ಮಹೇಶ್ವರಮ್ಮ ದೇವಾಲಯದ ಅಭಿವೃದ್ಧಿಗಾಗಿ ಎಸ್.ಬಿ.ಗ್ರೂಪ್ ನ ಮುಖ್ಯಸ್ಥ ಎಂ.ಸುರೇಶ್ ಅವರು 2 ಲಕ್ಷ ಚೆಕ್ ನೀಡಿದರು

ವರದಿ ಗುರುಮೂರ್ತಿ ಬೂದಿಗೆರೆ

ರಾಜ್ಯ ಸುದ್ದಿಗಳು 

 

ದೇವನಹಳ್ಳಿ

CHITAN KENDULI

ಸಮಾಜದಲ್ಲಿ ಧಾರ್ಮಿಕ ಹಾಗೂ ಶೈಕ್ಷಣಿಕ ಕಾರ್ಯಗಳಿಗೆ ಸಹಕಾರ ನೀಡುವ ಮೂಲಕ ಜನರಲ್ಲಿ ಸಾಮರಸ್ಯ ಬೆಸೆಯುವುದರ ಜೊತೆಗೆ ಭಕ್ತಿ ಭಾವನೆ ಬೆಳೆಸಿ ಮಾನಸಿಕ ನೆಮ್ಮದಿ ಮೂಡಿಸಬೇಕಿದೆ ಎಂದು ಎಸ್.ಬಿ.ಗ್ರೂಪ್ ನ ಮುಖ್ಯಸ್ಥ ಎಂ.ಸುರೇಶ್ ಹೇಳಿದರು.ಚನ್ನರಾಯಪಟ್ಟಣ ಹೋಬಳಿ ಬೂದಿಗೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಂದರಹಳ್ಳಿ ಗ್ರಾಮದಲ್ಲಿ ನಿರ್ಮಾಣ ಮಾಡುತ್ತಿರುವ ಮಹೇಶ್ವರಮ್ಮ ದೇವಾಲಯದ ಅಭಿವೃದ್ಧಿಗಾಗಿ 2 ಲಕ್ಷ ಮೊತ್ತದ ಚೆಕ್ ವಿತರಣೆ ಮಾಡಿಅವರುಮಾತನಾಡಿದರು.ಕೊರೊನಾದಿಂದಾಗಿ ದೇಶದ ಜನರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಧಾರ್ಮಿಕ ಕೇಂದ್ರಗಳು ಕೂಡ ಆದಾಯವಿಲ್ಲದೆ ಅಭಿವೃದ್ಧಿ ಕಾರ್ಯಗಳು ನಿಂತು ಹೋಗಿವೆ. ಗ್ರಾಮೀಣ ಭಾಗದ ದೇವಾಲಯಗಳ ನಿರ್ಮಾಣದಿಂದ ಹಿಂದೂ ಸಂಪ್ರದಾಯ, ಸಾಂಸ್ಕೃತಿಕ, ಪರಂಪರೆಯನ್ನು ಉಳಿಸಿ ಬೆಳೆಸಲು ಸಾಧ್ಯವಾಗುತ್ತದೆ.

ಗ್ರಾಮಗಳಲ್ಲಿ ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡುವ ಮೂಲಕ ಜನರಲ್ಲಿ ಸಾಮರಸ್ಯ ಮೂಡಿಸಬೇಕಾದರೆ ಪುರಾತನ ದೇವಾಲಯಗಳನ್ನು ಸಂರಕ್ಷಣೆ ಮಾಡುವುದು ಅಗತ್ಯವಾಗಿದೆ. ದೇವಾಲಯಗಳು ಧಾರ್ಮಿಕ ಹಾಗೂ ಆದ್ಯಾತ್ಮಿಕ ಚಟುವಟಿಕೆಗಳ ತಾಣವಾಗಿದ್ದು, ಅವುಗಳನ್ನು ಉತ್ತಮ ಸ್ಥಿತಿಯಲ್ಲಿ ಇರಿಸಿಕೊಳ್ಳುವುದು ಸಮಾಜದ ಪ್ರತಿಯೊಬ್ಬರ ಕರ್ತವ್ಯವಾಗಿದೆ ಎಂದರು.ಗ್ರಾಮ ಪಂಚಾಯಿತಿ ಸದಸ್ಯ ರಾಮಾಂಜನೇಯದಾಸ್ ಮಾತನಾಡಿ, ಸ್ಥಳೀಯ ದಾನಿಗಳ ನೆರವಿನಿಂದ ದೇವಾಲಯದ ಅಭಿವೃದ್ಧಿ ಕೆಲಸಗಳನ್ನು ನಡೆಸಲಾಗುವುದು. ಇದರಿಂದ ಗ್ರಾಮದ ಜನರಲ್ಲಿ ಸೋದರತ್ವ ಭಾವನೆ ಮೂಡಿಸಿ ಎಲ್ಲರಲ್ಲೂ ಒಮ್ಮತದ ವಾತಾವರಣ ನಿರ್ಮಾಣ ಮಾಡಲು ಸಹಕಾರಿಯಾಗುತ್ತದೆ. ಸ್ಥಳೀಯರು ಕೂಡಾ ದೇವಾಲಯದ ಸರ್ವತೋಮುಖ ಅಭಿವೃದ್ಧಿಗೆ ಸಹಕಾರ ನೀಡಬೇಕು ಎಂದರು.ಗ್ರಾಮ ಪಂಚಾಯಿತಿ ಸದಸ್ಯರಾದ ಕೃಷ್ಣಮ್ಮಬಾಬು, ವರಲಕ್ಷ್ಮಮ್ಮ, ಮುಖಂಡರಾದ ಶ್ರೀನಿವಾಸ್, ಚಂದ್ರಪ್ಪ, ದೇವರಾಜ್, ಕೆಂಪರಾಜ್, ಕುಮಾರ್, ಭೈರೇಗೌಡ, ಜಗದೀಶ್, ಇದ್ದರು

Be the first to comment

Leave a Reply

Your email address will not be published.


*