ಶಾಸಕರ ಅನುಚಿತ ವರ್ತನೆಗೆ ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ಶಾಂತಕುಮಾರ್ ಖಂಡನೆ.

ವರದಿ ಗುರುಮೂರ್ತಿ ಬೂದಿಗೆರೆ

ರಾಜ್ಯ ಸುದ್ದಿ

CHETAN KENDULI

ದೇವನಹಳ್ಳಿ : ವಿಧಾನಸಭಾ ಕ್ಷೇತ್ರದ ಶಾಸಕ ನಿಸರ್ಗ ನಾರಾಯಣಸ್ವಾಮಿ ರವರು ಮಾಜಿ ಸಚಿವ ಹಾಗೂ ಹಾಲಿ ಶಾಸಕ ಕೃಷ್ಣಭೈರೇಗೌಡ ರವರ ಬಗ್ಗೆ ಅನುಚಿತವಾಗಿ ಮಾತನಾಡಿರುವುದನ್ನು ದೇವನಹಳ್ಳಿ ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ಶಾಂತಕುಮಾರ್ ತೀವ್ರವಾಗಿ ಖಂಡಿಸಿದ್ದಾರೆ.ಇತ್ತೀಚೆಗೆ ನಡೆದ ಸಮಾರಂಭದಲ್ಲಿ ದೇವನಹಳ್ಳಿ ಕ್ಷೇತ್ರದ ಶಾಸಕರು ಕ್ಷೇತ್ರದಲ್ಲಿ ಲಭ್ಯವಿಲ್ಲದೇ ನಾಪತ್ತೆಯಾಗಿದ್ದಾರೆ ಎನ್ನುವ ಹೇಳಿಕೆ ನೀಡಿದ್ದನ್ನು ಪತ್ರಿಕೆಯಲ್ಲಿ ಪ್ರಕಟ ಮಾಡಿದ ಪತ್ರಕರ್ತರನ್ನು ಹಾಗೂ ಕೃಷ್ಣಭೈರೇಗೌಡ ರನ್ನು ಪಕ್ಕದ ಕ್ಷೇತ್ರದ ಶಾಸಕರಿಗೂ ಇಲ್ಲಿಗೂ ಏನು ಸಂಬಂಧ ಅವರಿಗೆ ಇಲ್ಲಿನ ಬಗ್ಗೆ ಏನು ಗೊತ್ತು ಎನ್ನುವ ಉದ್ದಟತನದ ಮಾತನ್ನು ಆಡಿರುವುದು ಖಂಡನೀಯ.ಕೃಷ್ಣಭೈರೇಗೌಡ ರವರು ಕಾಂಗ್ರೆಸ್ ಸರ್ಕಾರದ ಆಡಳಿತದಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲಾ ಉಸ್ತುವಾರಿಗಳಾಗಿದ್ದರು ಎನ್ನುವುದು ಶಾಸಕರು ಮರೆತಿದ್ದಾರೆ ಅವರಿಗೆ ಇಲ್ಲಿನ ಇಂಚಿಂಚು ಅರಿವಿದೆ. ನೀವು ಕ್ಷೇತ್ರದ ಶಾಸಕರಾಗಿ ಕೋವಿಡ್ ನಿಯಂತ್ರಣದಲ್ಲಿ ಯಾವ ಕ್ರಮ ತೆಗೆದುಕೊಂಡ್ಡಿದ್ದೇರಾ ,

ಪ್ರತಿದಿನ ಕ್ಷೇತ್ರದ ಸಾರ್ವಜನಿಕರು ಲಸಿಕೆಗಾಗಿ ಪರದಾಡುತ್ತಿದ್ದಾರೆ ಇದರ ಬಗ್ಗೆ ಧ್ವನಿ ಎತ್ತದೇ ಕ್ಷೇತ್ರದಿಂದ ಮರೆಯಾಗಿ ಹುಟ್ಟುಹಬ್ಬ ಆಚರಿಸಲು ಮಾತ್ರ ಕ್ಷೇತ್ರಕ್ಕೆ ಆಗಮಿಸಿದ್ದೀರಾ, ಸರ್ಕಾರದ ನಿಯಮಗಳನ್ನು ಗಾಳಿಗೆ ತೂರಿ ಸಂಭ್ರಮಾಚರಣೆ ಮಾಡಿದ್ದೀರ ,ಲಸಿಕೆ ಪಡೆಯುವ ಬಗ್ಗೆ ಸಾರ್ವಜನಿಕರಲ್ಲಿ ಎಲ್ಲಿಯಾದರೂ ಅರಿವು ಮೂಡಿಸಿದ್ದೀರಾ, ಎಷ್ಟೋ ಪಿ.ಹೆಚ್.ಸಿ ಗಳಲ್ಲಿ ಲಸಿಕೆ ಪೂರೈಕೆಯಾಗುತ್ತಿಲ್ಲಾ ಇದರ ಬಗ್ಗೆ ನಿಮಗೇ ಮಾಹಿತಿ ಇಲ್ಲಾ ಒಂದು ಕ್ಷೇತ್ರವನ್ನು ನಿಬಾಯಿಸಲು ಸಾಧ್ಯವಾಗುತ್ತಿಲ್ಲಾ,ರಾಜ್ಯ ನಾಯಕರಾದ ಕೃಷ್ಣಭೈರೇಗೌಡ ರವರ ಬಗ್ಗೆ ಮಾತನಾಡುತ್ತೀರ ಯಾವ ನೈತಿಕತೆ ಇದೆ ಎಂದು ದೇವನಹಳ್ಳಿ ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ಶಾಂತಕುಮಾರ್ ಖಾರವಾಗಿ ಪ್ರತಿಕ್ರಿಯಿಸಿದರು.

Be the first to comment

Leave a Reply

Your email address will not be published.


*