ಜಿಲ್ಲಾ ಸುದ್ದಿಗಳು
ಕುಮಟಾ
ಕರ್ನಾಟಕ ಯಕ್ಷಗಾನ ಅಕಾಡೆಮಿ ಅಧ್ಯಕ್ಷರಾಗಿ ಡಾ.ಜಿ.ಎಲ್.ಹೆಗಡೆ ಮಣಕಿ ಅವರನ್ನು ನೇಮಿಸಿ ಕರ್ನಾಟಕ ಸರ್ಕಾರವು ಆದೇಶ ಹೊರಡಿಸಿದೆ. ಉತ್ತರ ಕನ್ನಡ ಜಿಲ್ಲೆ ಕುಮಟಾದ ಹೆಗಡೆ ಮಣಕಿ ಅವರು, ಯಕ್ಷಗಾನ ವರ್ಣ ವೈಭವ, ಶೇಣಿ ರಾಮಾಯಣ, ನಮ್ಮ ಚಿಟ್ಟಾಣಿ, ಹಾಲಕ್ಕಿ ಅಧ್ಯಯನ ಸೇರಿದಂತೆ ಹಲವು ಕೃತಿಗಳನ್ನು ರಚಿಸಿದ್ದಾರೆ. ಸ್ವತಃ ಕಲಾವಿದರೂ ಆಗಿರುವ ಅವರು, ಉತ್ತಮ ವಾಗ್ಮಿ, ತಾಳಮದ್ದಳೆ ಅರ್ಥಧಾರಿಯೂ ಹೌದು.
ಯಕ್ಷಗಾನದ ಮೌಖಿಕ ಸಾಹಿತ್ಯಕ್ಕೆ ಲಿಖಿತ ರೂಪ ಕೊಡಲು ಹೆಗಡೆ ಮಣಕಿ ಅವರು ಶ್ರಮಿಸಿದ್ದರು. ಈ ಹಿನ್ನೆಲೆಯಲ್ಲಿ ಎರಡು ಕೃತಿಗಳನ್ನೂ ರಚಿಸಿದ್ದರು. ಈ ಹಿಂದೆ ಯಕ್ಷಗಾನ ಅಕಾಡೆಮಿ ಅಧ್ಯಕ್ಷರಾಗಿದ್ದ ಎಂ.ಎ.ಹೆಗಡೆ ದಂಟ್ಕಲ್ ಅವರು, ಏಪ್ರಿಲ್ 18, 2021ರಂದು ನಿಧನರಾದ ಹಿನ್ನೆಲೆಯಲ್ಲಿ ಯಕ್ಷಗಾನ ಅಕಾಡೆಮಿ ಅಧ್ಯಕ್ಷರ ಹುದ್ದೆ ತೆರವಾಗಿತ್ತು.
Be the first to comment