ರಾಜ್ಯ ಸುದ್ದಿಗಳು
ಚಿತ್ರ ಸಂಗ್ರಹ: ಬಸನಗೌಡ ಗೌಡರ(ಮದರಿ):
ಮುದ್ದೇಬಿಹಾಳ(ಹೊಕ್ರಾಣಿ):
ಉತ್ತರ ಕರ್ನಾಟಕದಲ್ಲಿ ಕೊಡೆಕಲ್ಲ ಬಸವಣ್ಣ ದೇವಸ್ಥಾನ ಲಕ್ಷಾಂತರ ಭಕ್ತರನ್ನು ಹೊಂದಿದ ದೇವಸ್ಥಾನವಾಗಿದೆ. ಇಂತಹ ದೇವಸ್ಥಾನಕ್ಕೂ ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿಗೂ ಸಾಕಷ್ಟು ಸಂಬಂಧವಿದೆ ಎನ್ನುವುದೇ ಈ ವರದಿಯ ವಿಶೇಷವಾಗಿದೆ.
ಹೌದು, ಯಾದಗಿರಿ ಜಿಲ್ಲೆಯ ಸುರುಪುರ ತಾಲೂಕಿನ ಕೊಡೇಕಲ್ಲ ಗ್ರಾಮದಲ್ಲಿನ ಬಸವೇಶ್ವರ ದೇವಸ್ಥಾನಕ್ಕೂ ಮುದ್ದೇಬಿಹಾಳ ತಾಲೂಕಿಗೂ ಅವಿಭಜಯ ಸಂಬಂಧವಿದೆ. ಮುದ್ದೇಬಿಹಾಳ ತಾಲೂಕಿನ ಹೊಕ್ರಾಣಿ (ಅಂದಿನ ಗ್ರಾಮದ ಹೆಸರು ಜ್ವಾರಾಪೂರ) ಗ್ರಾಮದ ಬಸವಣ್ಣನ ಭಕ್ತೆ ಬ್ರಾಹ್ಮನ ಸಮಾಜದ ದೇಶಪಾಂಡೆ ವಂಶಸ್ಥರಾದ ದೇವಮ್ಮನವರೇ ಈ ಸಂಬಂಧಕ್ಕೆ ಕಾರಣಿಭೂತರು.
ಶತಮಾನಗಳ ಹಿಂದೆ ದೇವಮ್ಮನವರು ಬಸವಣ್ಣನವರ ಭಕ್ತರಾಗಿದ್ದು ಹೊಕ್ರಾಣಿ ಗ್ರಾಮದಿಂದ ಕೊಡೇಕಲ್ಲ ಬಸವಣ್ಣ ದೇವಸ್ಥಾನಕ್ಕೆ ದಿನವೂ ಕಾಲ್ನಡಿಗೆಯಲ್ಲಿಯೇ ದರ್ಶನ ಪಡೆದೇ ಅವರು ದಿನನಿತ್ಯದ ಕಾಯಕ ನಡೆಸುತ್ತಿದ್ದರು. ಹಲವು ವರ್ಷಗಳ ನಂತರ ವೃದ್ಯಾಪಕ್ಕೆ ಬಂದ ದೇವಮ್ಮನವರು ಕೊಡೇಕಲ್ಲ ಬಸವಣ್ಣನ ದೇವಸ್ಥಾನದಲ್ಲಿ ಕುಳಿತು ಇನ್ನೂ ಮುಂದೆ ನಿನ್ನ ದರ್ಶನ ಪಡೆಯುವುದು ಸಾದ್ಯವಾಗದಿರಬಹುದು. ಆದ್ದರಿಂದ ನನ್ನನ್ನು ಬೇಗನೇ ನಿನ್ನ ಹತ್ತಿರವೇ ಕರೆಸಿಕೊಂಡು ಬಿಡು ಎಂದು ಅಂಗಲಾಚಿ ಬೇಡಿಕೊಂಡ ಸಂದರ್ಭದಲ್ಲಿ ತಕ್ಷಣವೇ ದೇವಸ್ಥಾನದ ಗರ್ಭಗುಡಿಯಿಂದ ಧ್ವನಿಯೊಂದು ಕೇಳಿಬಂದು “ದೇವಮ್ಮ ನಾನು ನಿನ್ನ ಹಿಂದೆಯೇ ಬರುತ್ತೇನೆ. ನೀನು ದೇವಸ್ಥಾನದಲ್ಲಿರುವ ಈ ಪೆಟ್ಟಿಗೆಯನ್ನು ತೆಗೆದುಕೊಂಡು ಹೋಗು” ಎಂಬ ನುಡಿ ಕೇಳಿಬಂದಿತು.
