ರಾಜ್ಯ ಸುದ್ದಿಗಳು
ಭಟ್ಕಳ
ಇಲ್ಲಿನ ಶೋಟೊಕಾನ್ ಕರಾಟೆ ಇನ್ಸ್ಟಿಟ್ಯೂಟ್ ವತಿಯಿಂದ 10ನೇ ಬ್ಯಾಚ್ ಬ್ಲಾಕ್ ಬೆಲ್ಟ್ ಮತ್ತು ಡಿಗ್ರಿ ವಿತರಣಾ ಸಮಾರಂಭವನ್ನು ದಿ ನ್ಯೂ ಇಂಗ್ಲಿಷ್ ಸ್ಕೂಲ್ ಸಮೀಪದ ಕಮಲಾವತಿ ಮತ್ತು ರಾಮನಾಥ ಶಾನಭಾಗ ಸಭಾಭವನದಲ್ಲಿ ಯಶಶ್ವಿಯಾಗಿ ನಡೆಸಲಾಯಿತು. ಶೋಟೋಕಾನ್ ಕರಾಟೆ ಇನ್ಸಿಟ್ಯೂಟ್ ಇದರ ಕಾನೂನು ಸಲಹೆಗಾರರಾದ ಶ್ರೀ ಮನೋಜ್ ನಾಯ್ಕ ಸಂಸ್ಥೆಯ ಪ್ರಾಸ್ತವಿಕ ವರದಿ ವಾಚನ ಮಾಡಿದರು.ದಿ ನ್ಯೂ ಇಂಗ್ಲಿಷ್ ಸ್ಕೂಲ್ ಭಟ್ಕಳ ಮುಖ್ಯೋಪಾಧ್ಯಾಯರಾದ ಶ್ರೀ ಗಣಪತಿ ಶಿರೂರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಅನಂತರ ಮಾತನಾಡಿದ ಅವರು ಕರಾಟೆ ಇದೊಂದು ಸ್ವರಕ್ಷಣಾ ಕಲೆಯಾಗಿದ್ದು ಇದರ ಪ್ರಯೋಜನವನ್ನು ಯುವಜನತೆಯ ಪಡೆದುಕೊಳ್ಳಬೇಕು ಎಂದು ಕರೆ ನೀಡಿದರು. ಜಿಲ್ಲಾ ಕರಾಟೆ ಸ್ಫೋರ್ಟ್ಸ್ ಅಸೋಸಿಯೇಷನ್ ಅಧ್ಯಕ್ಷರಾದ ಉಮೇಶ್ ಮೊಗೇರ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಅತಿಥಿಗಳಾಗಿ ಡಾ. ಸವಿತಾ ಕಾಮತ್ ವೈದ್ಯಾಧಿಕಾರಿಗಳು ತಾಲೂಕ ಆಸ್ಪತ್ರೆ ಭಟ್ಕಳ, ಶ್ರೀ ಶ್ರೀನಾಥ್ ಪೈ ಪ್ರಾಂಶುಪಾಲರು ಶ್ರೀ ಗುರು ಸುಧಿಂದ್ರ ಕಾಲೇಜ್ ಭಟ್ಕಳ, ಶ್ರೀಮತಿ ಅಮಿತಾ ಶೆಟ್ಟಿ ಪ್ರಾಂಶುಪಾಲರು ಯು. ಬಿ. ಶೆಟ್ಟಿ ಇಂಗ್ಲಿಷ್ ಮೀಡಿಯಂ ಸ್ಕೂಲ್ ಬೈಂದೂರು, ಶ್ರೀಮತಿ ರೂಪ ರಮೇಶ್ ಖಾರ್ವಿ ಮುಖ್ಯೋಪಾಧ್ಯಾಯರು ವಿದ್ಯಾ ಭಾರತಿ ಆಂಗ್ಲ ಮಾಧ್ಯಮ ಶಾಲೆ ಭಟ್ಕಳ ಹಾಗೂ ಮುಖ್ಯಗುರುಗಳಾದ ಶ್ರೀ ಹನ್ಸಿ ಸಿ. ರಾಜಿನ್, ಶ್ರೀ ಈಶ್ವರ ಏನ್.ನಾಯ್ಕ ಅಧ್ಯಕ್ಷರು ಶೋಟೋಕನ್ ಕರಾಟೆ ಇನ್ಸ್ಟಿಟ್ಯೂಟ್ ಭಟ್ಕಳ ಇವರುಗಳು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಹತ್ತನೇ ಬ್ಯಾಚ್ ಕರಾಟೆ ವಿದ್ಯಾರ್ಥಿಗಳಿಗೆ ಬ್ಲಾಕ್ ಬೆಲ್ಟ್ ಮತ್ತು ಕರಾಟೆ ಡಿಗ್ರಿ ವಿತರಣೆ ಮಾಡಲಾಯಿತು.