ದೇವನಹಳ್ಳಿ ಕಸಬಾ ವಿಎಸ್ಸೆಸ್ಸೆನ್ ರೈತರು ಹೆಚ್ಚಿನ ಸಾಲ ಪಡೆದು ಸಂಘದ ಅಭಿವೃದ್ಧಿಗೆ ಕೈಜೋಡಿಸಬೇಕು : ಜಿ.ಎನ್.ವೇಣುಗೋಪಾಲ್ _ಸಂಘಕ್ಕೆ ೧ಲಕ್ಷ ೧೬ಸಾವಿರ ನಿವ್ವಳ ಲಾಭ_ 

ವರದಿ ಹೈದರ್ ಸಾಬ್ ಕುಂದಾಣ

ರಾಜ್ಯ ಸುದ್ದಿಗಳು 

ದೇವನಹಳ್ಳಿ

ರೈತರು ಹೆಚ್ಚಿನ ಸಾಲ ಪಡೆದು ಸಂಘದ ಅಭಿವೃದ್ಧಿಗೆ ಕೈಜೋಡಿಸಬೇಕು. ಸಂಘಕ್ಕೆ 1ಲಕ್ಷ 16ಸಾವಿರ ನಿವ್ವಳ ಲಾಭ ಬಂದಿರುತ್ತದೆ ಎಂದು ಕಸಬಾ ವಿಎಸ್‌ಎಸ್‌ಎನ್ ಅಧ್ಯಕ್ಷ ಜಿ.ಎನ್.ವೇಣುಗೋಪಾಲ್ ತಿಳಿಸಿದರು. ಪಟ್ಟಣದ ಕೋಟೆ ಬೀದಿಯಲ್ಲಿರುವ ಕಸಬಾ ವ್ಯವಸಾಯ ಸೇವಾ ಸಹಕಾರ ಸಂಘದ ಆವರಣದಲ್ಲಿ 2020-21ನೇ ಸಾಲಿನ ವಾರ್ಷಿಕ ಮಹಾಸಭೆಯಲ್ಲಿ ಅವರು ಮಾತನಾಡಿದರು. ಎಲ್ಲರಿಗೂ ಸಹಕಾರ ಸಂಘದಲ್ಲಿ ಯಾವುದೇ ಪಕ್ಷಪಾತವಿಲ್ಲದೆ ಸರ್ವರಿಗೂ ಸೌಲಭ್ಯ ಒದಗಿಸಿಕೊಡಲಾಗುತ್ತಿದೆ. ರೈತರು ಸಾಲ ಪಡೆಯಲು ಅನೇಕ ಕುಟುಂಬಗಳಲ್ಲಿ ಒಟ್ಟಿಗೆ ಸದಸ್ಯರು ಇರುವುದರಿಂದ ಪಹಣಿಗಳ ಬದಲಾವಣೆಯಾಗದೆ ಇತರೆ ಕಾರಣಾಂತರಗಳಿಂದ ಸಾಲ ಪಡೆಯಲಾಗುತ್ತಿಲ್ಲ. ಕನಕಪುರ ಹಾಗು ರಾಮನಗರ ಪೋಡಿಮುಕ್ತ ಗ್ರಾಮಗಳಾಗಿರುವುದರಿಂದ ಈ ಭಾಗದಲ್ಲಿ ಅತೀ ಹೆಚ್ಚು ರೈತರು ಸಾಲಪಡೆದಿದ್ದಾರೆ. ದೇವನಹಳ್ಳಿ ತಾಲೂಕನ್ನು ಪೋಡಿಮುಕ್ತವಾಗಿ ಮಾಡಿದರೆ ಮತ್ತಷ್ಟು ರೈತರು ಸಾಲಪಡೆಯಲಿದ್ದಾರೆ. ಸಂಘದ ನೂತನ ಕಟ್ಟಡ ನಿರ್ಮಿಸಲು ಖಾಲಿನಿವೇಶನಕ್ಕಾಗಿ ಪುರಸಭೆಗೆ ಮನವಿ ಸಲ್ಲಿಸಲಾಗಿದೆ ಆದಷ್ಟುಬೇಗ ಜಾಗ ನೀಡಿದರೆ ಉತ್ತಮ ವಾಣಿಜ್ಯ ಮಳಿಗೆ ನಿರ್ಮಿಸಿ ಸಂಘದ ವಹಿವಾಟನ್ನು ಮತ್ತಷ್ಟು ಅಭಿವೃದ್ಧಿ ಪಡೆಸಲಾಗುವುದು. ಮುಂದಿನ ವಾರ್ಷಿಕ ಮಹಾಸಭೆ ವೇಳೆಗೆ ಸಂಘದ ನೂತನ ಕಟ್ಟಡವನ್ನು ನಿರ್ಮಿಸಲಾಗುವುದು ಎಂದರು.