ಇದನ್ನು ಕೇಳಿಸಿಕೊಂಡ ದೇವಮ್ಮನವರು ದೇವಸ್ಥಾನದಿಂದ ದಿಡೀರನೆ ಪೆಟ್ಟಿಗೆಯನ್ನು ತೆಗೆದುಕೊಂಡು ಹೊರಟರೆ ನನ್ನನ್ನು ನೋಡಿದ ಈ ಗ್ರಾಮದ ಜನರು ಸುಮ್ಮನಿರುತ್ತಾರಾ ಎಂಬ ಪ್ರಶ್ನೆ ಉದ್ಭವವಾಯಿತು. ಇದಕ್ಕೆ ಉತ್ತರಿಸಿದ ಆಕಾಶವಾಣಿ ನುಡಿಯಯು ನಾವು ಹೊರಟಿರುವುದು ಎಲ್ಲರಿಗೂ ಕಾಣುತ್ತದೆ. ಆದರೆ ನಮ್ಮನ್ನು ಯಾರಿಂದಲೂ ಹಿಡಿಯಲು ಸಾದ್ಯವಿಲ್ಲ ಎಂದು ಉತ್ತರಿಸಿತು. ತಕ್ಷಣದಿಂದಲೇ ಪೆಟ್ಟಿಗೆಯನ್ನು ತಮ್ಮ ತಲೆ ಮೇಲೆ ಹೊತ್ತುಕೊಂಡು ಜ್ವಾರಾಪೂರದತ್ತ ನಡೆದರು. ದೇವಮ್ಮನವರು ಪೆಟ್ಟಿಗೆಯನ್ನು ಹೊತ್ತುಕೊಂಡು ಹೋಗುವುದನ್ನು ಕಂಡ ಗ್ರಾಮದ ಜನರು ದಿನವೂ ದೇವರ ದರ್ಶನ ಪಡೆದು ಬರಿಗೈಯಿಂದಲೇ ಹೋಗುತ್ತಿದ್ದ ಅಜ್ಜಿಯು ಇಂದು ಪೆಟ್ಟಿಗೆಯನ್ನು ತೆಗೆದುಕೊಂಡು ಹೋಗುತ್ತಿದ್ದಾಲೆ ಎಂದು ಹೇಳಿ ದೇವಮ್ಮನವರನ್ನು ಹಿಡಿಯಲು ಹಿಂಬಾಲಿಸಿದರು. ಆದರೆ ದೇವಮ್ಮನವರು ಮಾತ್ರ ಯಾರಿಗೂ ಸಿಗಲಿಲ್ಲಾ. ಅಲ್ಲದೇ ಕೊಡೇಕಲ್ಲ ಗ್ರಾಮದಿಂದ ಪೆಟ್ಟಿಗೆ ತೆಗೆದುಕೊಂಡು ಹೊರಟ ದೇವಮ್ಮನವರು ದಾರಿ ತಪ್ಪಿ ಮುದ್ದೇಬಿಹಾಳ ತಾಲೂಕಿನ ತಮ್ಮ ತವರು ಮನೆಯಾದ ಕವಡಿಮಟ್ಟಿಯತ್ತ ಸಾಗಿದ್ದರು. ನಂತರ ಅರಿತುಕೊಂಡು ಬಸವಣ್ಣನವರಿಗೆ ಮಾಹಿತಿ ಪಡೆದ ಅವರು ನೀನು ನಿಂತ ಜಾಗದಿಂದ ಬಲಕ್ಕೆ ತೆರಲು ಎಂದು ನುಡಿದ ಆಕಾಶವಾಣಿಯಂತೆ ದೇವಮ್ಮನವರು ಮತ್ತೆ ತಮ್ಮ ದಾರಿಯನ್ನು