ಕರಾಟೆ ವಿದ್ಯಾರ್ಥಿಗಳಾದ ನೇಹಾ ನಾಗೇಶ್ ಲಮಾಣಿ, ನಿತೇಶ್ ನಾಗೇಶ್ ಲಮಾಣಿ, ನಿತಿನ್ ಲಕ್ಷ್ಮಣ್ ದೇವಾಡಿಗ, ಲಿಖಿತ್ ಲಕ್ಷ್ಮಣ ದೇವಾಡಿಗ, ರಿತೇಶ್ ನಾಯ್ಕ, ಅನನ್ಯ ಟಿ., ಪ್ರಸಾದ್ ಉಮೇಶ್ ನಾಯ್ಕ, ನಿಖಿತಾ ವಿಷ್ಣು ಖಾರ್ವಿ, ಲಾವಣ್ಯ ಪದ್ಮಯ್ಯ ನಾಯ್ಕ, ಅವನಿ ಶ್ರೀನಿವಾಸ್ ಪಡಿಯಾರ್ ಇವರುಗಳು ಬ್ಲಾಕ್ ಬೆಲ್ಟ್ ಪಡೆದುಕೊಂಡರು.ಸುರೇಶ್ ಡಿ. ಮೊಗೇರ್,ಈಶ್ವರ ನಾಗಪ್ಪ ನಾಯ್ಕ, ಉಮೇಶ್ ರಾಮ ಮೊಗೇರ ಇವರುಗಳು 5ನೇ ಡಿಗ್ರಿ ಬೆಲ್ಟ್ ಪಡೆದುಕೊಂಡರು.ಸಂತೋಷ್ ಆಚಾರಿ ಅವರು 4ನೇ ಡಿಗ್ರಿ ಬೆಲ್ಟ್ ಪಡೆದುಕೊಂಡರು.
ನಾಗಶ್ರೀ ವೆಂಕಟೇಶ್ ನಾಯ್ಕ, ರಾಜಶೇಖರ್ ಮಂಜುನಾಥ ಗೌಡ, ಕಾವ್ಯ ವಸಂತ್ ವೈದ್ಯ, ಡಿ ಪ್ರದೀಪ್, ಮನೋಜ ಎಮ್. ನಾಯ್ಕ,ಚಂದ್ರಾ ನಾಯ್ಕ ಇವರುಗಳು 3ನೇ ಡಿಗ್ರಿ ಬೆಲ್ಟ್ ಪಡೆದುಕೊಂಡರು. ಗೋಪಾಲ್ ಮಾದೇವ ನಾಯ್ಕ 2ನೇ ಡಿಗ್ರಿ ಬೆಲ್ಟ್ ಪಡೆದುಕೊಂಡರು.ಯೋಗೇಶ ರಾಜೇಶ್ ನಾಯ್ಕ, ತೇಜಸ್ವಿ ಉಮೇಶ್ ಮೊಗೇರ್, ಹರ್ಷ ಉಮೇಶ್ ಮೊಗೇರ್, ಬರಣಿ ಮೂರ್ತಿ ಆದಿದ್ರಾವಿಡ, ಗಣಪತಿ ಮೂರ್ತಿ ಆದಿದ್ರಾವಿಡ, ಮಹೇಶ್ ರಾಜೇಶ್ ನಾಯ್ಕ ಇವರುಗಳು 1ನೇ ಡಿಗ್ರಿ ಬೆಲ್ಟ್ ಪಡೆದುಕೊಂಡರು.
ಸಭಾಕಾರ್ಯಕ್ರಮದ ಮಧ್ಯದಲ್ಲಿ ವಿದ್ಯಾರ್ಥಿಗಳಿಂದ ಕರಾಟೆ ಡೆಮೋ ಪ್ರದರ್ಶನವನ್ನು ನೀಡಲಾಯಿತು. ಕಾರ್ಯಕ್ರಮದಲ್ಲಿ ಶೋಟೋಕಾನ್ ಕರಾಟೆ ಇನ್ಸ್ಟಿಟ್ಯೂಟ್ ಇದರ ಗೌರವ ಸಲಹೆಗಾರರಾದ ಶ್ರೀ ಗಂಗಾಧರ ನಾಯ್ಕ ಅವರು ಸರ್ವರನ್ನು ಸ್ವಾಗತಿಸಿ ನಿರೂಪಿಸಿದರು. ಗೌರವ ಸಲಹೆಗಾರರಾದ ಶ್ರೀ ಪಾಂಡುರಂಗ ನಾಯ್ಕ ಅವರು ಸರ್ವರನ್ನು ವಂದಿಸಿದರು.
Be the first to comment