CHETAN KENDULI

ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಕೆ.ರಮೇಶ್ ಮಾತನಾಡಿ, ತಾಲೂಕಿನಲ್ಲಿ ರೈತರ ಕೃಷಿಗೆ ಅತಿ ಹೆಚ್ಚು ಸಾಲ ನೀಡಿರುವ ಸಂಘಗಳಲ್ಲಿ 2ನೇ ಸ್ಥಾನದಲ್ಲಿ ಈ ವಿಎಸ್‌ಎಸ್‌ಎನ್ ಇದೆ. ಸಂಘ ಇತರೆ ಸಂಸ್ಥೆಗಳಿಗೆ ಮಾದರಿಯಾಗಿದೆ. 2019-20ನೇ ಸಾಲಿನಲ್ಲಿ ೪ಕೋಟಿ 12ಲಕ್ಷ ರೂ. ರೈತರಿಗೆ ಸಾಲವನ್ನು ನೀಡಲಾಗಿದೆ. ಆಡಳಿತ ಮಂಡಳಿಯ ಶ್ರಮದಿಂದ ಮತ್ತಷ್ಟು ಸಾಲ ನೀಡಲು ಸಾದ್ಯವಾಗುತ್ತದೆ ಎಂದರು. 

ರೈತರು ಕೃಷಿ, ಹಸು, ಕುರಿ, ಹಂದಿ ಸಾಕಾಣಿಕೆಗೆ ಕಡಿಮೆ ಬಡ್ಡಿ ದರದಲ್ಲಿ ಸಾಲ ದೊರೆಯುತ್ತಿದ್ದು ರೈತರು ಸದ್ಬಳಕೆಮಾಡಿಕೊಳ್ಳಬೇಕು. ಮುಂದಿನ ಶೈಕ್ಷಣಿಕ ವರ್ಷದಲ್ಲಿ 8 ರಿಂದ 10 ಕೋಟಿ ರೂ.ವರೆಗೆ ರೈತರಿಗೆ ಸಾಲ ನೀಡುವ ಗುರಿ ಇಟ್ಟುಕೊಳ್ಳಿ. ತಾಲೂಕಿನ ಎಲ್ಲಾ ಸಹಕಾರ ಸಂಘಗಳು ಉತ್ತಮವಾಗಿ ಕಾರ್ಯರ್ನಿವಹಿಸುತ್ತಿವೆ. ಈ ಸಂಸ್ಥೆಗೆ ಕಚೇರಿಗೆ ಜಾಗದ ಕೊರತೆಯಿದ್ದು ನಬಾರ್ಡ್‌ನಿಂದ ದೊರೆಯುವ ಸಾಲಸೌಲಭ್ಯವನ್ನು ಬಳಸಿಕೊಂಡು ಜಾಗ ಖರೀದಿಸಿ ನೂತನ ಕಟ್ಟಡ ನಿರ್ಮಿಸಿ, ಜನತಾ ಬಜಾರ್ ಮಳಿಗೆ ತೆರೆದು ಸಾರ್ವಜನಿಕರಿಗೆ ಅನುಕೂಲ ಹಾಗು ಸಂಘಕ್ಕೂ ಸಹ ಲಾಭಾಂಶ ಸಿಗಲಿದೆ. ರಾಮನಗರ, ಕನಕಪುರಗಳಲ್ಲಿ ರೈತರು ಅತಿ ಹೆಚ್ಚು ಸಾಲ ಪಡೆದಿದ್ದಾರೆ ತಾಲೂಕಿನಲ್ಲಿ ರೈತರು ಸಾಲ ಪಡೆಯಲು ಹಿಂದೇಟು ಹಾಕುತ್ತಿದ್ದಾರೆ. ಅತಿ ಕಡಿಮೆ ದಾಖಲೆಗಳನ್ನು ನೀಡಿ ಬಡ್ಡಿ ರಹಿತ ಸಾಲ ಪಡೆಯಬಹುದಾಗಿದೆ ಎಂದರು. ದೇವನಹಳ್ಳಿ ಕಸಬಾ ವಿಎಸ್ಸೆಸ್ಸೆನ್ ಉಪಾಧ್ಯಕ ಸಿ.ಮಂಜುನಾಥ್, ನಿರ್ದೇಶಕರಾದ ಎಸ್.ಗೋಪಾಲ್, ಸೊಸೈಟಿ ರಾಜಣ್ಣ,ಜಿ.ಸಿ.ಮಂಜುನಾಥ್, ವಿ.ದಾಸಪ್ಪ, ನರಸಿಂಹಮೂರ್ತಿ, ಬಿ.ಎ.ಕುಮಾರ್, ಪಿ.ಎ.ಗಾಯಿತ್ರಿ, ಮಂಜುಳಾ, ಕೆ.ಅಶ್ವಥ್‌ನಾರಾಯಣ್, ಜೆ.ಎನ್.ನಾಗರಾಜ್, ಎನ್.ವೆಂಕಟೇಶ್, ಮುಖ್ಯಕಾರ್ಯನಿರ್ವಾಹಣಾಧಿಕಾರಿ ಎನ್.ವೆಂಕಟೇಶ್, ಲೆಕ್ಕಿಗ ವಿ.ರಾಜೇಶ್, ಮರಾಟ ಗುಮಾಸ್ತ ಜಿ.ಸುಮತಿ, ಸಹಾಯಕ ಸತೀಶ್ ಮತ್ತಿತರರು ಇದ್ದರು. 

Be the first to comment

Leave a Reply

Your email address will not be published.


*