ಜಿಲ್ಲಾ ಸುದ್ದಿಗಳು
ಯಲ್ಲಾಪುರ:
ತಾಲೂಕಿನ ಮಸ್ಜೀದ್ ಎ ಗೌಸಿಯಾದಲ್ಲಿ ವ್ಯಾಪಕವಾಗಿ ಅವ್ಯವಹಾರವಾದರೂ ಬ್ರಷ್ಟಾಚಾರವಾದರೂ ಕೇಳುವವರಿಲ್ಲದ ಹಾಗಾಗಿದೆ ಎಂದು ತಾಮೀರ್ ಕೊ ಆಪ್ ಸೊಸೈಟಿ ಮಾಜಿ ಅಧ್ಯಕ್ಷರಾದ ಮಹಮ್ಮದ ಗೌಸ್ ಎ ಶೇಖ ದೂರಿದ್ದಾರೆ.
ಅವರು ಜಿಲ್ಲಾಧಿಕಾರಿಗಳಿಗೆ ಯಲ್ಲಾಪುರ ತಹಶಿಲ್ದಾರ ಶ್ರೀಕೃಷ್ಣ ಕಾಮಕರ ರವರ ಮೂಲಕ ಮನವಿ ಸಲ್ಲಿಸಿ ಈಗಾಗಲೇ ಹಲವು ಬಾರಿ ಸಂಬಂದ ಪಟ್ಟ ಇಲಾಖೆಯವರಿಗೆ ಈ ಕುರಿತು ದೂರು ಸಲ್ಲಿಸಲಾಗಿದೆ. ಕಳೆದ ಏಳು ವರ್ಷಗಳಿಂದ ಗೌಸಿಯಾ ಮಸೀದಿ ಆಡಳಿತ ಕಮೀಟಿ ಅಸ್ತತ್ವದಲ್ಲಿದ್ದು ಕಾನೂನಾತ್ಮಕವಾಗಿ ಸರಕಾರದಲ್ಲಿ ನೊಂದಣಿಯಾಗಿರುವದಿಲ್ಲ.ಅಲ್ಲದೇ ಇದರಲ್ಲಿರುವ ಸದಸ್ಯರು ಕೂಡ ತಮ್ಮ ಮನಸ್ಸಿಗೆ ಬಂದಂತೆ ಗುಂಡಾಗಿರಿ ಮಾಡಿಕೊಂಡು ವಕ್ಫ ಬೊರ್ಡ ನಿಯಮ ಗಾಳಿಗೆ ತೂರಿದ್ದಾರೆ ಕಮೀಟಿಯಲ್ಲಿ ಹಣಕಾಸು ಲೆಕ್ಕ ಪತ್ರ ಸರಿಯಾಗಿಟ್ಟಿಲ್ಲ ಇದರ ಬಗ್ಗೆ ಅಡಿಟ್ ಮಾಡಿಸಿಲ್ಲ ಮಸ್ಜೀದ್ ಹೆಸರಿನಲ್ಲಿ ಹಣಮಾಡುವ ದಂದೆಗೆ ಇಳಿದಿದ್ದಾರೆ ಹಣಕಾಸಿನ ಲೆಕ್ಕಪತ್ರ ವನ್ನು ವಕ್ಪ ಬೋರ್ಡಿಗೆ ನೀಡಿಲ್ಲ ನೋಂದಣಿಯಾಗದೇ ಶಾಧಿಮಹಲ್ ಬಾಡಿಗೆ ನೀಡುವದರೊಂದಿಗೆ ಸಂಬಧಿಸಿದ ಪಾತ್ರೆಗಳನ್ನೂ ಬಾಡಿಗೆಗೆ ನೀಡುತ್ತಿದ್ದು ಇದರ ಯಾವುದೇ ಲೆಕ್ಕವಿಲ್ಲ.
ಹಿಂದೆ ವಕ್ಪ್ ಬೋರ್ಡನ ಅಧ್ಯಕ್ಷರು, ಉಪಾದ್ಯಕ್ಷರು ಅಧಿಕಾರಿಗಳು ಬಂದು ಲೆಕ್ಕ ಪತ್ರ ಒಪ್ಪಿಸಲು ಹೇಳಿದ್ದರೂ ಒಪ್ಪಿಸೊಲ್ಲ ಇಷ್ಟೇ ಅಲ್ಲದೇ ಮಸ್ಜೀದ್ ಜಾಗವನ್ನು ಕಮೀಟಿ ಸದಸ್ಯರೇ ಅತಿಕ್ರಮಣ ಮಾಡಿದರೂ ಕ್ರಮವಾಗಿಲ್ಲ ಆದ್ದರಿಂದ ಒಂದು ಧಾರ್ಮಿಕ, ಸಾರ್ವಜನಿಕ ಆಸ್ತಿ ದುರುಪಯೋಗ ಮಾಡುವದು ಕಾನೂನಿನ ಪ್ರಕಾರ ಅಪರಾಧವಾಗಿದೆ. ಆದ್ದರಿಂದ ಇದರ ಬಗ್ಗೆ ಸೂಕ್ತ ತನಿಖೆ ಮಾಡಿ ಕ್ರಮಕೈಗೊಳ್ಳಲು ಮನವಿಯಲ್ಲಿ ಆಗ್ರಹಿಸಿದ್ದಾರೆ. ಒಂದು ವೇಳೆ ಕ್ರಮಕೈಗೊಳ್ಳದಿದ್ದರೆ ಸಮಾಜ ಬಾಂಧವರೊಂದಿಗೆ ಉಪವಾಸ ಸತ್ಯಾಗ್ರಹ ಮಾಡುವುದಾಗಿ ಎಚ್ಚರಿಸಿದ್ದಾರೆ.
Be the first to comment