ಜಿಲ್ಲಾ ಸುದ್ದಿಗಳು
ಕಾರವಾರ
ಕಳೆದ ಡಿಸೆಂಬರ್ 28 ರಂದು ಸಂಜೆ 4-45ರ ಸುಮಾರಿಗೆ ಬಾಲಕ ವಸತಿ ನಿಲಯದ ಹಿಂಬದಿಯಿಂದ ಯಾರಿಗೂ ಹೇಳದೆ ನಾಪತ್ತೆಯಾಗಿದ್ದಾನೆ. ಇದೀಗ ಎರಡು ವಾರ ಕಳೆದರೂ ಕೂಡ ಈತ ಎಲ್ಲಿಗೆ ಹೋಗಿದ್ದಾನೆ ? ಹೇಗಿದ್ದಾನೆ? ಎಂಬುದು ಯಾರಿಗೂ ತಿಳಿದಿಲ್ಲ. ಇತ್ತ ಮಗ ನಾಪತ್ತೆಯಾಗಿರುವ ಸುದ್ದಿ ತಿಳಿಯುತ್ತಿದ್ದಂತೆ ಹೆತ್ತ ತಾಯಿ ಬೀದರ್ನಿಂದ ಕಾರವಾರಕ್ಕೆ ಬಂದಿದ್ದು, ಕಣ್ಣೀರು ಹಾಕುತ್ತ ಮಗನ ಫೋಟೋ ಹಿಡಿದು ರಸ್ತೆಯುದ್ದಕ್ಕೂ ಓಡಾಡುವ ಜನರನ್ನು ವಿಚಾರಿಸುತ್ತಿದ್ದಾರೆ.
ಮೂಲತಃ ಬೀದರ್ ಜಿಲ್ಲೆಯ ಬಾಲ್ಕಿ ತಾಲೂಕಿನ ಬಾರಸಂಗಿ ಗ್ರಾಮದ ವಿಶೇಷಚೇತನ ಅಲಿಷಾ ಶೇಷರಾವ್ ಸುರೈನ್ಸಿ ಎಂಬ 14 ವರ್ಷದ ಬಾಲಕನನ್ನು ನಗರದ ಆಶಾನಿಕೇತನ ಕಾರವಾರ ಕಿವುಡ ಮತ್ತು ಮೂಕ ಮಕ್ಕಳ ಶಾಲೆಗೆ ಸೇರಿಸಲಾಗಿತ್ತು. ಆರನೇ ತರಗತಿಯಲ್ಲಿ ಓದುತ್ತಿದ್ದ ಈತ ಕೋವಿಡ್ ಹಿನ್ನೆಲೆ ಶಾಲೆಗಳನ್ನು ಬಂದ್ ಮಾಡಿದ ಕಾರಣ ಊರಿಗೆ ತೆರಳಿದ್ದ. ಆದರೆ ಪುನಃ ಶಾಲೆ ಪ್ರಾರಂಭವಾಗಿದ್ದರಿಂದ ನವೆಂಬರ್ 14ರಂದು ಶಾಲೆಗೆ ತಂದು ಬಿಡಲಾಗಿತ್ತು.
ಕಳೆದ ಡಿಸೆಂಬರ್ 28 ರಂದು ಸಂಜೆ 4-45ರ ಸುಮಾರಿಗೆ ಬಾಲಕ ವಸತಿ ನಿಲಯದ ಹಿಂಬದಿಯಿಂದ ಯಾರಿಗೂ ಹೇಳದೆ ನಾಪತ್ತೆಯಾಗಿದ್ದಾನೆ. ಇದರಿಂದ ಹೆತ್ತ ತಾಯಿ ತಮ್ಮ ಸಂಬಂಧಿಕರೊಂದಿಗೆ ಕಾರವಾರ ಮತ್ತು ಅಂಕೋಲಾದ ಬೀದಿಬೀದಿಗಳಲ್ಲಿ, ಬೀಚ್ಗಳಲ್ಲಿ ಹುಡುಕಾಟ ನಡೆಸುತ್ತಿದ್ದಾರೆ. ಬಾಲಕ ನಾಪತ್ತೆಯಾಗಿರುವ ಬಗ್ಗೆ ಕಾರವಾರ ನಗರಠಾಣೆಯಲ್ಲಿ ಸಂಬಂಧಪಟ್ಟ ಶಾಲೆಯವರು ನಾಪತ್ತೆ ಪ್ರಕರಣ ದಾಖಲಿಸಿದ್ದು, ಹುಡುಕಾಟ ನಡೆಸಲಾಗುತ್ತಿದೆ.
ಮಾತನಾಡಲು ಬಾರದ ಮತ್ತು ಕಿವಿಯೂ ಕೇಳದ ಅಲಿಷನಿಗೆ ದೃಷ್ಟಿದೋಷದ ಸಮಸ್ಯೆ ಕೂಡ ಇದ್ದು, ಇದೀಗ ಕುಟುಂಬ ಚಿಂತೆಗೊಳಗಾಗಿದೆ.ಸಂಜೆ ಕಾರವಾರದ ಬಸ್ ನಿಲ್ದಾಣಕ್ಕೆ ತೆರಳಿರುವ ಬಗ್ಗೆ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಆದರೆ ಬಸ್ ನಿಲ್ದಾಣದಲ್ಲಿ ಆತ ಯಾವ ಬಸ್ ಏರಿದ್ದಾನೆ ಎಂಬುದು ಯಾರಿಗೂ ತಿಳಿದಿಲ್ಲ. ಯಾರಾದ್ರೂ ಬಾಲಕನನ್ನು ನೋಡಿದ್ದಲ್ಲಿ 8197682038, 9008325689, 9481109925 ನಂಬರಿಗೆ ತಿಳಿಸುವಂತೆ ತಾಯಿ ಜಗದೇವಿ ಹಾಗೂ ಆಶಾ ನಿಕೇತನ ಶಾಲೆಯ ಮುಖ್ಯೋಪಧ್ಯಾಯರಾದ ಎಲಿಷಾ ಮನವಿ ಮಾಡಿದ್ದಾರೆ.
Be the first to comment