ತೀರ್ಥಹಳ್ಳಿ ಪೊಲೀಸ್ ಠಾಣೆಗಳು ಬಿ.ಜೆ.ಪಿ ಪಕ್ಷದ ಕಚೇರಿಳಾಗಿ ಪರಿವರ್ತನೆಯಾಗಿವೆ- ಮಾಜಿ ಸಚಿವ ಕಿಮ್ಮನೆ ರತ್ನಾಕರ 

ವರದಿ-ಕುಮಾರ್ ನಾಯ್ಕ ,ಉಪ ಸಂಪಾದಕರು

ಜಿಲ್ಲಾ ಸುದ್ದಿಗಳು 

ತೀರ್ಥಹಳ್ಳಿ 

ಕೋಣಂದೂರು ಗ್ರಾಮ ಪಂಚಾಯ್ತಿ ಆವರಣದಲ್ಲಿ ಗ್ರಾಮ ಸಭೆಯಲ್ಲಿ ನಡೆದ ಗಲಾಟೆಯಲ್ಲಿ ಭಾರತೀಯ ಜನತಾ ಪಕ್ಷದ ಮುಖಂಡ ಮತ್ತು ಗ್ರಾಮ ಪಂಚಾಯಿತಿ ಸದಸ್ಯ ಪೂರ್ಣೇಶ್ ರವರು ಗ್ರಾಮ ಪಂಚಾಯಿತಿಯ ಸದಸ್ಯ ಸುರೇಶ್ ಎಂಬುವರ ಮೇಲೆ ಹಲ್ಲೆ ನಡೆಸಿದ್ದು .ತೀರ್ಥಹಳ್ಳಿ ಪೊಲೀಸ್ ಠಾಣೆಯಲ್ಲಿ ಪೂರ್ಣೇಶ್ ಮತ್ತು ಸುರೇಶ್ ಇಬ್ಬರ ಮೇಲೂ ಪ್ರಕರಣ,ಪ್ರತಿ ಪಕ್ಷ ಗಳು ದಾಖಲಾಗಿ ಎಫ್ ಐಆರ್ ನ್ನು ನ್ಯಾಯಾಲಯಕ್ಕೆ ಸಲ್ಲಿಸಲಾಗಿದೆ .ಈ ದಿನದವರೆಗೂ ಪೂರ್ಣೇಶ್ ರವರನ್ನು ಬಂಧಿಸುವುದಿಲ್ಲ .ಹಾಗು ನಿನ್ನೆ ದಿನ ಬೆಳಿಗ್ಗೆ ಆರೋಪಿ ಪೂರ್ಣೇಶ್ ಅವರು ಗೃಹಸಚಿವ ಅರಗ ಜ್ಞಾನೇಂದ್ರ ರವರ ಮನೆಯಲ್ಲಿ ಸಚಿವರ ಜತೆಯಲ್ಲಿ ದೀರ್ಘಕಾಲ ಚರ್ಚಿಸುತ್ತಿದ್ದು ಆ ಸಮಯದಲ್ಲಿ ಪೊಲೀಸ್ ಅಧಿಕಾರಿಗಳು ಅಲ್ಲೇ ಇದ್ದು ಆತನನ್ನು ಬಂಧಿಸಿ ರುವುದಿಲ್ಲ ಎಂಬುದಾಗಿ ಇಂದು ತೀರ್ಥಹಳ್ಳಿ ಕಾಂಗ್ರೆಸ್ ಕಚೇರಿಯಲ್ಲಿ ಕಿಮ್ಮನೆ ರತ್ನಾಕರ್ ಅವರ ಅಧ್ಯಕ್ಷತೆಯಲ್ಲಿ ಸಭೆ ಸೇರಿ ನೂರಾರು ಬೆಂಬಲಿಗರೊಂದಿಗೆ ತಾಲ್ಲೂಕು ಕಚೇರಿಯವರೆಗೆ ನಡೆದುಕೊಂಡು ಬಂದು ತಾಲ್ಲೂಕು ಕಚೇರಿ ಎದುರು ಪ್ರತಿಭಟನಾ ಸಭೆಯನ್ನು ನಡೆಸಲಾಯಿತು .