ಬಾಗಿಲು ಮುರಿದು ಲಕ್ಷಾಂತರ ರೂಪಾಯಿ ಬೆಲೆಬಾಳುವ ವಸ್ತು ಕಳ್ಳತನ

ವರದಿ-ಕುಮಾರ ನಾಯ್ಕ.ಉಪಸಂಪಾದಕರು

ರಾಜ್ಯ ಸುದ್ದಿಗಳು 

ಭಟ್ಕಳ

ಮನೆಯಲ್ಲಿ ಯಾರೂ ಇಲ್ಲದಿರುವುದನ್ನು ಖಚಿತಪಡಿಸಿಕೊಂಡು ಮನೆಯ ಬಾಗಿಲನ್ನು ಮುರಿದು ಒಳ ಹೊಕ್ಕಿರುವ ಕಳ್ಳರು ಲಕ್ಷಾಂತರ ರೂಪಾಯಿ ನಗದು ಹಾಗೂ ಚಿನ್ನಾಭರಣಗಳೊಂದಿಗೆ ಪರಾರಿಯಾಗಿರುವ ಘಟನೆ ಭಟ್ಕಳದಲ್ಲಿ ನಡೆದಿದೆ.ಕಳ್ಳತನಕ್ಕೆ ಒಳಗಾದ ‘ಗುಲ್ ಈ ನಾಜ್’ ಹೆಸರಿನ ಈ ಮನೆಯು ಎಮ್.ಜಿ.ಇಲಿಯಾಸ್ ಎಂಬುವವರಿಗೆ ಸೇರಿದ್ದಾಗಿದೆ. ಮನೆಯಲ್ಲಿನ ೨ ಕಪಾಟುಗಳನ್ನು ಒಡೆದು ತೆರೆಯಲಾಗಿದ್ದು, ರೂ ೧.೫ ಲಕ್ಷ ನಗದು, ಒಂದು ಚಿನ್ನದ ಸರ, ಒಂದು ಚಿನ್ನದ ಕಿವಿಯೋಲೆ, ಒಂದು ರಿಂಗ್ ಅನ್ನು ಕಳ್ಳರು ಎಗರಿಸಿ ಪರಾರಿಯಾಗಿದ್ದಾರೆ.

CHETAN KENDULI

ಹಣ, ಚಿನ್ನಾಭರಣಗಳಿಗಾಗಿ ಹುಡುಕಾಟ ನಡೆಸಿ ಕಳ್ಳರು ಬಟ್ಟೆ ಬರೆಗಳನ್ನು ಚೆಲ್ಲಾಪಿಲ್ಲಿಯಾಗಿ ಎಸೆದಿರುವುದು ಕಂಡು ಬಂದಿದೆ. ಎಮ್. ಜೆ.ಇಲಿಯಾಸ ಸಹೋದರಿ ಮನೆಯಲ್ಲಿನ ಮದುವೆ ಕಾರ್ಯಕ್ರಮದ ನಿಮಿತ್ತ ಶನಿವಾರ ರಾತ್ರಿ ೯ ಗಂಟೆಯ ಸುಮಾರಿಗೆ ಮನೆಯವರೆಲ್ಲರೂ ಮನೆ ಬಿಟ್ಟು ತೆರಳಿದ್ದು, ರವಿವಾರ ೧೦ ಗಂಟೆಗೆ ವಾಪಸ್ಸಾಗಿದ್ದಾರೆ. ರಾಡ್‌ನ್ನು ಬಳಸಿ ಮನೆಯ ಬಾಗಿಲನ್ನು ಒಡೆದು ತೆರೆಯಲಾಗಿರುವುದು ಕಂಡು ಬಂದಿದೆ.ಭಟ್ಕಳ ಗ್ರಾಮೀಣ ಠಾಣಾ ಎಸೈ ರತ್ನಾ ಕುರಿ ಸಿಬ್ಬಂದಿಗಳೊಡನೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಭಟ್ಕಳದಲ್ಲಿ ಮತ್ತೆ ಮನೆ ಕಳ್ಳತನ ಹೆಚ್ಚುತ್ತಿರುವುದು ಸಾರ್ವಜನಿಕರಲ್ಲಿ ಆತಂಕವನ್ನು ಹೆಚ್ಚಿಸಿದೆ.

Be the first to comment

Leave a Reply

Your email address will not be published.


*