ರೈತರಿಗೆ ಸಂಜೀವಿನಿಯಾದ ಕೆರೆ ಕೋಡಿ 

ವರದಿ: ಹೈದರ್ ಸಾಬ್, ಕುಂದಾಣ

ರಾಜ್ಯ ಸುದ್ದಿಗಳು 

ದೇವನಹಳ್ಳಿ

ಕೆರೆಗಳು ನೀರಿನಿಂದ ತುಂಬಿ ತುಳುಕಿದರೆ ರೈತರಿಗೆ ಸಂಜೀವಿನಿಯಾಗುತ್ತದೆ. ಈಭಾಗದ ರೈತರಿಗೆ ವರದಾನವಾದ ಮಳೆ ಮುಂದಿನ ದಿನಗಳಲ್ಲಿ ಸಮೃದ್ಧ ಬೆಳೆ ಇಡಲು ಸಹಕಾರಿಯಾಗುತ್ತದೆ ಎಂದು ಶಾಸಕ ಎಲ್.ಎನ್.ನಾರಾಯಣಸ್ವಾಮಿ ಹರ್ಷ ವ್ಯಕ್ತಪಡಿಸಿದರು.

CHETAN KENDULI

ದೇವನಹಳ್ಳಿ ತಾಲೂಕಿನ ಆಲೂರುದುದ್ದನಹಳ್ಳಿ ಗ್ರಾಪಂ ವ್ಯಾಪ್ತಿಯ ಪಂಡಿತಪುರ ಗ್ರಾಮದ ಕೆರೆ ಕೋಡಿಗೆ ಬಾಗಿನ ಅರ್ಪಿಸಿ ಅವರು ಮಾತನಾಡಿದರು. ಸುಮಾರು ವರ್ಷಗಳಿಂದ ಕೆರೆಯು ನೀರಿಲ್ಲದೆ ಬರುಡಾಗಿತ್ತು. ಇದರಿಂದ ಕೆರೆಯ ಅಂದವೇ ಕಾಣುತ್ತಿರಲಿಲ್ಲ. ಇದೀಗ ಮಳೆಯಾಗುತ್ತಿರುವುದರಿಂದ ತಾಲೂಕಿನ ಬಹುತೇಕ ಕೆರೆಗಳು ತುಂಬಿ ತುಳುಕುತ್ತಿವೆ. ಮುಂದಿನ ಬೇಸಿಗೆ ನೀರಿನ ಅಭಾವ ಬರುವುದಿಲ್ಲ. ಈ ಹಿಂದೆ ನೀರಿಗಾಗಿ ಸಾಕಷ್ಟು ಪರದಾಡುವ ಪರಿಸ್ಥಿತಿ ಇತ್ತು. ಕೆರೆಗಳು ಬತ್ತಿ ಹೋಗಿದ್ದವು. ಇದೀಗ ಕೆರೆಗಳಲ್ಲಿ ನೀರು ನಿಂತಿರುವುದರಿಂದ ಅಂತರ್ಜಲ ಮಟ್ಟ ಹೆಚ್ಚಳವಾಗುತ್ತಿದೆ. ಜತೆಗೆ ಬೋರ್‌ವೆಲ್‌ಗಳಲ್ಲಿ ನೀರು ಸಿಗುವಂತೆ ಆಗಿದೆ. ತಾಲೂಕಿನ ಜನರಿಗೆ ಈ ಬಾರಿ ಬೇಸಿಗೆಯಲ್ಲಿ ನೀರಿನ ಕೊರತೆ ಕಂಡುಬರುವುದಿಲ್ಲ ಎಂದು ಹೇಳಿದರು.

ಈ ವೇಳೆಯಲ್ಲಿ ಆಲೂರುದುದ್ದನಹಳ್ಳಿ ಗ್ರಾಪಂ ಅಧ್ಯಕ್ಷೆ ಗೌರಮ್ಮರಾಮಣ್ಣ, ಉಪಾಧ್ಯಕ್ಷೆ ಕಾಂತ ಮುನಿರಾಜು, ಸದಸ್ಯರಾದ ಚಿಕ್ಕಮುನಿಶಾಮಪ್ಪ, ತಾಪಂ ಮಾಜಿ ಉಪಾಧ್ಯಕ್ಷ ಪಿ.ಪಟಾಲಪ್ಪ, ಜಿಪಂ ಮಾಜಿ ಸದಸ್ಯ ಬೀರಸಂದ್ರ ಬೀರಪ್ಪ, ಕುಂದಾಣ ವಿಎಸ್‌ಎಸ್‌ಎನ್ ಅಧ್ಯಕ್ಷ ರಾಮಣ್ಣ, ಮುಖಂಡರಾದ ಮಂಜುನಾಥ್, ಆಂಜಿನಪ್ಪ, ರಾಜಣ್ಣ, ಅಂಬರೀಶ್, ವೆಂಕಟರಮಣಪ್ಪ, ರಾಜಣ್ಣ, ಪಿಡಿಒ ಸುಶೀಲಮ್ಮ, ಗ್ರಾಮಸ್ಥರು ಇದ್ದರು. 

Be the first to comment

Leave a Reply

Your email address will not be published.


*