ಜಿಲ್ಲಾ ಸುದ್ದಿಗಳು
ಸಾವಿರಾರು ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡಿ ಬಾಳಿಗೆ ಬೆಳಕಾಗಿ ಉಜ್ವಲ ಭವಿಷ್ಯ ನೀಡಿರುವ ನಮ್ಮೂರಿನ ಸರ್ಕಾರಿ ಪ್ರಾಥಮಿಕ ಶಾಲೆಯ ಶತಮಾನೋತ್ಸವ ಹಬ್ಬದಲ್ಲಿ ಎಲ್ಲರೂ ಕುಟುಂಬ ಸಹಿತರಾಗಿ ಭಾಗವಹಿಸಿ ಶಾಲೆಯ ಋಣವನ್ನು ನಾವೆಲ್ಲರೂ ತೀರಿಸುವ ಅಮೃತ ಘಳಿಗೆಯಲ್ಲಿ ಪಾಲ್ಗೊಳ್ಳಬೇಕು.
ಮಹಾಲಿಂಗೇಶ ನಾಡಗೌಡರ
ಅಧ್ಯಕ್ಷರು ಗ್ರಾಮ ಪಂಚಾಯತಿ ಕೆಲೂರ
ಬಾಗಲಕೋಟೆ:ಬ್ರಿಟಿಷ್ ಸರ್ಕಾರದ ಅವಧಿಯಲ್ಲಿ ಅನುಮತಿ ಪಡೆದು ಹಲವು ಸಾಧಕರನ್ನು ಸಮಾಜಕ್ಕೆ ಅರ್ಪಣೆ ಮಾಡಿರುವ ಇಳಕಲ್ಲ ತಾಲೂಕಿನ ಕೆಲೂರ ಗ್ರಾಮದ ಸರಕಾರಿ ಮಾದರಿ ಪ್ರಾಥಮಿಕ ಶಾಲೆಯು ಶತಮಾನವನ್ನು ಕಳೆದು 55ನೇ ವರ್ಷಕ್ಕೆ ಕಾಲಿಟ್ಟಿದೆ.ಈ ಶಾಲೆಯು ಇದೆ ಎಪ್ರಿಲ್ 10 ರಂದು 155ನೇ ವರ್ಷಾಚರಣೆಯ ಸಂಭ್ರಮಕ್ಕೆ ಸಜ್ಜುಗೊಂಡಿದೆ.
ಅತ್ಯಂತ ಗ್ರಾಮೀಣ ಭಾಗವಾಗಿರುವ ಕೆಲೂರ ಗ್ರಾಮದ ಶಾಲೆಯು 1867 ರಲ್ಲಿ ಶಾಲೆಯೂ ಸ್ಥಾಪನೆಗೊಂಡಿತ್ತು. ಮೊದಲಿಗೆ ಇಲ್ಲಿ 1ರಿಂದ 5ನೇ ತರಗತಿ ವರೆಗೆ ಭೋದನೆ ಮಾಡಲಾಗುತ್ತಿತ್ತು. ಬಳಿಕ 1ರಿಂದ 7ನೇ ತರಗತಿ ವರೆಗೆ ವಿಸ್ತರಣೆ ಮಾಡಲಾಗಿದೆ.ಪ್ರಸ್ತುತ 07 ಶಿಕ್ಷಕರು ಹಾಗೂ 452 ವಿದ್ಯಾರ್ಥಿಗಳು ಇದ್ದಾರೆ. ಕೆಲೂರ ಗ್ರಾಮದ 5 ಸಾವಿರಕ್ಕಿಂತಲೂ ಅಧಿಕ ವಿದ್ಯಾರ್ಥಿಗಳು ಇಲ್ಲಿಯೇ ವಿದ್ಯಾರ್ಜನೆ ಮಾಡಿ ಇಂದು ದೇಶ-ವಿದೇಶಗಳಲ್ಲಿ ವಿವಿಧ ಉದ್ಯೋಗದಲ್ಲಿದ್ದಾರೆ.
