ಜಿಲ್ಲಾ ಸುದ್ದಿಗಳು
ಶಿರಸಿ
ಹುಲೇಕಲ್ ಗುರುವಾರ ದಂದು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಯಲ್ಲಿ ಇಂದಿನಿಂದ ಬಿಸಿಯೂಟ ಯೋಜನೆಯನ್ನು ಪ್ರಾರಂಭಿಸಲಾಯಿತು. ಈ ದಿನ ಸಿಹಿ ಊಟ ನೀಡುವುದರೊಂದಿಗೆ ಕಳೆದ ಒಂದುವರೆ ವರ್ಷದಿಂದ ನಿಂತಿದ್ದ ಬಿಸಿ ಊಟವನ್ನು ಪ್ರಾರಂಭಿಸಲಾಯಿತು.
ಶಾಲೆ ಚಟುವಟಿಕೆ ಹಾಗೂ ಪ್ರಕ್ರಿಯೆಗಳನ್ನು ವೀಕ್ಷಿಸಿ, ಮಕ್ಕಳಿಗೆ ತರಕಾರಿ ಬುಟ್ಟಿ ಯೋಜನೆಯನ್ನು ತಿಳಿಸಿ ಚಾಲನೆ ಗೊಳಿಸಲಾಯಿತು. ಶಾಲಾ ಶಿಕ್ಷಕರು ,ಮುಖ್ಯ ಶಿಕ್ಷಕರು, ಅಡುಗೆ ಸಿಬ್ಬಂದಿಗಳು ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದ್ದು,
ಈ ದಿನ ಶಾಲೆಗೆ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ಬಿಸಿಯೂಟ ಪ್ರಕ್ರಿಯೆಯನ್ನು ವೀಕ್ಷಿಸಿದರು ಕ್ಷೇತ್ರ ಸಂಪನ್ಮೂಲ ಕೇಂದ್ರ ಶಿರಸಿ ಸಂಪನ್ಮೂಲ ವ್ಯಕ್ತಿಗಳಾದ ಗಣೇಶ್ ಹೆಗಡೆ ಮತ್ತು ಶ್ರೀ ದೀಪಕ್ ಗೋಕರ್ಣ ಸಂಪನ್ಮೂಲ ವ್ಯಕ್ತಿ ಶ್ರೀ ಡಿ.ಪಿ ಹೆಗಡೆ, ಶಾಲಾ ಕಮಿಟಿ ಅಧ್ಯಕ್ಷರಾದ ಗಜು ನಾಯ್ಕ್ ಉಪಸ್ಥಿತರಿದ್ದರು .
Be the first to comment