ಕಲೆಗಳು ಪ್ರತಿಭೆಗಳಾಗಿ ಹೊರಹುಮ್ಮಬೇಕು

ವರದಿ ಹೈದರ್ ಸಾಬ್ ಕುಂದಾಣ

ರಾಜ್ಯ ಸುದ್ದಿಗಳು 

ದೇವನಹಳ್ಳಿ

ಕಲೆಗಳು ಹಂತ ಹಂತವಾಗಿ ನಶಿಸಿ ಹೋಗುತ್ತಿದೆ. ಪ್ರತಿಭೆಗಳಾಗಿ ಹೊರಹುಮ್ಮಬೇಕಿದೆ ಎಂದು ಉದಯ್ ಕಲ್ಚರಲ್ ಅಕಾಡೆಮಿ ಟ್ರಸ್ಟಿನ ಅಧ್ಯಕ್ಷ ಎನ್. ರಾಮಾಮೂರ್ತಿ ತಿಳಿಸಿದರು.ಭಾರತದಲ್ಲಿ ಭಾರತದ ಸಂಸ್ಕೃತಿ ಕಲೆ ಗಳು ನಶಿಸಿಹೋಗುತಿದೆ ಅದರ ಬಗ್ಗೆ ಹೆಚ್ಚು ಕಾಳಜಿ ವಹಿಸಿ ನಮ್ಮ ಸಂಸ್ಕೃತಿ ಕಲೆ ಗಳನ್ನು ಉಳಿಸಿಕೊಳ್ಳಬೇಕು ಹಾಗೂ ಗ್ರಾಮಾಂತರ ಪ್ರತಿಭೆಗಳಿಗೆ ಹೆಚ್ಚು ಅವಕಾಶಗಳು ಸಿಗಬೇಕೆಂದು ತಿಳಿಸಿದರು.

CHETAN KENDULI

ಕಾರ್ಯಕ್ರಮದಲ್ಲಿ ಸಾಧಕರಿಗೆ ಸನ್ಮಾನ ವನ್ನು ರಾಜ್ಯ ಪ್ರಶಸ್ತಿ ನೃತ್ಯ ಕಲಾವಿದೆ ಕುಮಾರಿ ಹರಿಶ್ರೀ ಮತ್ತು ಚಲನಚಿತ್ರ ನಿರ್ದೇಶಕರು ರಾಮ್ಸ್ ರಂಗ ರವರಿಗೆ ಹಾಗೂ ಭರತನಾಟ್ಯ ಕಲಾವಿದೆ ಕುಮಾರಿ ಇಚ್ಚ ರವರಿಗೆ ಸನ್ಮಾನ ಮಾಡಲಾಯಿತು. ಕಾರ್ಯಕ್ರಮದಲ್ಲಿ ಭರತನಾಟ್ಯ ಕಾರ್ಯಕ್ರಮವನ್ನು ದೇವನಹಳ್ಳಿ ಯ ಅಂಜಲಿ ಕಲಾ ತಂಡದಿಂದ ಆಯೋಜಿಸಲಾಗಿತ್ತು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳು ಹಾಗೂ ಟ್ರಸ್ಟಿನ ಪ್ರಧಾನಕಾರ್ಯಧರ್ಶಿ ಪುಷ್ಪ ರವರು ಹಾಗೂ ಖಜಾಂಚಿ ಸುಂದರ್ ಹಾಗೂ ಎಲ್ಲ ಪಧಧಿಕಾರಿಗಳು ಭಾಗವಹಿಸಿದ್ದರು.

Be the first to comment

Leave a Reply

Your email address will not be published.


*