ಶಾಲೆಯಲ್ಲಿ ಕಲಿತು ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರಿಗೂ ಹಾಗೂ ವಿವಿಧ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿರುವ ನೌಕರ ವರ್ಗದವರಿಗೂ ಹಾಗೂ ಶಾಲೆಯಲ್ಲಿ ಸೇವೆಸಲ್ಲಿಸಿದ ಶಿಕ್ಷಕರಿಗೂ ಹಾಗೂ ನಿವೃತ್ತಿಹೊಂದಿರುವ ಶಿಕ್ಷಕರಿಗೆ ಮತ್ತು ಕಾರ್ಯಕ್ರಮಕ್ಕೆ ದೇಣಿಗೆಯನ್ನು ನೀಡಿದ ಮಹಾದಾನಿಗಳಿಗೆ ಗೌರವ ಸನ್ಮಾನ ಏರ್ಪಡಲಿದೆ.
ಶ್ರೀ ಷ. ಬ್ರ. ಡಾ|| ಮಲಯ ಶಾಂತಮುನಿ ದೇಶಿಕೇಂದ್ರ ಶಿವಾಚಾರ್ಯ ಮಹಾಸ್ವಾಮಿಗಳು ಕೆಲೂರ, ಶಿವಗಂಗಾ ಕ್ಷೇತ್ರದ ಪರಮ ಪೂಜ್ಯರು ದಿವ್ಯ ಸಾನಿದ್ಯವಹಿಸಲಿದ್ದಾರೆ, ಡಾ|| ಶಿವಕುಮಾರ ಮಹಾಸ್ವಾಮಿಗಳು, ಸಿದ್ಧನಕೊಳ್ಳ ಕ್ಷೇತ್ರ ನಿರಂತರ ದಾಸೋಹ ಮಠ,ಪೂಜ್ಯ ಶ್ರೀ ಮೇಘರಾಜ ಮಹಾಸ್ವಾಮಿಗಳು ಮುರನಾಳ ಪುಣ್ಯಕ್ಷೇತ್ರ ಇವರ ಉಪಸ್ಥಿತಿಯಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವರಾದ ಬಿ.ನಾಗೇಶ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ.
ಅಧ್ಯಕ್ಷತೆಯನ್ನು ಹುನಗುಂದ ಮತಕ್ಷೇತ್ರದ ಶಾಸಕರಾದ ದೊಡ್ಡನಗೌಡ. ಜಿ. ಪಾಟೀಲ ವಹಿಸಲಿದ್ದು, ಲೋಕೋಪಯೋಗಿ ಸಚಿವರು ಹಾಗೂ ಬಾಗಲಕೋಟೆ ಜಿಲ್ಲಾ ಉಸ್ತುವಾರಿ ಸಚಿವರಾದ ಸಿ. ಸಿ. ಪಾಟೀಲ ಮತ್ತು ಗೋವಿಂದ ಕಾರಜೋಳ ಜಲಸಂಪನ್ಮೂಲ ಸಚಿವರು ನೂತನ ಶಾಲಾ ಕಟ್ಟಡದ ಉದ್ಘಾಟನೆ ಮಾಡಲಿದ್ದಾರೆ.
ಸಿದ್ಧರಾಮಯ್ಯ ಮಾಜಿ ಮುಖ್ಯಮಂತ್ರಿ ಹಾಗೂ ವಿರೋಧ ಪಕ್ಷದ ನಾಯಕ ಮತ್ತು ಮುರುಗೇಶ, ರುದ್ರಪ್ಪ, ನಿರಾಣಿ ಬೃಹತ್ ಮಧ್ಯಮ ಕೈಗಾರಿಕಾ ಸಚಿವರು,ಕಾರ್ಯಕ್ರಮದ ಜ್ಯೋತಿ ಬೆಳಗಿಸಲಿದ್ದಾರೆ.ಶಾಲಾ ಶತಮಾನೋತ್ಸವದ ನೆನಪಿಗಾಗಿ ಹೊರತಂದಿರುವ ಸ್ಮರಣ ಸಂಚಿಕೆ “ಸ್ಮರಣಾಂಜಲಿ”ಯನ್ನು ಸನ್ಮಾನ್ಯ ಶ್ರೀ ಡಾ. ವಿಜಯಾನಂದ.ಎಸ್.ಕಾಶಪ್ಪನವರ ಅನಾವರಣಗೊಳಿಸಲಿದ್ದಾರೆ.
