ರಕ್ತದಾನ ಮಾಡಿದರೆ ಅವರು ಆರೋಗ್ಯವಂತರಾಗಿರುತ್ತಾರೆ ಓ.ಬಿ.ಸಿ. ಅಧ್ಯಕ್ಷ ನಾರಾಯಣಸ್ವಾಮಿ

ವರದಿ ಗುರುಮೂರ್ತಿ ಬೂದಿಗೆರೆ

ರಾಜ್ಯ ಸುದ್ದಿಗಳು 

ದೇವನಹಳ್ಳಿ

ಪ್ರತಿಯೊಬ್ಬ ಮನುಷ್ಯನು ತಿಳಿಯಬೇಕಾದ ವಿಷಯವೆಂದರೆ ಯಾವ ವ್ಯಕ್ತಿ ರಕ್ತದಾನ ಮಾಡುವರೊ ಆ ವ್ಯಕ್ತಿಯ ದೇಹದಲ್ಲಿ ಇರುವ ಮತ್ತಷ್ಟು ರಕ್ತ ಶುದ್ದಿಯಾಗುತ್ತದೆ ಕಾರಣ ನಮ್ಮದೇಹದಲ್ಲಿ ರಕ್ತ ಹೊರಗೆ ಬಂದ ನಂತರ ಹೊಸದಾದ ರಕ್ತ ದೆಹದಲ್ಲಿ ಉತ್ಪತಿಯಾಗಿ ಉಳಿದ ರಕ್ತವೂ ಸಹ ಶುದ್ದಿಯಾಗುತ್ತದೆ ಆದ್ದರಿಂದ ಮನುಷ್ಯ ಪ್ರತಿ ಮೂರು ತಿಂಗಳಿಗೆ ಒಮ್ಮೆ ರಕ್ತದಾನಮಾಡಿದರೆಅವರುಆರೋಗ್ಯವಂತರಾಗಿರುತ್ತಾರೆ ಎಂದು ಬಿಜೆಪಿ ಓಬಿಸಿ ಜಿಲ್ಲಾಧ್ಯಕ್ಷ ಬೂದಿಗೆರೆ ನಾರಾಯಣಸ್ವಾಮಿ ತಿಳಿಸಿದರು.

CHETAN KENDULI

ತಾಲ್ಲೂಕು ಚನ್ನರಾಯಪಟ್ಟಣ ಹೋಬಳಿಯ ಬೂದಿಗೆರೆ ಗ್ರಾಮದ ಶ್ರೀ ಧರ್ಮರಾಯಸ್ವಾಮಿ ದೇವಾಲಯ ಆವರಣದಲ್ಲಿ ಆಯೋಜಿಸಿದ್ದ ಕ್ರಾಂತಿಕಾರಿ ಸ್ವಾತಂತ್ಯ ಹೋರಾಟಗಾರರಾದ ಚಂದ್ರಶೇಖರ್ ಆಜಾದ್ ರವರ ಸವಿನೆನಪಿಗಾಗಿ ರಾಷ್ಟ್ರೋತ್ಥಾನ ರಕ್ತಕೇಂದ್ರ ವತಿಯಿಂದ ನಡೆದ ರಕ್ತದಾನ ಶಿಬಿರದಲ್ಲಿ ಮಾತನಾಡಿದ ಅವರು ಯುವಕರು ಸ್ವಯಂ ಪ್ರೇರಿತವಾಗಿ ರಕ್ತಧಾನ ಮಾಡುವ ಮೂಲಕ ರಕ್ತದ ಅವಶ್ಯಕತೆಯಿಂದ ಬಳಲುವ ಜೀವಕ್ಕೆ ರಕ್ತದಾನ ಮಾಡಿ ಅವರ ಅಮೂಲ್ಯ ಜೀವ ಉಳಿಸಲು ಮುಂದಾಗಬೇಕು. ರಕ್ತವನ್ನು ನೀಡಲು ಭಯಪಡದೆ ಮುಂದೆ ಬಂದು ಬಗೆ ಬಗೆಯ ಶಿಬಿರಗಳು ನಡೆಯುತ್ತದೆಯೋ ಅಲ್ಲಿ ತಮ್ಮ ಅಮೂಲ್ಯವಾದ ರಕ್ತವನ್ನು ಮೂರು ತಿಂಗಳಿಗೆ ಒಂದು ಬಾರಿ ದಾನ ಮಾಡಬೇಕು ಇದರಿಂದ ಬೇರೆಯವರು ಜೀವವವು ಉಳಿಯುತ್ತದೆ ಹಾಗೂ ಅವರುಸಹ ಆರೋಗ್ಯವಾಗಿರುತ್ತಾರೆ.

