ಎರಡುಕಿಡ್ನಿ ವೈಫಲ್ಯದಿಂದ ಬಳಲುತ್ತಿರುವ ವಿನಾಯಕ ಅವರಿಗೆ ಹೊನ್ನಾವರ ಬಿ.ಎಸ್.ಎನ್.ಡಿ.ಪಿ ತಾಲೂಕ ಘಟಕದಿಂದ ಹಣ ಸಹಾಯ

ವರದಿ-ಕುಮಾರ್ ನಾಯ್ಕ ,ಉಪ ಸಂಪಾದಕರು

ಜಿಲ್ಲಾ ಸುದ್ದಿಗಳು 

 

ಹೊನ್ನಾವರ

CHETAN KENDULI

ಹೊನ್ನಾವರ ತಾಲೂಕಿನ ಗೇರುಸೊಪ್ಪಾದ ವಿನಾಯಕ ಪುರಂದರ ನಾಯ್ಕ ಇವರು ಎರಡೂ ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದು ಶಸ್ತ್ರ ಚಿಕಿತ್ಸೆಗಾಗಿ ಅ೦ದಾಜು ಹತ್ತು ಲಕ್ಷ ರೂಪಾಯಿಗಳು ಎಂದು ಮಣಿಪಾಲದ ತಜ್ಞ ವೈದ್ಯರು ತಿಳಿಸಿರುತ್ತಾರೆ. ಈಗಾಗಲೇ ತಂದೆಯನ್ನು ಕಳೆದುಕೊಂಡ ವಿನಾಯಕ್ ಮತ್ತು ಆತನ ಸಹೋದರನ ಹಾಗೂ ಮನೆಯ ನಿರ್ವಹಣೆ ಜವಾಬ್ದಾರಿಯು ತಾಯಿ ರೇಣುಕಾ ಮೆಲಿರುವುದರಿ೦ದ ಆರ್ಥಿಕ ಸಂಕಷ್ಟದಲ್ಲಿರುವ ತಮ್ಮ ಮಗನ ಕಿಡ್ನಿ ಟ್ರಾನ್ಸ್ ಪ್ಲಾಂಟ್ ಚಿಕಿತ್ಸೆಗಾಗಿ ಧನ ಸಹಾಯ ಮಾಡಿ ಎಂದು ರೇಣುಕಾ ಪುರಂದರ ನಾಯ್ಕ ವಿನಂತಿಸಿದ್ದರು . ಬ್ರಹ್ಮಶ್ರೀ ನಾರಾಯಣ ಗುರು ಧರ್ಮ ಪರಿಪಾಲನ ಸಂಘ ಹೊನ್ನಾವರ (BSNDP) ಇದರ ವತಿಯಿಂದ ಇವರ ಮನೆಗೆ ಭೇಟಿ ನೀಡಿ ಧೈರ್ಯ ತುಂಬಿ ಈ ಕುಟುಂಬಕ್ಕೆ 27,500₹ ರೂಪಾಯಿಗಳನ್ನು ಧನಸಹಾಯ ವನ್ನು ಮಾಡಲಾಯಿತು . ಈ ಸಂದರ್ಭದಲ್ಲಿ ಮಾತನಾಡಿದ BSNDP ಸಂಘಟನೆಯ ತಾಲ್ಲೂಕು ಅಧ್ಯಕ್ಷರಾದ ಧನಂಜಯ ನಾಯ್ಕ ರಾಯಲಕೆರಿ ಸಂಕಷ್ಟದಲ್ಲಿರುವ ಈ ಬಡ ಕುಟುಂಬಕ್ಕೆ ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಧನ ಸಹಾಯ ಮಾಡಿ ಎಂದು ವಿನಂತಿಸಿದರು. ನಮ್ಮ ಸಂಘಟನೆಯ ಕರೆಗೆ ಓಗೊಟ್ಟು ಸ್ಪಂದಿಸಿ ಆರ್ಥಿಕ ನೆರವು ನೀಡಿದ ಆತ್ಮೀಯ ರೆಲ್ಲರಿಗೂ BSNDP ಹೊನ್ನಾವರ ಹಾಗೂ ವಿನಯ್ ಪುರಂದರ್ ನಾಯ್ಕ್ ಕುಟುಂಬದ ವತಿಯಿಂದ ಹೃದಯಪೂರ್ವಕ ಧನ್ಯವಾದಗಳನ್ನು ತಿಳಿಸಿದರು . ಈ ಸಂದರ್ಭದಲ್ಲಿ ಸಂಘಟನೆಯ ಪದಾಧಿಕಾರಿಗಳಾದ ರಾಮನಾಥ ಹೊಸಾಕುಳಿ , ಶ್ರೀನಾಥ್ ನಾಯ್ಕ , ಶ್ರೀನಿವಾಸ್ SN, ಮಂಜುನಾಥ್ ಶರಣ ಹಾಗೂ ಸಂದೀಪ್ ನಾಯ್ಕ್ ಉಪಸ್ಥಿತರಿದ್ದರು

Be the first to comment

Leave a Reply

Your email address will not be published.


*