ಬೆಂಗಳೂರಿನಲ್ಲಿ ಫೇ. ೨೨ ರಂದು ಅರಣ್ಯವಾಸಿಗಳ ಸಮಸ್ಯೆಗಳ.ಉನ್ನತ ಮಟ್ಟದ ಸಭೆ.

ವರದಿ-ಕುಮಾರ್ ನಾಯ್ಕ ,ಉಪ ಸಂಪಾದಕರು

ರಾಜ್ಯ ಸುದ್ದಿಗಳು 

ಶಿರಸಿ

ಅರಣ್ಯ ಹಕ್ಕು ಕಾಯಿದೆ ಅಡಿಯಲ್ಲಿ ಪರಿಣಾಮಕಾರಿಯಾಗಿ ಅನುಷ್ಠಾನದ ಕುರಿತು ಬೆಂಗಳೂರಿನ ವಿಧಾನ ಸೌಧದ ಸಭಾಂಗಣದಲ್ಲಿ ಫೇ. 22 ಮುಂಜಾನೆ 9:00 ಗಂಟೆಗೆ ಕರೆಯಲಾದ ಉನ್ನತ ಮಟ್ಟದ ಸಭೆಗೆ ಅರಣ್ಯ ಭೂಮಿ ಹಕ್ಕುಹೋರಾಟಗಾರರಿಗೆ ಸಾಮಾಜ ಕಲ್ಯಾಣ ಸಚಿವರ ಆಪ್ತ ಕಾರ್ಯದರ್ಶಿ ಡಾ ಜಿ ಉದಯ ಕುಮಾರ ಶೆಟ್ಟಿ ಸಭಾಸೂಚನ ಪತ್ರದ ಮೂಲಕ ಆಹ್ವಾನಿಸಲಾಗಿದ್ದು ಇರುತ್ತದೆ.

CHETAN KENDULI

ಉನ್ನತ ಮಟ್ಟದ ಸಭೆಯಲ್ಲಿ ಸಮಾಜ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಸಚಿವರಾದ ಕೋಟ ಶ್ರೀನಿವಾಸ ಪೂಜಾರಿ ಅಧ್ಯಕ್ಷತೆಯಲ್ಲಿ ಜರುಗಲಿದ್ದು, ಅರಣ್ಯ ಸಚಿವರಾದ ಉಮೇಶ ಕತ್ತಿ, ಪರಿಶಿಷ್ಟ ಪಂಗಡ ಕಲ್ಯಾಣ ಸಚಿವರಾದ ಶ್ರೀರಾಮಲು, ಕಾರ್ಮಿಕ ಸಚಿವರಾದ ಅರೇಬೈಲ್ ಶಿವರಾಮ ಹೆಬ್ಬಾರ್ ಉಪಸ್ಥಿತರಿರುವ ಸಭೆಗೆ ಅರಣ್ಯ ಹಕ್ಕು ಹೋರಾಟ ಸಮಿತಿಯ ಅಧ್ಯಕ್ಷ ರವೀಂದ್ರನಾಯ್ಕ ಹಾಗೂ ಪ್ರಧಾನ ಸಂಚಾಲಕ ಜಿ.ಎಮ್ ಶೆಟ್ಟಿ ಅಚಿವೆ ಅವರಿಗೆ ಆಹ್ವಾನಿಸಲಾಗಿರುತ್ತದೆ.

Be the first to comment

Leave a Reply

Your email address will not be published.


*