ಬಸ್ ಬಂದ್ ಹಿನ್ನೆಲೆ ಪರದಾದಿಡ ಪ್ರಯಾಣಿಕರು….!!! ಪುರಸಭೆ ಅಧಿಕಾರಿಗಳ ವಿರುದ್ಧ ಗರಂ ಆದ ಖಾಸಗಿ ವಾಹನ ಸಂಚಾರಕರು…!!!

ವರದಿ: ಚೇತನ ಕೆಂದೂಳಿ, ಸುದ್ದಿ ಸಂಪಾದಕರು

ಜಿಲ್ಲಾ ಸುದ್ದಿಗಳು

ಮುದ್ದೇಬಿಹಾಳ:

CHETAN KENDULI

ರಾಜ್ಯಾದ್ಯಂತ 6ನೇ ವೇತನ ಜಾರಿ ಮಾಡುವಂತೆ ಸಾರಿಗೆ ನೌಕರರು ನಡೆಸಿದ ಮುಷ್ಕರ ಹಿನ್ನೆಯಲ್ಲಿ ತಾಲೂಕಿನ ಬಸ್ ಸಂಚಾರ ಸಂಪೂರ್ಣ ಸ್ಥಗಿತಗೊಂಡ ಹಿನ್ನೆಲೆಯಲ್ಲಿ ಪ್ರಯಾಣಿಕರು ಪರದಾಟ ನಡೆಸಿದರು. ಬಸ್ ಬಂದ್ ಹಿನ್ನೆಲೆ ಖಾಸಗಿ ವಾಹನಕಾರರು ಪ್ರಯಾಣಿಕರಿಂದ ಎರಡುರಷ್ಟು ಹಣ ವಸೂಲಿಗೆ ಮುಂದಾಗಿದ್ದು ಕೆಲವರು ಆಕ್ರೋಶವನ್ನು ವ್ಯಕ್ತಪಡಿಸಿದರು.



ಮುದ್ದೇಬಿಹಾಳ ಸಾರಿಗೆ ಇಲಾಖೆಯಲ್ಲಿ ಒಟ್ಟು 323 ಜನ ಚಾಲಕ ಹಾಗೂ ನಿರ್ವಾಹಕರಾಗಿ ಸೇವೆಯಲ್ಲಿಸುತ್ತಿದ್ದು ಬುಧವಾರ ಯಾವಬ್ಬ ಸಿಬ್ಬಂದಿಯೂ ಸೇವೆ ಹಾಜರಾಗದೇ ಮುಷ್ಕರಕ್ಕೆ ಬೆಂಬವನ್ನು ಸೂಚಿಸಿದರು. ಮಂಗಳವಾರ ರಾತ್ರಿ ಸಂಚಾರ ನೆಡೆಸಿದ್ದ ಕೆಲ ಬಸ್‌ಗಳು ಬೆಳಿಗ್ಗೆ ಮುದ್ದೇಬಿಹಾಳ ಬಸ್ ನಿಲ್ದಾಣಕ್ಕೆ ಆಗಮಿಸಿದ್ದವು. ಇನ್ನೂ ಗ್ರಾಮೀನ ಪ್ರದೇಶದಿಂದ ಬೆಳಿಗ್ಗೆ ಆಗಮಿಸಿದ ಗ್ರಾಮಸ್ಥರು ಮರಳಿ ತಮ್ಮ ಗ್ರಾಮಕ್ಕೆ ಕಂಗಾಲಾದ ಪ್ರಯಾಣಿಕರು ಅನಿವಾರ್ಯವಾಗಿ ಖಾಸಗಿ ವಾಹನಕಾರರಿಗೆ ಎರಡುರಷ್ಟು ಹಣ ನೀಡಿ ಪ್ರಯಾಣ ಬೆಳೆಸಿದ್ದು ಕಂಡು ಬಂದಿತು.


ಸಾರಿಗೆ ಬಸ್ ಸಂಚಾರ ಆರಂಭಿಸಿ:
ಸಾರಿಗೆ ಬಸ್ ಸಂಚಾರದಿಂದ ಪಟ್ಟಣಕ್ಕೆ ಪ್ರಯಾಣಿಕರು ಆಗಮಿಸುತ್ತಾರೆ. ಇಂತಹ ಪ್ರಯಾಣಿಕರಿಂದಲೇ ಆಟೋಗಳ ಸಂಚಾರ ಪ್ರಾರಂಭವಾಗುತ್ತದೆ. ಆದರೆ ಬುಧವಾರ ಬಸ್ ಬಂದ್ ಆದ ಕಾರಣ ಮುದ್ದೇಬಿಹಾಳ ಪಟ್ಟಣದ ಆಟೋ ಚಾಲಕರಿಗೆ ತುಂಬಲಾರದ ನಷ್ಟವಾಗಿದೆ. ಕೂಡಲೇ ಸಾರಿಗೆ ನೌಕರರೊಂದಿಗೆ ಚರ್ಚಿಸಿ ಅವರ ಬೇಡಿಕೆಗೆ ಸ್ಪಂಧಿಸಿ ಬಸ್ ಸಂಚಾರವನ್ನು ಪ್ರಾರಂಭ ಮಾಡಿಸಬೇಕು. ಇಲ್ಲವಾದಲ್ಲಿ ಸಾರಿಗೆ ಮುಷ್ಕರದಿಂದ ಆಟೋ ಚಾಲಕರೂ ಬೀದಿಗೆ ಬರಬೇಕಾಗುತ್ತದೆ ಎಂದು ಆಟೋ ಚಾಲಕರು ಹೇಳಿದ್ದಾರೆ.



