ರಾಜ್ಯ ಸುದ್ದಿಗಳು
ಕಾರವಾರ
ಕರ್ನಾಟಕ ಪ್ರೆಸ್ ಕ್ಲಬ್ ಸಂಘದಲ್ಲಿ ಪತ್ರಿಕಾ ಮಾಧ್ಯಮ ಮತ್ತು ದೃಶ್ಯ ಮಾಧ್ಯಮದ , ಒನ್ಲೈನ್ ಸುದ್ದಿ ಮೀಡಿಯಾ ಪತ್ರಕರ್ತರು , ಮಾಸ ಪತ್ರಿಕೆ ವರದಿಗಾರರು , ಪಾಕ್ಷಿಕ ಪತ್ರಿಕೆ ವರದಿಗಾರರು ಎಲ್ಲರಿಗೂ ಸದಸ್ಯತ್ವಕ್ಕೆ ಅವಕಾಶ ಮಾಡಿಕೊಡಲಾಗುವುದು.ಕರ್ನಾಟಕ ಪ್ರೆಸ್ ಕ್ಲಬ್ 22/11/2017 ರಂದು ಕರ್ನಾಟಕ ಸರ್ಕಾರದ ಸಹಕಾರ ಇಲಾಖೆ ಬೆಗಳೂರು ನಗರ ಜಿಲ್ಲೆಯ ಸಂಘಗಳ ಜಿಲ್ಲಾ ನೋಂದಣಿ ಅಧಿಕಾರಿಗಳ ಕಚೇರಿಯಲ್ಲಿ ನೋದೋಣಿಯಾಗಿದೆ. ಕರ್ನಾಟಕ ಪ್ರೆಸ್ ಕ್ಲಬ್ 5 ವರ್ಷದ ಹಳೆಯ ಸಂಘವಾಗಿದೆ ನಮ್ಮ ಈ ಸಂಘದಲ್ಲಿ ಕರ್ನಾಟಕ ರಾಜ್ಯದಾದ್ಯಂತ 3000ಕ್ಕೂ ಹೆಚ್ಚು ಪತ್ರಕರ್ತರು ಸದಸ್ಯರು ಇದ್ದು , ರಾಜ್ಯಾದ್ಯಂತ 19 ಜಿಲ್ಲೆಗಳಲ್ಲಿ ಸಂಘ ಜಿಲ್ಲಾ ಕಮೀಟಿ ಹೊಂದಿದ್ದು , ನೂರಾರು ಕಡೆ ತಾಲೂಕ ಸಮಿತಿ ಹೊಂದಿದೆ. ಯಾವುದೇ ಒಂದು ನಕಲಿತನ ಇಲ್ಲದಂತ ಸಂಘವಾಗಿದೆ. ನಮ್ಮ ಸಂಘದ ಯಾವುದೇ ಒಬ್ಬ ವ್ಯಕ್ತಿ ನಕಲಿತನ ಮಾಡಿದ್ದು ಕಂಡುಬಂದಲ್ಲಿ ಅವರನ್ನು ಸಂಘದಿಂದ ತೆಗೆದುಹಾಕಲಾಗುವುದು .ನಮ್ಮ ಸಂಘ ಬಡ ಪತ್ರಕರ್ತರ ಜನರ ಏಳಿಗೆಗೆ ಮತ್ತು ಸಾರ್ವಜನಿಕರ ಕಷ್ಟಕಾರ್ಪಣ್ಯಗಳಿಗೆ ಯಾವತ್ತು ಸಿದ್ಧವಾಗಿದೆ. ನಮ್ಮ ಈ ಸಂಘದಲ್ಲಿ ಪತ್ರಿಕಾ ಮಾಧ್ಯಮ ಮತ್ತು ದೃಶ್ಯ ಮಾಧ್ಯಮದ , ಒನ್ಲೈನ್ ಸುದ್ದಿ ಮೀಡಿಯಾ ಪತ್ರಕರ್ತರು , ಮಾಸ ಪತ್ರಿಕೆ ವರದಿಗಾರರು , ಪಾಕ್ಷಿಕ ಪತ್ರಿಕೆ ವರದಿಗಾರರು ಎಲ್ಲರಿಗೂ ಸದಸ್ಯತ್ವಕ್ಕೆ ಅವಕಾಶ ಮಾಡಿಕೊಡಲಾಗುವುದು ಎಂದು ಕರ್ನಾಟಕ ಪ್ರೆಸ್ ಕ್ಲಬ್ ನ ಉತ್ತರ ಕನ್ನಡದ ಜಿಲ್ಲಾಧ್ಯಕ್ಷ ಕುಮಾರ್ ಕುಮಾರ ನಾಯ್ಕಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Be the first to comment