ಮುರುಡೇಶ್ವರ ಆರ್.ಎನ್.ಎಸ್ ಆಸ್ಪತ್ರೆಯಲ್ಲಿ ಯಶಸ್ವಿಯಾಗಿ ನಡೆದ ರಕ್ತಧಾನ ಶಿಬಿರ

ವರದಿ-ಕುಮಾರ್ ನಾಯ್ಕ ,ಉಪ ಸಂಪಾದಕರು

ಜಿಲ್ಲಾ ಸುದ್ದಿಗಳು 

ಭಟ್ಕಳ

ಮುರುಡೇಶ್ವರದ ಆರ್.ಎನ್.ಎಸ್. ಸಮೂಹ ಶಿಕ್ಷಣ ಸಂಸ್ಥೆಗಳು, ಆರ್.ಎನ್.ಎಸ್. ಆಸ್ಪತ್ರೆ ಹಾಗೂ ಕಸ್ತೂರ್ಬಾ ಆಸ್ಪತ್ರ ಮಣಿಪಾಲ ಇವರ ಸಂಯುಕ್ತ ಆಶ್ರಯದಲ್ಲಿ ಬೃಹತ್ ರಕ್ತದಾನ ಶಿಬಿರವು ನಡೆಯಿತು. ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದ ಆರ್.ಎನ್.ಎಸ್. ಹಾಸ್ಪಿಟಲ್‌ನ ವ್ಯವಸ್ಥಾಪಕ ನಿರ್ದೇಶಕರಾದ ಡಾ| ಚೇತನ್ ಕಲ್ಕೂರ್‌ರವರು ಕೋವಿಡ್‌ನ ಈ ಸಂದರ್ಭದಲ್ಲಿ ಎಲ್ಲಾ ಆಸ್ಪತ್ರೆಗಳ ರಕ್ತ ನಿಧಿಗಳಲ್ಲಿ ರಕ್ತದ ಕೊರತೆ ಕಂಡುಬAದಿದ್ದು ಎಲ್ಲರೂ ರಕ್ತದಾನ ಮಾಡುವಂತೆ ಕರೆ ನೀಡಿದರು. ಮುಖ್ಯ ಅತಿಥಿಗಳಾಗಿ ಆರ್.ಎನ್.ಎಸ್. ಸಮೂಹ ಸಂಸ್ಥೆಗಳ ನಿರ್ದೇಶಕರಾದ ಶ್ರೀ ನಾಗರಾಜ ಶೆಟ್ಟಿ, ಆರ್.ಎನ್.ಎಸ್. ಪಾಲಿಟೆಕ್ನಿಕ್ ಕಾಲೇಜಿನ ಪ್ರಾಚಾರ್ಯರಾದ ಆರ್. ಸಂತೋಷ್, ಮರಿಸ್ವಾಮಿ, ಗಣೇಶ ನಾಯ್ಕ ಡಾ| ಡೀಮಾ ಭಾಗವಹಿಸಿದ್ದರು. ಆರ್.ಎನ್.ಎಸ್. ಪದವಿ ಪೂರ್ವ ಹಾಗೂ ಪದವಿ ಕಾಲೇಜಿನ ಪ್ರಾಚಾರ್ಯರಾದ ಮಾಧವ ಪಿ. ಸ್ವಾಗತಿಸಿದರು. ಆರ್.ಎನ್.ಎಸ್. ವಿದ್ಯಾನಿಕೇತನದ ಪ್ರಾಚಾರ್ಯರಾದ ಡಾ| ಸುರೇಶ ಶೆಟ್ಟಿ ಧನ್ಯವಾದಗೈದರು. ಆರ್.ಎನ್.ಎಸ್. ಪದವಿ ಕಾಲೇಜಿನ ಕನ್ನಡ ಉಪನ್ಯಾಸಕರಾದ ಗಣಪತಿ ನಾಯ್ಕ ಇವರು ಕಾರ್ಯಕ್ರಮ ನಿರೂಪಣೆ ಮಾಡಿದರು. ಸುಮಾರು 90 ಯುನಿಟ್ ರಕ್ತ ಸಂಗ್ರಹಿಸಲಾಯಿತು.

CHETAN KENDULI

Be the first to comment

Leave a Reply

Your email address will not be published.


*