ರಾಜ್ಯ ಸುದ್ದಿಗಳು
ಕೂಡ್ಲಿಗಿ:
ಪಟ್ಟಣದ ಕೆಲ ಭಾಗಗಳನ್ನ ಇಸ್ಪೀಟು ಮಟ್ಕಾದ ಅಡ್ಡೆಗಳೆಂದು ಗುರುತಿಸಲಾಗುತ್ತಿದೆ,ಅಕ್ರಮ ಕೋರ ರು ದಲಿತರ ಹಿಂದುಳಿದ ಗಲ್ಲಿಗಳನ್ನ ತಮ್ಮ ಅಕ್ರಮಗಳಿಗೆ ಅಡ್ಡೆಯಾಗಿಸಿ ಕೊಳ್ಳುತಿದ್ದಾರೆ.
ಈ ಮೂಲಕ ದಲಿತರ ಪ್ರತಿಷ್ಠೆಗೆ ದಕ್ಕೆ ತರುವ ಹಾಗೂ ಆರ್ಥಿಕ ಶೋಷಣೆಗೆ ಗುರಿ ಮಾಡುವ ಹುನ್ನಾರ ನಡೆದಿದೆ. ಪ್ರತಿ ಸಭೆಯಲ್ಲಿ ಚರ್ಚಿಸಿದರೂ ಪ್ರಯೋಜನವಾಗಿಲ್ಲ ಇದೆಲ್ಲಾ “ಮಾಮೂಲು”ಆಗಿದೆ, ಬೇರೆ ಕಡೆಯಿಂದ ಬರುವ ಜೂಜುಕೋರರಲ್ಲಿ ಕೂಡ್ಲಿಗಿ ಪಟ್ಟಣದಲ್ಲಿ ಅಕ್ರಮಗಳು “ಮಾಮೂಲು” ಎಂಬ ಕುಖ್ಯಾತಿಗೆ ಗುರಿಮಾಡೊ ಪ್ರಯತ್ನ ನಡೆದಿದೆ. ಎಂದು ದಲಿತ ಮುಖಂಡ ಎಸ್.ದುರುಗೇಶ ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ.
ಅವರು ಎ11ರಂದು ಕೂಡ್ಲಿಗಿ ಪೊಲೀಸ್ ಠಾಣೆಯಲ್ಲಿ ಜರುಗಿದ ದಲಿತರ ಸಭೆಯಲ್ಲಿ ಮಾತನಾಡಿದರು, ಸಂಬಂಧಿಸಿದ ಇಲಾಖೆಯ ಮೃದು ಧೋರಣೆಯಿಂದಾಗಿ ದಲಿತರು ಆರ್ಥಿಕವಾಗಿ ಶೋಷಣೆಗೆ ಬಲಿಯಾಗುತ್ತಿದ್ದಾರೆ.ಇದೆಲ್ಲಾ ಅಕ್ರಮಗಳನ್ನ “ಮಾಮೂಲು” ಆಗಿ ಪರಿವರ್ತಿಸಿಕೊಂಡು ಅಕ್ರಮ ಕೋರರು ದಲಿತರ ಕೇರಿ ಹಾಗೂ ಗಲ್ಲಿಗಳನ್ನ ತಮ್ಮ ಆಡ್ಡೆಗಳನ್ನಾಗಿಸಿಕೊಂಡು ನಿರಂತರ ಶೋಷಿಸುತಿದ್ದಾರೆ,ಮತ್ತು ತಮ್ಮ ಅಕ್ರಮಗಳಿಗೆ ದಲಿತರ ಗಲ್ಲಿಗಳನ್ನ ದುರ್ಭಳಕೆ ಮಾಡಿಕೊಳ್ಳಲಾಗುತ್ತಿದೆ ಎಂದರು.
ಅಂಬೇಡ್ಕರ್ ನಗರ ಹತ್ತಿರದಲ್ಲಿ ಇಸ್ಪೀಟು ಅಡ್ಡೆ ನಿರಂತರವಾಗಿ ಜರುಗುತ್ತಿದೆ,ಹಲವು ಭಾರಿ ಸಭೆಗಳಲ್ಲಿ ಚರ್ಚಿಸಲಾಗುತ್ತಿದೆ ಆದರೆ ಕ್ರಮ ಕೈಗೊಂಡಿಲ್ಲ ಎಂದು ದುರುಗೇಶ ಆಕ್ರೋಶ ವ್ಯೆಕ್ತಪಡಿಸಿದರು.
