ನೂತನ ಮಸ್ಕಿ ತಾಲೂಕು ಕೇಂದ್ರದ ಎಲ್ಲಾ ಸರಕಾರಿ ಕಛೇರಿಗಳ ಪ್ರಾರಂಭಕ್ಕೆ ಮತ್ತು ಐತಿಹಾಸಿಕ ಅಶೋಕ ಶಿಲಾಶಾಸನ ಸ್ಥಳವನ್ನು ಅಭಿವೃದ್ಧಿಪಡಿಸಲು ರಾಜ್ಯ ವಿಧಾನಸಭಾ ಅಧಿವೇಶನದಲ್ಲಿ ಚರ್ಚಿಸಿ ವಿಶೇಷ ಅನುದಾನ ಬಿಡುಗಡೆಗೊಳಿಸಲು ಕರವೇ ಒತ್ತಾಯ

ವರದಿ: ಗ್ಯಾನಪ್ಪ ದೊಡ್ಡಮನಿ ಮಸ್ಕಿ

ಜಿಲ್ಲಾ ಸುದ್ದಿಗಳು 

ಮಸ್ಕಿ: ಕರ್ನಾಟಕ ರಕ್ಷಣಾ ವೇದಿಕೆ ನೇರವಾಗಿ ತಮ್ಮ ಗಮನಕ್ಕೆ ತರಬಯಸುವುದೇನೆಂದರೆ ಮಸ್ಕಿಯೂ ನೂತನ ತಾಲೂಕು ಕೇಂದ್ರವನ್ನಾಗಿ ಹಿಂದಿನ ಕಾಂಗ್ರೆಸ್ ಸರ್ಕಾರ 2018 ಜನವರಿ 26 ರಂದು ಅಧಿಕೃತವಾಗಿ ಘೋಷಣೆ ಮಾಡಿ ಸುಮಾರು ಮೂರು ವರ್ಷಗಳು ಕಳೆಯುತ್ತಾ ಬಂದರು, ಇದುವರೆಗೂ ಬೆರಳೆಣಿಕೆಯಷ್ಟು ಇಲಾಖೆಗಳು ತಾಲೂಕಿನಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಇನ್ನುಳಿದ ಇಲಾಖೆಗಳು ಮಸ್ಕಿಯೂ ಮೂರು ಭಾಗಗಳಾಗಿ ಹಂಚಿಹೋಗಿದ್ದು, ಮಾನ್ವಿ, ಲಿಂಗಸ್ಗೂರು ಮತ್ತು ಸಿಂಧನೂರು ತಾಲೂಕು ಕೇಂದ್ರದಲ್ಲಿ ಪ್ರಸ್ತುತ ಕಚೇರಿಗಳಿದ್ದು ಅಧಿಕಾರಿಗಳು ಅಲ್ಲೇ ಇರುತ್ತಿದ್ದು, ಸಾರ್ವಜನಿಕರಿಗೆ ತಮ್ಮ ದಿನನಿತ್ಯ ಕೆಲಸಗಳಿಗೆ ತೊಂದರೆಯಾಗಿದೆ. ತಾಲೂಕು ಘೋಷಣೆಯಾಗಿ ಇಲಾಖೆಗಳು ಅಧಿಕೃತವಾಗಿ ಮಸ್ಕಿಯಲ್ಲಿ ಪ್ರಾರಂಭವಾಗದ ಕಾರಣ ಜನಸಾಮಾನ್ಯರು ತುಂಬಾ ತೊಂದರೆ ಅನುಭವಿಸುವಂತಾಗಿದೆ. ಹಾಗಾಗಿ ಈ ವಿಚಾರವನ್ನು ಸೆಪ್ಟೆಂಬರ್ 13 ರಿಂದ ನಡೆಯುವ ಮುಂಗಾರು ಅಧಿವೇಶನದಲ್ಲಿ ಗಂಭೀರವಾಗಿ ಪರಿಗಣಿಸಿ ತಾಲೂಕ ಕೇಂದ್ರದ ಎಲ್ಲಾ ಇಲಾಖೆಗಳು ಶೀಘ್ರವೇ ಮಸ್ಕಿ ಪಟ್ಟಣದಲ್ಲಿ ಕಾರ್ಯಾರಂಭ ಮಾಡಬೇಕು. ಮತ್ತು ಸಾವಿರಾರು ವರ್ಷಗಳ ಇತಿಹಾಸವಿರುವ ಪಟ್ಟಣದ ಐತಿಹಾಸಿಕ ಶಾಸನವಾಗಿರುವ ಅಶೋಕ ಶಿಲಾಶಾಸನ ಸ್ಥಳವನ್ನು ಅಭಿವೃದ್ಧಿಪಡಿಸಲು ಅಧಿವೇಶನದಲ್ಲಿ ಚರ್ಚಿಸಿ ವಿಶೇಷ ಅನುದಾನ ಬಿಡುಗಡೆಗೊಳಿಸಲು ಮುಂದಾಗಬೇಕೆಂದು ಕರ್ನಾಟಕ ರಕ್ಷಣಾ ವೇದಿಕೆ ಒತ್ತಾಯಿಸುತ್ತಿದೆ. ಮಸ್ಕಿ ಪಟ್ಟಣದ ಸರ್ಕಾರಿ ಕಛೇರಿಗಳು ಕೂಡಲೇ ಕಾರ್ಯ ಆರಂಭಿಸಲು ಸೂಕ್ತ ಕ್ರಮ ಕೈಗೊಳ್ಳಲು ವಿರೋಧಪಕ್ಷದ ನಾಯಕರುಗಳು ಸರಕಾರದ ಮತ್ತು ಕಂದಾಯ ಸಚಿವರ ಮೇಲೆ ಒತ್ತಡ ಹೇರಬೇಕೆಂದು ಬಸನಗೌಡ ಅರ್. ತುರ್ವಿಹಾಳ ಶಾಸಕರು ಮಸ್ಕಿ ವಿಧಾನಸಭಾ ಕ್ಷೇತ್ರ ಇವರಿಗೆ || ಡಾಕ್ಟರ್ ಬಿ.ಆರ್ ಅಂಬೇಡ್ಕರ್ ವೃತ್ತದ ಗಾಂಧಿನಗರದ ಬಳಿ ಮನವಿ ಮಾಡಿದರು.

CHETAN KENDULI

ಇದೇ ಸಂದರ್ಭದಲ್ಲಿ ಸುರೇಶ ಕಾಟಗಲ್, ಸದ್ದಾಮ್ ಗಾಂಧಿನಗರ, ವಸಂತ ವೆಂಕಟಾಪುರ, ನಿರುಪಾದಿ ಪರಾಪುರ, ಬಸವರಾಜ, ಸದ್ದಾಮ್ ಜಂಡಕಟ್ಟಿ, ಯಮನಪ್ಪ ಸೇರಿದಂತೆ ಇನ್ನಿತರರು ಭಾಗಿಯಾಗಿದ್ದರು.

Be the first to comment

Leave a Reply

Your email address will not be published.


*