ಸಂಕಷ್ಟ ಅನುಭವಿಸಿದ ಬಸ್ ನಿಲ್ದಾಣದ ವ್ಯಾಪಾರಸ್ಥರು:
ಮುದ್ದೇಬಿಹಾಳ ಬಸ್ ನಿಲ್ದಾಣದಲ್ಲಿ ವ್ಯಾಪಾರಕ್ಕಾಗ ಬಾಡಿಗೆ ಪಡೆದಿರುವ ಅಂಗಡಿಕಾರರು ಬುಧವಾರ ನಡೆದ ಮುಷ್ಕರದಿಂದ ಕಂಗಾಲಾಗಿದ್ದಾರೆ. ದಿನಕ್ಕೆ 500 ರಿಂದ 1000 ರೂಪಾಯಿಯನ್ನು ಬಾಡಿಗೆ ರೂಪದಲ್ಲಿ ಸಾರಿಗೆ ಇಲಾಖೆಗೆ ಭರಿಸಲಾಗುತ್ತಿದೆ. ಆದರೆ ಏಕಾಏಕಿ ಬಸ್ ಬಂದ್ ಆದ ಕಾರಣ ನಿಲ್ದಾಣದಲ್ಲಿ ಯಾರೊಬ್ಬ ಗ್ರಾಹಕನೂ ವ್ಯಾಪಾರಕ್ಕೆ ಬಂದಿಲ್ಲ. ಇದರಿಂದ ದಿನದ ವ್ಯಾಪಾರ ನಷ್ಟವಾಗಿದೆ. ಇದು ಹೀಗೆ ಮುಂದು ವರೆದರೆ ನಾವು ಹೊಟ್ಟೆಗೆ ಏನು ತಿನ್ನಬೇಕು ಎಂದು ಅಂಗಡಿಕಾರರು ತಮ್ಮ ಅಳಲನ್ನು ತೋಡಿಕೊಂಡರು.



ಪುರಸಭೆ ಅಧಿಕಾರಿಗಳ ವಿರುದ್ಧ ವಾಗ್ವಾದಕ್ಕೆ ಇಳಿದ ಸಾರ್ವಜನಿಕರು:
ಬುಧವಾರ ಬಸ್ ಸಂಚಾಕರ ಸ್ಥಗಿತ ಹಿನ್ನೆಲೆಯಲ್ಲಿ ದ್ವಿಚಕ್ರ ವಾಹನ ಸೇರಿದಂತೆ ಖಾಸಗಿ ವಾಹಕ್ಕೆ ಮೊರೆಹೋದ ಪ್ರಯಾಣಿಕರಿಗೆ ಮುದ್ದೇಬಿಹಾಳ ಪುರಸಭೆ ಅಧಿಕಾರಿಗಳಿಂದ ಮಾಸ್ಕ ಧರಿಸದವರಿಗೆ 100 ರೂಪಾಯಿ ದಂಡ ಹಾಕುವುದನ್ನು ಖಂಡಿಸಿದ ಸಾರ್ವಜನಿಕರು ಅಧಿಕಾರಿಗಳ ವಿರುದ್ಧ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದ ಘಟನೆ ನಡೆಯಿತು.



ಹೆಚ್ಚು ಪರದಾಟ ಅನುಭವಿಸಿದ ಅನಾರೋಗ್ಯಸ್ಥರು:
ಆರೋಗ್ಯ ಚಿಕಿತ್ಸೆ ಪಡೆಯಲು ವಿಜಯಪುರ ಹಾಗೂ ಬಾಗಲಕೋಟ ಜಿಲ್ಲಾ ಆಸ್ಪತ್ರೆಗೆ ತೆರಲಲು ಬೆಳಿಗ್ಗೆ ಮುದ್ದೇಬಿಹಾಳ ಬಸ್ ನಿಲ್ದಾಣಕ್ಕೆ ಆಗಮಿಸಿದ್ದ ನೂರಾರು ಅನಾರೋಗ್ಯಸ್ಥರು ಹಾಗೂ ಬಾಣಂತಿಯರು ಬಸ್ ಬಂದ್ ಹಿನ್ನೆಲೆ ಪರದಾಟ ಅನುಭವಿಸಿದರು. ಹಣವಿದ್ದವರು ಖಾಸಗಿ ವಾಹನವನ್ನು ಬಾಡಿಗೆ ಪಡೆದು ಆಸ್ಪತ್ರೆಗೆ ತರಲಿದರೆ ಹಣವಿಲ್ಲದವರು ಮನೆಗೆ ಮರಳಿ ಹೋದ ಘಟನೆ ಕಂಡು ಬಂದಿತು.

Be the first to comment

Leave a Reply

Your email address will not be published.


*