೇ ಪರಿಣಾಮಕಾರಿಯಾಗಿ ಪಠ್ಯ ವಇಷಯ ಮಂಡನೆಯೊಂದಿಗೆ ಸಾಮಾಜಿಕ ಮಹತ್ವಗಳನ್ನು ವಿದ್ಯಾರ್ಥಿಗಳಿಗೆ ತಿಳಿಸುವಲ್ಲಿ ಶಿಕ್ಷಕರು ಪವೃತ್ತರಾಗಬೇಕು. ಅಂದಾಗ ಮಾತ್ರ ಶಿಕ್ಷಕರ ವೃತ್ತಿಗೆ ಗೌರವ ಸಿಕ್ಕಿದಂತಾಗುತ್ತದೆ ಎಂದು ಅವರು ಹೇಳಿದರು.
ಸಿಂದಗಿ ತಾಲೂಕಿನ ಯಂಕಂಚಿ ಸರಕಾರಿ ಪ್ರೌಢ ಶಾಲೆ ಶಿಕ್ಷಕ ಸಂಪನ್ಮೂಲವ್ಯಕ್ತಿ ಅರ್ಜುನ ಮಲ್ಲೇವಾಡಿ ಮಾತನಾಡಿ, ಎಸ್.ಎಸ್.ಎಲ್.ಸಿ ಪಠ್ಯ ವಸ್ತುಗಳ ಮೇಲೆ ಪರೀಕ್ಷಾ ದೃಷ್ಠಿಯಿಂದ ಪ್ರತಿಭಾವಂತ ಮತ್ತು ನಿಧಾನಗತಿ ಕಲಿಕೆಯುಳ್ಳ ವಿದ್ಯಾರ್ಥಿಗಳಲ್ಲಿಯೂ ಈಗಿರುವ ಮಟ್ಟಕ್ಕಿಂತ ಹೆಚ್ಚಿನ ಗುರಿಸಾಧಿಸುವ ಕುರಿತು ಯಾವಯಾವ ಪಾಠಗಳು ಪ್ರಧಾನವೆನ್ನುವ ವಿಷಯಗಳ ಮೇಲೆ ಸಂವಹನ ಮಾಡಿದರು.
ವೀ.ವಿ.ಬಾಲಕೀಯರ ಪ್ರೌಢ ಶಾಲೆಯ ಮುಖ್ಯೋಪಾಧ್ಯಾಯರಾದ ವಿ.ಆಯ್.ಗೂಳಿ, ಸೇರಿದಂತೆ ತಾಲೂಕಿನ ಸರಕಾರಿ, ಅನುದಾನಿತ, ಅನುದಾನ ರಹಿತ ಪ್ರೌಢ ಶಾಲೆಗಳ ಸಮಾಜ ವಿಜ್ಞಾನ ಶಿಕ್ಷಕರು ಇದ್ದರು.
ಶಿಕ್ಷಣ ಸಂಯೋಜಕ ಎ.ಎಸ್.ಭಗವಾನ ಪ್ರಾಸ್ತಾವಿಕವಾಗಿ ಮಾತನಾಡಿದರು. ಮಹಾದೇವ ಕುಂಬಾರವರು ಪ್ರಾರ್ಥಿಸಿದರು. ರಾಮಚಂದ್ರ ಹೆಗಡೆ ನಿರೂಪಿಸಿದರು. ಪ್ರೇಮನಗೌಡ ವಂದಿಸಿದರು.

 

Be the first to comment

Leave a Reply

Your email address will not be published.


*