ಸಾಗಿಸಿ ಜ್ವಾರಾಪೂರ(ಹೊಕ್ರಾಣಿ) ಗ್ರಾಮದ ಅಗಸಿ ಬಾಗಲಿಗೆ ಬಂದು ತಲುಪಿದರು. ಇವರನ್ನು ಹಿಂಬಾಲಿಸಿಕೊಂಡು ಬಂದ ಜನರನ್ನು ಮರಳಿ ಕಳುಹಿಸಬೇಕು ಎಂಬ ಉದ್ದೇಶದಿಂದ ದೇವಮ್ಮನವರು ಗ್ರಾಮದ ಅಗಸಿ ಬಾಗಿಲಯನ್ನು ಬಂದ ಮಾಡಿ ಅಗಸಿ ಬಾಗಿಲ ಒಳಗೆ ಹೊಕ್ಕರೆ ಒಂದಾಣೆ ಎಂದು ಹೇಳಿದರು. ಇದನ್ನು ಕೇಳಿಸಿಕೊಂಡ ಜನರು ತಾವು ಬಂದ ದಾರಿಗೆ ಮರಳಿ ನಡೆದರು. ದೇವಮ್ಮನವರು ತಾವು ಕೊಡೇಕಲ್ಲ ಗ್ರಾಮದಿಂದ ತಂದ ಪೆಟ್ಟಿಗೆಯನ್ನು ತಮ್ಮ ಮನೆಯೊಳಗೆ ಪ್ರತಿಷ್ಠಾಪಿಸಿದರು. ಅಂದಿನಿಂದ ಜ್ವಾರಾಪೂರ ಗ್ರಾಮಕ್ಕೆ ಹೊಕ್ರೆ ಒಂದಾಣೆ ಎಂಬ ಹೆಸರುವಾಸಿಯಾಗಿ ಇಂದು ಹೊಕ್ರಾಣಿ ಎಂದು ನಾಮಕರಣಗೊಂಡಿದೆ.
ವಿಶೇಷ ದೇವಸ್ಥಾನ:
ತಮ್ಮ ಪೂರ್ವಜರಿಂದ ಬಂದಂತಹ ಬಸವಣ್ಣನ ಪೆಟ್ಟಿಗೆಯನ್ನು ಪೂಜಿಸುತ್ತಾ ಬಂದಿರುವ ಹೊಕ್ರಾಣಿ ಗ್ರಾಮದ ದೇಶಪಾಂಡೆ ವಂಶಸ್ಥರು ಸದ್ಯಕ್ಕೆ ಪೆಟ್ಟಿಗೆಗೆ ಒಂದು ಗದ್ದುಗೆಯನ್ನು ನಿರ್ಮಿಸುವುದಲ್ಲದೇ ಬಸವಣ್ಣನ ದೇವಸ್ಥಾನವನ್ನೂ ಕಟ್ಟಿಸಿ ಭಕ್ತರಿಗೆ ದರ್ಶನ ಭಾಗ್ಯ ನೀಡಿದ್ದಾರೆ. ಅಂದಿನಿಂದಲೂ ಪ್ರತಿ ವರ್ಷ ಯಗಾದಿ ಹಬ್ಬದ ಮರುದಿನ ಬಸವಣ್ಣನ ಜಾತ್ರೆಯನ್ನು ನೆಡೆಸಿಕೊಂಡು ಬರುತ್ತಿದ್ದಾರೆ. ಜಾತ್ರೆಗೆ ವಿಜಯಪುರ ಜಿಲ್ಲೆ ಸೇರಿದಂತೆ ಯಾದಗಿರಿ ಜಿಲ್ಲೆಯ ಜನರು ಆಗಮಿಸಿ ಬಸವಣ್ಣನವರ ದರ್ಶನವನ್ನು ಪಡೆದು ಪುಣಿತರಾಗುತ್ತಿದ್ದಾರೆ.
