ರಾಜ್ಯ ಸುದ್ದಿಗಳು
ದೇವನಹಳ್ಳಿ
ಅಂತರ್ಜಲವನ್ನು ಬಹಳ ವೇಗವಾಗಿ ಹೀರುವ ನೀಲಗಿರಿ ಮರಗಳನ್ನು ತೆರವುಗೊಳಿಸಿದರೆ ಅಂತರ್ಜಲ ವೃದ್ಧಿಯಾಗುತ್ತದೆ ಎಂದು ಕುಂದಾಣ ಗ್ರಾಪಂ ಅಧ್ಯಕ್ಷ ವಿ.ನಾರಾಯಣಸ್ವಾಮಿ ತಿಳಿಸಿದರು.ದೇವನಹಳ್ಳಿ ತಾಲೂಕಿನ ದ್ಯಾವರಹಳ್ಳಿ ಗ್ರಾಮದಲ್ಲಿನ ಸರ್ವೆ ನಂ.೧೭೬/೨ರಲ್ಲಿನ ಮೂರುವರೆ ಎಕರೆ ಪ್ರದೇಶದಲ್ಲಿ ಯತೇಚ್ಚವಾಗಿ ಬೆಳೆದಿದ್ದ ನೀಲಗಿರಿ ಮರಗಳನ್ನು ಬುಡಸಮೇತ ತೆರವುಗೊಳಿಸುವುದರ ಮೂಲಕ ಅವರು ಮಾತನಾಡಿದರು. ದ್ಯಾವರಹಳ್ಳಿ ಗ್ರಾಮದಲ್ಲಿ ನೀಲಗಿರಿ ಬೆಳೆಯಲಾಗಿತ್ತು. ಇದೀಗ ಮಳೆಯಿಂದಾಗಿ ಕೆರೆಗಳು ನೀರಿನ ಕೂಡಿವೆ. ಅಂತರ್ಜಲ ಮಟ್ಟ ಹೆಚ್ಚಿಸುವ ಸಲುವಾಗಿ ಹಾಕಿದ್ದ ನೀಲಗಿರಿ ಮರಗಳನ್ನು ಬೇರುಸಮೇತ ಕಿತ್ತು ಹಾಕಲಾಗುತ್ತಿದೆ. ಈ ಜಮೀನಿನಲ್ಲಿ ನೀರಾವರಿಯಾಶ್ರಿತ ಮತ್ತು ಮಳೆಯಾಶ್ರಿತ ಬೆಳೆಗಳನ್ನು ಇಡಲು ತೀರ್ಮಾನಿಸಲಾಗಿದೆ. ನೀಲಗಿರಿ ಮರಗಳನ್ನು ಬೆಳೆದಿರುವ ಪ್ರತಿಯೊಬ್ಬರು ಸ್ವಯಂ ಪ್ರೇರಿತರಾಗಿ ನೀಲಗಿರಿ ಮರಗಳನ್ನು ತೆರವುಗೊಳಿಸಿದರೆ ಅಂತರ್ಜಲ ಮಟ್ಟ ಹೆಚ್ಚಾಗುವುದರ ಜತೆಗೆ ಬೋರ್‌ವೆಲ್‌ಗಳಲ್ಲಿ ನೀರು ಲಭ್ಯವಾಗುತ್ತದೆ ಎಂದು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡರು.
ಮುಖಂಡ ದ್ಯಾವರಹಳ್ಳಿ ವಿ.ವೆಂಕಟಪ್ಪ ಮಾತನಾಡಿ, ನೀಲಗಿರಿ ಮರಗಳು ಹೆಚ್ಚು ನೀರನ್ನು ಕುಡಿಯುತ್ತವೆ. ಇದರಿಂದ ಬೆಳೆ ಇಡಲು ಹಾಗುವುದಿಲ್ಲ. ನೀರಿನ ಅಭಾವ ತಲೆದೂರುತ್ತದೆ. ನೀಲಗಿರಿ ತೆಗೆದು ಇತರೆ ಕೃಷಿ ಬೆಳೆಯನ್ನು ಇಟ್ಟರೆ ಹೆಚ್ಚು ಅನುಕೂಲವಾಗುತ್ತದೆ. ಅಂತರ್ಜಲ ಮಟ್ಟ ಉಳಿವಿಗೆ ಸಹಕಾರಿಯಾಗುತ್ತದೆ ಎಂದರು. ಈ ವೇಳೆಯಲ್ಲಿ ಗ್ರಾಮಸ್ಥರಾದ ನಾಗರಾಜು, ನಾರಾಯಣಸ್ವಾಮಿ, ಕೃಷ್ಣಪ್ಪ, ಮೋಹನ್, ಗ್ರಾಮಸ್ಥರು, ಇದ್ದರು.
Be the first to comment