ಕಲಬುರಗಿ : ಕರ್ನಾಟಕ ಪ್ರದೇಶ ಅಖಿಲ ಭಾರತೀಯ ಕೋಲಿ ಸಮಾಜ ಸಂಘದ ಧಾರವಾಡದ ಜಿಲ್ಲಾಧ್ಯಕ್ಷರನ್ನಾಗಿ ಅಶೋಕ ಕುಮಾರ ರವರನ್ನು ರಾಜ್ಯಾಧ್ಯಕ್ಷರಾದ ದತ್ತಾತ್ರೇಯ ರೆಡ್ಡಿ ನೇಮಕ ಮಾಡಿ ಆದೇಶ ಮಾಡಿದದ್ದಾರೆ. ಕರ್ನಾಟಕ ರಾಜ್ಯದ ಮೂರನೆ ಅತೀ ದೊಡ್ಡ ಸಮಾಜ ಕೋಲಿ ಸಮಾಜವಾಗಿದು ಅಖಿಲ ಭಾರತೀಯ ಕೋಲಿ ಸಮಾಜ ಸಂಘಟನೆಯು ದೇಶ ಎಲ್ಲ ರಾಜ್ಯದಲೂ ಸಂಘಟನೆಯನ್ನು ಹೊಂದಿದ್ದು ರಾಜ್ಯದಲ್ಲೂ 50 ವರ್ಷಗಳಿಂದ ಕಾರ್ಯನಿರ್ವಾಹಣೆ ಮಾಡುತ್ತಿದೆ.ದಿ. ಮಾಜಿ ಸಂಸದ ಕಾಳಿಂಗಪ್ಪ ಚೌಧರಿ ಯವರು ಅಖಿಲ ಭಾರತೀಯ ಕೋಲಿ ಸಮಾಜ ಸಂಘಟನೆಯನ್ನು ವಿವಿದ ರಾಜ್ಯದ ಸಮಾಜ ಮುಖಂಡರ ಸಹಯೋಗದೊಂದಿಗೆ ದೆಹಲಿಯಲ್ಲಿ ಸ್ಥಾಪಿಸಿದ್ದಾರೆ.
ದಿವಂಗತ ವಿಠ್ಠಲ ಹೆರೂರು,ದಿವಂಗತ ಬಿ ನಾರಾಯಣ್ ರಾವ್ ಹಾಗೂ ಅನೇಕ ಜನ ಸಮಾಜದ ಹಿರಿಯರು ಸಂಘದ ಜೊತೆ ನಿಕಟ ಪೂರ್ವ ಸಂಬಂಧ ಹೊಂದಿದರು. ಸಮಾಜದ ಸಮಗ್ರ ಅಭಿವೃದ್ಧಿಗೆ ಅಖಿಲ ಭಾರತೀಯ ಕೋಲಿ ಸಮಾಜ ಸಂಘ ಶ್ರಮಿಸಲಿದೆ.ಈಗಾಗಲೇ ಜಿಲ್ಲಾಧ್ಯಕ್ಷರನು ನೇಮಿಸಲಾಗುತ್ತಿದೆ ಮುಂದೆ ಪ್ರತಿ ತಾಲ್ಲೂಕಲ್ಲೂ ಉತ್ತಮ ವ್ಯಕ್ತಿಗಳ ಮುಂದಾಳತ್ವದಲ್ಲಿ ತಾಲ್ಲೂಕ ಸಂಘಗಳು ರಚಿಸಲಾಗುವುದು ಎಂದು ಹೇಳಿದರು
Be the first to comment