ವಿಜೃಂಭನೆಯ ಜಾತ್ರೆ:
ಹೊಕ್ರಾಣಿ ಗ್ರಾಮದಲ್ಲಿ ಅಲ್ಪ ಮನೆಗಳಿದ್ದರೂ ಪ್ರತಿ ವರ್ಷ ನಡೆಯುವ ಜಾತ್ರೆಯನ್ನು ಬಹಳ ವಿಜೃಂಭನೆಯಿಂದ ಆಚರಣೆ ಮಾಡಲಾಗುತ್ತಿದೆ. ಈ ಜಾತ್ರೆಗೆ ಕೇವಲ ಹೊಕ್ರಾಣಿ ಗ್ರಾಮಸ್ಥರು ಮಾತ್ರವಲ್ಲದೇ ಸುತ್ತಮುತ್ತಲಿನ ಜಿಲ್ಲೆಯ ಭಕ್ತರೂ ಕೈಜೋಡಿಸಿ ಜಾತ್ರೆಯನ್ನು ಯಶಸ್ವಿಯನ್ನಾಗಿಸುತ್ತಾ ಬರುತ್ತಿದ್ದಾರೆ ಎಂದು ಗ್ರಾಮದ ಪ್ರಮುಖ ಉಮಾಶಂಕರ ವಿನಾಯಕರಾವ್ ದೇಶಪಾಂಡೆ, ಗ್ರಾಪಂ ಸದಸ್ಯರಾದ ರಾಚಪ್ಪ ಮಡಿವಾಳಪ್ಪ ಜಗಲಿ, ಹುಸೇನಸಾ ಮೊಮ್ಮಸಾ ಗುರಿಕಾರ, ಪೂಜಾರಿಯವರಾದ ಕಲ್ಯಾಣಪ್ಪ ಹೂಗಾರ, ನಿಂಗಪ್ಪ ಬಿರಾದಾರ, ಬಸವರಾಜ ಬಿರಾದಾರ, ಕಾಶಣ್ಣ ಹೈದರಸಾ ತಾಳಿಕೋಟಿ, ಕರಕಪ್ಪ ಬಸಪ್ಪ ಜಗಲಿ ಸೇರಿದಂತೆ ಅನೇಕ ಗ್ರಾಮದ ಪ್ರಮುಖರು ತಿಳಿಸಿದ್ದಾರೆ.
“ನಮ್ಮ ಪೂರ್ವಜರು ಮಾಡಿಕೊಂಡು ಬರುತ್ತಿದ್ದ ಬಸವಣ್ಣನವರ ಜಾತ್ರೆಯನ್ನು ನಾವೂ ಮುಂದುವರೆಸಿಕೊಂಡು ಬರುತ್ತಿದ್ದೇವೆ. 2017ರಲ್ಲಿ ನೂತನವಾಗಿ ದೇವಸ್ಥಾನ ನಿರ್ಮಿಸಿದ್ದು ಸುತ್ತಮುತ್ತಲಿನ ಜಿಲ್ಲೆಯ ಜನರು ದರ್ಶನಕ್ಕೆ ಆಗಮಿಸಿ ತಮ್ಮ ಹರಕೆಯನ್ನು ತಿರಿಸಿಕೊಳ್ಳುತ್ತಿದ್ದಾರೆ. ಆದರೆ ದೇವಸ್ಥಾನಕ್ಕೆ ಇನ್ನೂ ಹೆಚ್ಚಿನ ಸೌಲಭ್ಯವನ್ನು ಒದಗಿಸಬೇಕಾಗಿದೆ. ಹಿಂದಿನ ದಿನಗಳಲ್ಲಿ ನಮ್ಮ ವಂಶಕ್ಕೆ ಇದ್ದ ಅಧಿಕಾರ ಇಂದಿನ ದಿನಗಳಲ್ಲಿ ಇಲ್ಲಾ. ಆದ್ದರಿಂದ ಈ ದೇವಸ್ಥಾನದತ್ತ ಜನಪ್ರತಿನಿಧಿಗಳು ಗಮನಹರಿಸಿ ದೇವಸ್ಥಾನಕ್ಕೆ ಇನ್ನೂ ಹೆಚ್ಚಿನ ಸೌಲಭ್ಯವನ್ನು ಒದಗಿಸಬೇಕಾಗಿದೆ.”
-ಸುಹಾಸ ಕಾಳಿಂಗರಾವ್ ದೇಶಪಾಂಡೆ.
Be the first to comment