ರಾಜ್ಯ ಸುದ್ದಿಗಳು
ಭಟ್ಕಳ
ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ನಗರ ಠಾಣೆಯ ಪಿ.ಎಸ್.ಐ ಆಗಿ ಕಾರ್ಯ ನಿರ್ವಹಿಸುತ್ತಿರುವ ಶ್ರೀ ಎಚ್.ಬಿ.ಕುಡಗುಂಟಿ ಅವರಿಗೆ ಜಿಲ್ಲೆಯ ಅತ್ಯುತ್ತಮ ಪಿ.ಎಸ್.ಐ(ಕರೋನ ವಾರಿಯರ್ ಸೇವೆ) ಪ್ರಶಸ್ತಿ ದೊರಕಿದೆ. ಭಟ್ಕಳದಲ್ಲಿ ಕರೋನ 1 ಮತ್ತು 2 ಅಲೆಯ ಸಮಯದಲ್ಲಿ ಶ್ರೀ ಎಚ್.ಬಿ.ಕುಡಗುಂಟಿ ಯವರು ಅತ್ಯುತ್ತಮವಾಗಿ ಕಾರ್ಯ ನಿರ್ವಹಣೆ ಮಾಡಿ ಜಿಲ್ಲೆಯಲಿಯೇ ಹೆಸರುವಾಸಿಯಾಗಿ ಜನ ಮನ್ನಣೆ ಗಳಿಸಿದರು. ಉತ್ತರ ಕನ್ನಡ ಜಿಲ್ಲಾಡಳಿತ ಇವರನ್ನು ಗುರುತಿಸಿ ಗಣರಾಜ್ಯೋತ್ಸವ ದಿನದಂದು ಕಾರವಾರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಮಂತ್ರಿ ಶ್ರೀ ಕೋಟ ಶ್ರೀನಿವಾಸ ಪೂಜಾರಿ ಸಮ್ಮುಖದಲ್ಲಿ ಜಿಲ್ಲಾಧಿಕಾರಿಗಳು ಶ್ರೀ ಎಚ್.ಬಿ ಕುಡಗುಂಟಿ ಅವರಿಗೆ ಜಿಲ್ಲೆಯ ಅತ್ಯುತ್ತಮ ಪಿ.ಎಸ್.ಐ ಪ್ರಶಸ್ತಿ ಪತ್ರ ವನ್ನು ಮತ್ತು ಪದಕ ನೀಡಿ ಸನ್ಮಾನಿಸಿದರು. ಈ ಸಂದರ್ಭದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸುಮನ್ನ್.ಡಿ.ಪನ್ನೆಕರ , ಜಿಲ್ಲಾ ಜಿಲ್ಲಾ ಪಂಚಾಯತ್ ಸಿ.ಇ.ಓ ಪ್ರಿಯಾಂಕ , ಮುಂತಾದವರು ಉಪಸ್ಥಿತರಿದ್ದರು.
ಗಣರಾಜ್ಯೋತ್ಸವ ದಿನದಂದುಜಿಲ್ಲಾ ಅತ್ಯುತ್ತಮ ಪಿ.ಎಸ್.ಐ ಪ್ರಶಸ್ತಿ ಪಡೆದ ಭಟ್ಕಳ ನಗರ ಠಾಣೆಯ ಪಿ.ಎಸ್.ಐ ಶ್ರೀ ಎಚ್.ಬಿ.ಕುಡಗುಂಟಿ ಅವರನ್ನು ಕರ್ನಾಟಕ ರಣಧೀರರ ವೇಧಿಕೆ ಜಿಲ್ಲಾಧ್ಯಕ್ಷ ಈರ ನಾಯ್ಕ ಚೌತನಿ , ಸುನ್ನೀ ಯುವಜನ ಸಂಘದ ಜಿಲ್ಲಾಧ್ಯಕ್ಷ ಕೆ.ಎಂ.ಷರೀಫ್ , ಮಾಹಿತಿ ಹಕ್ಕು ಕಾರ್ಯಕರ್ತರ ಸಂಘದ ಭಟ್ಕಳ್ ತಾಲೂಕ ಅಧ್ಯಕ್ಷ ನಾಗೇಶ್ ನಾಯ್ಕ ಹೇಬಳೆ, ದಲಿತ ಮುಖಂಡ ಮಾರುತಿ ಪಾವಸ್ಕರ್, ಸಾಮಾಜಿಕ ಕಾರ್ಯಕರ್ತ ರಾಮಚಂದ್ರ ಗೊಂಡ ಮುಂತಾದವರು ಅಭಿನಂದಿಸಿದ್ದಾರೆ.
Be the first to comment