ಜಿಲ್ಲಾ ಸುದ್ದಿಗಳು
ಮುದ್ದೇಬಿಹಾಳ:
ಜಿಲ್ಲಾ ಹಾಗೂ ತಾಲೂಕಾ ಪ್ರದೇಶಗಳಿಗಿಂತಲೂ ಗ್ರಾಮೀಣ ಪ್ರದೇಶದ ಜನರಲ್ಲಿ ಕೊರೊನಾ ನಿಯಂತ್ರಣ ಮಾಡುವ ಆಸಕ್ತಿ ಹೆಚ್ಚಾಗಿದೆ ಎನ್ನುವುದಕ್ಕೆ ಬುಧವಾರ 130ನೇ ಅಂಬೇಡ್ಕರ್ ಜಯಂತ್ಯೋತ್ಸವ ಆಚರಣೆ ಸಾಕ್ಷಿಯಾಗಿದೆ.
ಹೌದು, ಮುದ್ದೇಬಿಹಾಳ ತಾಲೂಕಿನ ನೇಬಗೇರಿ ಗ್ರಾಮದಲ್ಲಿ ಕೊರೊನಾ ನಿಯಮಗಳನ್ನು ಪಾಲಿಸಿ ಬಾಬಾಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್ ಜಯಂತಿ ನೆಬಗೇರಿಯಲ್ಲಿ ಆಚರಸಲಾಯಿತು. ಆಚರಣೆಯ ವೇಳೆಯಲ್ಲಿ ಪ್ರತಿಯೊಬ್ಬರೂ ಮಾಸ್ಕ ಧರಿಸಿ ಸಾಮಾಜಿಕ ಅಂತರದೊಂದಿಗೆ ಆಚರಣೆ ಮಾಡಿದ್ದು ಎಲ್ಲರ ಗಮನ ಸೇಳೆಯುವುದರ ಜೊತೆಗೆ ಪ್ರತಿಯೊಬ್ಬರಿಗೂ ಕೊರೊನಾ ನಿಯಂತ್ರಣದ ಜವಾಬ್ದಾರಿ ಹೆಚ್ಚಿಸುವಂತಾಯಿತು.
ಈ ಸಂದರ್ಭದಲ್ಲಿ ಗ್ರಾಮದ ಹಿರಿಯರಾದ ಸಂಗನಗೌಡ ಬಿರಾದಾರ(ಹೊಸಮನಿ), ಮಾಜಿ ಗ್ರಾಮ ಪಂಚಾಯತ್ ಅಧ್ಯಕ್ಷ ಸಾಬಣ್ಣ ವಾಲಿಕಾರ, ಗ್ರಾಪಂ ಸದಸ್ಯ ಪವಾಡೆಪ್ಪ ಚಲವಾದಿ, ಹನಮಂತ ಚಲವಾದಿ, ಗೋಪಾಲ ಚಲವಾದಿ ತಾಲೂಕಾ ಅಂಬೇಡ್ಕರ್ ಸ್ವಾಭಿಮಾನಿ ಸೇನೆ ಅಧ್ಯಕ್ಷ ಸಂಗು ಚಲವಾದಿ, ಮಾಜಿ ಗ್ರಾಪಂ ಸದಸ್ಯ ಸಂಗಣ್ಣ ಮುಮೂರ, ಸಂಗಣ್ಣ ಬಿಸಲದಿನ್ನಿ, ಶ್ರೀ ಸಾಯಿ ಸಮೂಹ ಸಂಸ್ಥೆಯ ಮುಖ್ಯಸ್ಥ ಶರಣು ಚಲವಾದಿ ಮತ್ತು ಗ್ರಾಮದ ಹಿರಿಯರು ಮತ್ತು ಮಕ್ಕಳು ಭಾಗವಹಿಸಿದ್ದರು.
Be the first to comment