ರಾಜ್ಯ ಸುದ್ದಿಗಳು
ದೇವನಹಳ್ಳಿ
ದೇವನಹಳ್ಳಿ ತಾಲೂಕಿನ ಬಸವನಪುರ ಗ್ರಾಮದಲ್ಲಿ ಸುಮಾರು ವರ್ಷಗಳಿಂದ ಶುದ್ಧ ಕುಡಿಯುವ ನೀರಿನ ಘಟಕ ವ್ಯವಸ್ಥೆ ಇಲ್ಲದೆ ಸುಮಾರು ೧೨೦ಕ್ಕೂ ಹೆಚ್ಚು ಕುಟುಂಬಗಳು ಪರದಾಡುವ ಪರಿಸ್ಥಿತಿ ಇದೆ. ಜಾಲಿಗೆ ಗ್ರಾಪಂ ವತಿಯಿಂದ ದಿನವೂ ನೀರನ್ನು ಬಿಟ್ಟರೂ ಸಹ ಶುದ್ಧ ಕುಡಿಯುವ ನೀರಿನ ಘಟಕವಿಲ್ಲದೆ, ಅಲ್ಲಿನ ಗ್ರಾಮಸ್ಥರು ಸುಮಾರು ಒಂದೂವರೆ ಕಿಮಿ ದೂರದ ಜಾಲಿಗೆ ಗ್ರಾಮದ ಶುದ್ಧ ಕುಡಿಯುವ ನೀರನ್ನು ತಂದು ಬಳಸುತ್ತಿದ್ದಾರೆ.
ಈಗಾಗಲೇ ತಾಲೂಕಿನ ವಿವಿದೆಡೆ ವಿವಿಧ ಅನದಾನದಲ್ಲಿ ಮತ್ತು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸಹಕಾರದಲ್ಲಿ ಹಲವಾರು ಕಡೆಗಳಲ್ಲಿ ಶುದ್ಧ ಕುಡಿಯುವ ನೀರಿನ ಘಟಕಗಳು ಆಗಿರುವುದರಿಂದ ಹೆಚ್ಚಿನ ಅನುಕೂಲವಾಗಿದೆ. ಅದರಂತೆ ಬಸವನಪುರ ಗ್ರಾಮದಲ್ಲಿಯೂ ಸಹ ಶುದ್ಧ ಕುಡಿಯುವ ನೀರಿನ ಘಟಕ ನಿರ್ಮಾಣ ಮಾಡಿಕೊಟ್ಟರೆ ಸಾಕಷ್ಟು ಅನುಕೂಲವಾಗುತ್ತದೆ ಎಂದು ಗ್ರಾಮದ ಮಹಿಳೆಯರು ಒತ್ತಾಯಿಸಿದ್ದಾರೆ. ಸುಮಾರು ೩೫೦ ಜನಸಂಖ್ಯೆ ಹೊಂದಿರುವ ಬಸವನಪುರ ಗ್ರಾಮದಲ್ಲಿ ಸಾಕಷ್ಟು ರೈತರು ಮತ್ತು ರೈತ ಮಹಿಳೆಯರು ಹೈನುಗಾರಿಕೆ ಮತ್ತು ಕೃಷಿಯನ್ನು ಅವಲಂಬಿತರಾಗಿದ್ದಾರೆ. ಅದ್ದರಿಂದ ಪಂಚಾಯಿತಿ ಅನುದಾನದಲ್ಲಾಗಲೀ, ಸಂಘ ಸಂಸ್ಥೆಗಳ ನಿಧಿಯಿಂದಾಗಲೀ ಅಥವಾ ಇತರೆ ಅನುದಾನದಲ್ಲಾಗಲೀ ಅತೀ ಶೀಘ್ರವಾಗಿ ಇಲ್ಲೊಂದು ಶುದ್ಧ ಕುಡಿಯುವ ನೀರಿನ ಘಟಕ ನಿರ್ಮಾಣ ಮಾಡಿಕೊಟ್ಟರೆ ಈ ಭಾಗದ ಜನರಿಗೆ ಆರೋಗ್ಯಕರ ನೀರನ್ನು ಕುಡಿಯುವಂತೆ ಆಗುತ್ತದೆ ಎಂದು ಜಾಲಿಗೆ ಗ್ರಾಪಂನ ಬಸವನಪುರ ಗ್ರಾಮದ ಸದಸ್ಯೆ ವಿಜಯರಾಘವೇಂದ್ರ ಮನವಿ ಮಾಡಿದ್ದಾರೆ.
Be the first to comment