ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ಘೋಷಣೆ; ಅರಣ್ಯವಾಸಿಗಳ ದೌರ್ಜನ್ಯ ವರ್ಷ- ೨೦೨೧.

ವರದಿ-ಕುಮಾರ್ ನಾಯ್ಕ ,ಉಪ ಸಂಪಾದಕರು

ರಾಜ್ಯ ಸುದ್ದಿಗಳು 

ಶಿರಸಿ

ಅರಣ್ಯವಾಸಿಗಳ ಪರ ಮೂವತ್ತು ವರ್ಷ ಹೋರಾಟದ ಇತಿಹಾಸದಲ್ಲಿಯೇ ಅತೀ ಹೇಚ್ಚು ಪ್ರಸಕ್ತ ವರ್ಷ ಅರಣ್ಯವಾಸಿಗಳ ಮೇಲೆ ದೌರ್ಜನ್ಯ ವಾಗಿರುವದರಿಂದ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯು “ಅರಣ್ಯವಾಸಿಗಳ ದೌರ್ಜನ್ಯ ವರ್ಷ- ೨೦೨೧” ಏಂದು ಹೋರಾಟಗಾರರ ವೇದಿಕೆ ಘೋಷಿಸುತ್ತದೆ ಎಂದು ಜಿಲ್ಲಾಧ್ಯಕ್ಷ ರವೀಂದ್ರ ನಾಯ್ಕ ಹೇಳಿದರು.  ಅವರು ಇಂದು ಶಿರಸಿಯ ಹೋರಾಟಗಾರರ ವೇದಿಕೆಯ ಜಿಲ್ಲಾ ಕಾರ್ಯಾಲಯದಲ್ಲಿ ಪ್ರಸಕ್ತ ವರ್ಷ ಹೋರಾಟದ ಅವಲೋಕ ಸಭೆಯಲ್ಲಿ ಅರಣ್ಯ ಸಿಬ್ಬಂದಿಗಳಿAದ ಉಂಟಾದ ದೌರ್ಜನ್ಯಗಳಲ್ಲಿ ‘ಉತ್ತಮ ದೌರ್ಜನ್ಯದ ಏಕ್ಸನ್(ನಡೆ) ಚಿತ್ರ’ ಪ್ರದರ್ಶಿಸುತ್ತ ಮಾತನಾಡುತ್ತಿದ್ದರು.  ಪ್ರಸಕ್ತ ವರ್ಷ ಜಿಲ್ಲಾದ್ಯಂತ ನಾಲ್ಕು ದಿನಕ್ಕೆ ಒಂದರAತೆ ಅರಣ್ಯವಾಸಿಗಳ ಮೇಲೆ ದೌರ್ಜನ್ಯ, ದೈಹಿಕ ಹಲ್ಲೆ, ಕಿರುಕುಳ, ಮಾನಸಿಕ ಹಿಂಸೆ ಜರುಗಿದ್ದು ಇರುತ್ತದೆ ಎಂದು ಅವರು ಹೇಳಿದರು. ಅಲ್ಲದೇ, ವಿವಿಧ ಕ್ಷೇತ್ರದಲ್ಲಿ ಅರಣ್ಯವಾಸಿಗಳ ಮೇಲೆ ಕ್ರೀಮಿನಲ್ ಪ್ರಕರಣ ದಾಖಲಿಸಿದ್ದು ವಿಷಾದಕರ ಏಂದು ಅವರು ತಿಳಿಸಿದರು.  ಅತೀ ಶೀಘ್ರದಲ್ಲಿ ಸಾರ್ವಜನಿಕ ಸ್ಥಳದಲ್ಲಿ ಸಂಭವಿಸಿದರೇ “ಅರಣ್ಯವಾಸಿಗಳ ದೌರ್ಜನ್ಯ ವರ್ಷ- ೨೦೨೧” ರ ಪ್ರಶಸ್ತಿ ವಿತರಿಸಲಾಗುವುದು ಎಂದು ಅವರು ಹೇಳಿದರು.

CHETAN KENDULI

 

ಉತ್ತಮ ದೌರ್ಜನ್ಯದ ಏಕ್ಸನ್(ನಡೆ) ಚಿತ್ರ:  ಪ್ರಸಕ್ತ ವರ್ಷ ಅರಣ್ಯ ಸಿಬ್ಬಂದಿಗಳಿAದ ಜರುಗಿದ ದೌರ್ಜನ್ಯದ ಚಿತ್ರಗಳ ಅವಲೋಕನೆಯಲ್ಲಿ ಹೋನ್ನಾವರ ತಾಲೂಕಿನ, ಜಳವಳ್ಳಿ ಗ್ರಾಮದ ಶ್ರೀಮತಿ ನಾಗಮ್ಮ ಹನುಮಂತ ನಾಯ್ಕ ಕುಟುಂಬಕ್ಕೆ ಸಂಬAಧಿಸಿದ ಹಾಗೂ ಹಳಿಯಾಳ ತಾಲೂಕಿನ, ಭಗವತಿ ಗ್ರಾಮ ಪಂಚಾಯತ ವ್ಯಾಪ್ತಿಯ, ಭೀಮನಳ್ಳಿ ಗ್ರಾಮದ ಗೌಳಿ ಸಮಾಜದವರ ಮೇಲೆ ಜರುಗಿರುವ ಸಂದರ್ಭದ ದೌರ್ಜನ್ಯದಲ್ಲಿನ ಘಟನೆಯಲ್ಲಿನ ಏರಡು ಚಿತ್ರವು ‘ಉತ್ತಮ ದೌರ್ಜನ್ಯದ ಏಕ್ಸನ್(ನಡೆ) ಚಿತ್ರ’ ಎಂದು ಗುರುತಿಸಲಾಗಿದೆ ಎಂದು ಜಿಲ್ಲಾಧ್ಯಕ್ಷ ರವೀಂದ್ರ ನಾಯ್ಕ ತಿಳಿಸಿದರು.  ಕಾರ್ಯಕ್ರಮದಲ್ಲಿ ರಾಮ ಪೂಜಾರಿ, ವೆಂಕಟೇಶ ಗೌಡ, ಶೇಖರ್ ಸಿಧ್ಧಿ, ಗಣಪತಿ ಗುಡ್ನಾಪುರ ಉಪಸ್ಥಿತರಿದ್ದರು.

Be the first to comment

Leave a Reply

Your email address will not be published.


*