ಕಿಮ್ಮನೆ ರತ್ನಾಕರ್ ಅವರು ಸಭೆಯಲ್ಲಿ ಮಾತನಾಡುತ್ತಾ ತೀರ್ಥಹಳ್ಳಿ ತಾಲ್ಲೂಕಿನ ಪೊಲೀಸ್ ಅಧಿಕಾರಿಗಳು ಗೃಹ ಸಚಿವ ಅರಗ ಜ್ಞಾನೇಂದ್ರ ರವರ ಕೈಗೊಂಬೆಗಳಾಗಿದ್ದು ಅವರ ಮಾತಿನಂತೆ ಕಾಂಗ್ರೆಸ್ಸಿನ ಕಾರ್ಯಕರ್ತರಿಗೆ ಅನೇಕರಿಗೆ ಕ್ರಿಮಿನಲ್ ಕೇಸ್ ದಾಖಲಾಗುತ್ತಿವೆ .ಒಂದು ರೀತಿಯಲ್ಲಿ ಪೊಲೀಸ್ ಠಾಣೆಯು ಭಾರತೀಯ ಜನತಾ ಪಕ್ಷದ ಕಚೇರಿ ಆಗಿರುತ್ತದೆ .ಅರಣ್ಯ ಇಲಾಖೆಯು ಸಹ ಭಾರತೀಯ ಜನತಾ ಪಕ್ಷದ ಪರವಾಗಿ ಕೆಲಸ ಮಾಡುತ್ತಿದ್ದು ಬಡಬಗ್ಗರಿಗೆ ಮತ್ತು ಕಾಂಗ್ರೆಸ್ ಕಾರ್ಯಕರ್ತರಿಗೆ ನಿರಂತರ ತೊಂದರೆ ಕೊಡುತ್ತಿದ್ದಾರೆ ಮುಂದಿನ ದಿನಗಳಲ್ಲಿ ಇದನ್ನು ಪ್ರತಿಭಟಿಸಿ ಬಾರಿ ಪ್ರತಿ ಭಟನೆಯನ್ನು ಮಾಡಬೇಕಾಗುತ್ತದೆ ಎಂಬುದಾಗಿ ಎಚ್ಚರಿಕೆಯನ್ನು ನೀಡಿದರು .ಪ್ರತಿಭಟನಾ ಸಭೆಯಲ್ಲಿ ಆರೋಪಿ ಪೂರ್ಣೇಶ್ ಪೊಲೀಸರು ತಕ್ಷಣ ಬಂಧಿಸುವಂತೆ ಮನವಿ ಪತ್ರವನ್ನು ತೀರ್ಥಹಳ್ಳಿ ತಾಲ್ಲೂಕು ತಹಶೀಲ್ದಾರ್ ಡಾಕ್ಟರ್॥ .ಎಸ್ ಪಿ. ಶ್ರೀಪಾದ್ ರವರಿಗೆ ನೀಡಲಾಯಿತು .ತಹಶೀಲ್ದಾರ್ ಅವರೊಂದಿಗೆ ತೀರ್ಥಹಳ್ಳಿಯ ಠಾಣಾ ಇನ್ಸ್ ಪೆಕ್ಟರ್ ಸಂತೋಷ್ ಕುಮಾರ್ ರವರು ಉಪಸ್ಥಿತರಿದ್ದರು .ಪ್ರತಿಭಟನಾ ಸಭೆಯಲ್ಲಿ ಕಾಂಗ್ರೆಸ್ ಮುಖಂಡರು, ಗ್ರಾಮ ಪಂಚಾಯಿತಿ ಸದಸ್ಯರು, ಪಟ್ಟಣ ಪಂಚಾಯಿತಿ ಸದಸ್ಯರು ಉಪಸ್ಥಿತರಿದ್ದರು .

CHETAN KENDULI

Be the first to comment

Leave a Reply

Your email address will not be published.


*