ಇನ್ನೂ ಆಯೋಜಿಸಿದ್ದ ಈ ರಕ್ತದಾನ ಶಿಬಿರದಲ್ಲಿ ಸುಮಾರು 126 ಯೂನಿಟ್ ಗಳಿಗೂ ಹೆಚ್ಚು ಜನರು ಬಂದು ತಮ್ಮ ರಕ್ತವನ್ನು ದಾನಮಾಡಿ ಮತ್ತೊಂದು ಜೀವ ಉಳಿಸಲು ಮುಂದಾಗಿರುವುದು ಸಂತಸ ತಂದಿದೆ ಎಂದರುಇದೇ ಸಂದರ್ಭಗಳಲ್ಲಿ ಬಿಜೆಪಿ ಯುವ ಮುಖಂಡ ಹಾಗೂ ಬೂದಿಗೆರೆ ಗ್ರಾಮ ಪಂಚಾಯತಿ ಸದಸ್ಯ ಎನ್. ಮೋಹನ್ ಮಾತನಾಡಿ ಒಬ್ಬ ದಾನಿಯಿಂದ ಪಡೆದ ರಕ್ತವನ್ನು ಕೇವಲ 35 ದಿನ ಮಾತ್ರ ಇಟ್ಟುಕೊಳ್ಳಲು ಸಾಧ್ಯವಾಗುತ್ತದೆ ಅಷ್ಟರೋಳಗೆ ಅದನ್ನು ಅವಶ್ಯಕತೆ ಇರುವ ಅದೇ ರಕ್ತದ ಗುಂಪನ್ನು ಹೊಂದಿರುವ ವ್ಯಕ್ತಿಗೆ ಮಾತ್ರ ನೀಡಬೇಕಾಗುತ್ತದೆ. ಜನರು ರಕ್ತದಾನವನ್ನು ಮಾಡಲು ಮುಂದೆ ಬಂದಷ್ಟು ಮತ್ತೊಂದು ಜೀವವನ್ನು ಉಳಿಸಿದಂತೆ ಆದ್ದರಿಂದ ಎಲ್ಲರೂ ರಕ್ತದಾನ ದಾನಮಾಡುವು ಉತ್ತಮವಾದದ್ದು. ಇಂತಹ ರಕ್ತದಾನ ಶಿಬಿರಗಳಲ್ಲಿ ಹೆಚ್ಚಾಗಿ ಪುರುಷರು ರಕ್ತ ನೀಡುವುದು ಸಾಮಾನ್ಯವಾಗಿದೆ, ಆದ್ದರಿಂದ ಮಹಿಳೆಯರು ಸಹ ರಕ್ತದಾನವನ್ನು ಮಾಡಬೇಕು ಎಂದು.

ಈ ರಕ್ತದಾನ ಶಿಬಿರ ಕಾರ್ಯಕ್ರಮದಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಿವಪ್ರಸಾದ್, ರಾಜ್ಯ ಎಸ್ಸಿ ಮೋರ್ಚಾ ಖಜಾಂಚಿ ಎಕೆಪಿ ನಾಗೇಶ್, ಯುವ ಮೋರ್ಚ ಉಪಾದ್ಯಕ್ಷ ಮಧು, ಪ್ರಬುದ್ದರ ಪ್ರಕೋಷ್ಟ ಸಂಚಾಲಕರು ಸುರೇಶ್, ಬಿಜೆಪಿ ಮುಖಂಡರಾದ ನವೀನ್ ರಾಜ್ ಬೈರೇಗೌಡ, ಹರೀಶ್, ಮಂಜುನಾಥ್, ಚಿನ್ನಸ್ವಾಮಿ, ಮಂದಾರ ಮುನಿರಾಜು, ಮುನಿರಾಜು, ಚಂದ್ರಶೇಖರ್, ಮಹೇಶ, ಧನುಷ್,ವೆಂಕಟೇಶ್, ಧನಾಂಜಯ್ಯ, ಕಮಲೇಶ್ ಬೂದಿಗೆರೆ ಮಹಾ ಶಕ್ತಿ ಕೇಂದ್ರ ಅಧ್ಯಕ್ಷ, ತಾಲ್ಲೂಕು.ಕಾರ್ಯದರ್ಶಿ ಸುಬ್ರಹ್ಮಣ್ಯ. ಜಿಲ್ಲಾ ಪ್ರಧಾನ ಕಾರ್ಯದರ್ಶಿ ನಾಗವೇಣಿ ಇತರರು ಉಪಸ್ಥಿತರಿದ್ದರು.

Be the first to comment

Leave a Reply

Your email address will not be published.


*