ಎಸ್.ಆರ್.ನವಲಿಹಿರೇಮಠ ಸಮಾಜ ಸೇವಕರು ಹಾಗೂ ಸಂಸ್ಥಾಪಕ ಅಧ್ಯಕ್ಷರು ಎಸ್.ಆರ್.ಎನ್.ಇ ಫೌಂಡೇಶನ್, ಹುನಗುಂದ ಇವರು ಶ್ರೀ ಸರಸ್ವತಿ ದೇವಿಯ ಭಾವಚಿತ್ರದ ಮೆರವಣಿಗೆಗೆ ಪುಷ್ಪಾರ್ಚನೆ ಮಾಡುತ್ತ ಚಾಲನೆ ನೀಡಲಿದ್ದಾರೆ.
ಪಿ. ಸಿ. ಗದ್ದಿಗೌಡರ ಸಂಸದರು ಬಾಗಲಕೋಟೆ,ಸಿದ್ದು ಸವದಿ ಶಾಸಕರು ತೇರದಾಳ,ಡಾ||ವಿ.ಸಿ. ಚರಂತಿಮಠ ಬಾಗಲಕೋಟೆ,ಆನಂದ. ಸಿ. ನ್ಯಾಮಗೌಡ ಶಾಸಕರು ಜಮಖಂಡಿ,ಹನಮಂತ ರುದ್ರಪ್ಪ ನಿರಾಣಿ ವಿಧಾನ ಪರಿಷತ್ ಸದಸ್ಯರು, ಆರ್.ಬಿ.ತಿಮ್ಮಾಪೂರ ವಿಧಾನ ಪರಿಷತ್ ಸದಸ್ಯರು, ಅರುಣ ಶಹಾಪೂರ ವಿಧಾನ ಪರಿಷತ್ ಸದಸ್ಯರು, ಪಿ. ಎಚ್. ಪೂಜಾರ ವಿಧಾನ ಪರಿಷತ್ ಸದಸ್ಯರು, ಸುನೀಲಗೌಡ ಬಿ. ಪಾಟೀಲ ವಿಧಾನ ಪರಿಷತ್ ಸದಸ್ಯರು,ಡಾ|| ಎಂ. ಪಿ. ನಾಡಗೌಡ ಮಾಜಿ ವಿಧಾನ ಪರಿಷತ್ ಸದಸ್ಯರು,ವಿನಯ ಕುಲಕರ್ಣಿ ಮಾಜಿ ಸಚಿವರು,ಆರ್.ಜಿ.ದೇಶಪಾಂಡೆ ನ್ಯಾಯವಾದಿಗಳು ಕರ್ನಾಟಕ ಉಚ್ಛ ನ್ಯಾಯಾಲಯ,ಬೆಂಗಳೂರು, ಮಹಾಲಿಂಗೇಶ. ನಾಡಗೌಡ್ರ ಅಧ್ಯಕ್ಷರು ಗ್ರಾಮ ಪಂಚಾಯತಿ ಕೆಲೂರ ವಿಶೇಷ ಆಮಂತ್ರಿತ ವ್ಯಕ್ತಿಗಳು.
ಮುಖ್ಯ ಅತಿಥಿಗಳಾಗಿ ಜಿಲ್ಲಾ,ತಾಲೂಕಾ ಹಾಗೂ ಗ್ರಾಮ ಮಟ್ಟದ ಅಧಿಕಾರಿಗಳು,ಕೆಲೂರ ಗೆಳೆಯರ ಬಳಗದ ಅಧ್ಯಕ್ಷರು ಹಾಗೂ ಸದಸ್ಯರು,ಗ್ರಾಮ ಪಂಚಾಯತಿ ಸದಸ್ಯರು,ಪಿಕೆಪಿಎಸ್ ಅಧ್ಯಕ್ಷರು ಹಾಗೂ ಸದಸ್ಯರು,ಶಾಲೆಯ ಹಳೆಯ ವಿದ್ಯಾರ್ಥಿಗಳ ಬಳಗ,ಗ್ರಾಮದ ಸರ್ವರು,ಪ್ರಾಥಮಿಕ ಹಾಗೂ ಪ್ರೌಢಶಾಲಾ ಸಿಬ್ಬಂದಿಯವರು ಉಪಸ್ಥಿತರಿರುವರು.
Be the first to comment