ಹೆಚ್.ಮಹೇಶ ಮಾತನಾಡಿ ಪ್ರಮುಖ ರಸ್ತೆಗಳಲ್ಲಿ ವೃತ್ತಗಳಲ್ಲಿ ವಾಹನ ದಟ್ಟನೆಯಾಗುತ್ತಿದೆ,ಸುರಕ್ಷಿತ ವಾಹನ ಸಂಚಾರಕ್ಕೆ ಅಗತ್ಯ ಕ್ರಮಗಳನ್ನ ಜರುಗಿಸುವಂತೆ ತಿಳಿಸಿದರು. ರಾಘವೇಂದ್ರ ಮಾತನಾಡಿ ಎಲ್ಲಾ ತಾಲೂಕು ಮಟ್ಟದ ಅಧಿಗಳನ್ನೊಳಗೊಂಡು ದಲಿತರ ಸಭೆಗೆ ನಡೆಸುವಂತೆ ಕ್ರಮ ಕೈಗೊಳ್ಳುವಂತೆ ಸಭೆಗೆ ತಿಳಿಸಿದರು.ತಾಲೂಕಿನ ಗ್ರಾಮೀಣ ಭಾಗದ ದಲಿತ ಮುಖಂಡರನ್ನ ಸಭೆಗಳಿಗೆ ಆಹ್ವಾನಿಸುವಂತೆ, ಕ್ರಮ ಕೈಗೊಳ್ಳಲು ದಲಿತ ಮುಖಂಡರು ಸಭೆಯಲ್ಲಿ ತಿಳಿಸಿದರು.ಡಾ ಬಿ.ಆರ್. ಅಂಬೇಡ್ಕರ್ ರವರ ಜನ್ಮದಿನವನ್ನು ಬಹು ಅರ್ಥಪೂರ್ಣವಾಗಿ ಹಾಗೂ ಅದ್ದೂರಿಯಾಗಿ,ಯೋಜನೆ ಇದ್ದು ಎಲ್ಲಾ ಇಲಾಖಾ ಅಧಿಕಾರಿಗಳು ಸಹಕರಿಸುವಂಂತೆ ತಿಳಿಸಿದರು.
ಸಾಲುಮನಿ ರಾಘವೇಂದ್ರ,ಹಿರಿಯ ದಲಿತ ಮುಖಂಡರಾದ ಕರಿಬಸಪ್ಪ,ಡಿ.ಹೆಚ್.ದುರುಗೇಶ ಮತ್ತಿತರು ಮಾತನಾಡಿದರು. ಪಿಎಸ್ಐ ಡಿ.ಸುರೇಶ ಮಾತನಾಡಿ ಪ್ರತಿ ಸಭೆಯಲ್ಲಿ ಚರ್ಚಿಸಲಾಗುವ ಬಹುತೇಕ ಸಮಸ್ಯೆಗಳಿಗೆ ತ್ವರಿತಗತಿಯಲ್ಲಿ ಪರಿಹಾರ ಕಂಡು ಕೊಳ್ಳಲಾಗುತ್ತಿದ್ದು,ಕೆಲವೊಂದಕ್ಕೆ ದೂರುಗಳ ಪರಿಹಾರಕ್ಕೆ ಕಾಲಾವಕಾಶ ಆಗತ್ಯ ಅಹವಾಲುಗಳ ಪರಿಹಾರಕ್ಕೆ ಪ್ರಾಮಾಣಿಕ ಪ್ರಯತ್ನ ನಡೆದಿದೆ,ಈ ನಿಟ್ಟಿನಲ್ಲಿ ಇಲಾಖೆಯೊಂದಿಗೆ ಮುಖಂಡರ ಸಾರ್ವಜನಿಕರ ಸಹಕಾರ ಆಗತ್ಯ ಎಂದರು.
Be the first to comment