ನೌಕರಿ ಕೋಡಿಸುವ ಮೋಸದ ಜಾಲ ಬಿಸಿ ಶಿವಮೊಗ್ಗದಲ್ಲಿ ಹನಿಟ್ರ್ಯಾಪ್ ಮಾಡುತ್ತಿದ ಗ್ಯಾಂಗ ಬಂಧನ

ವರದಿ-ಕುಮಾರ್ ನಾಯ್ಕ ,ಉಪ ಸಂಪಾದಕರು

ಜಿಲ್ಲಾ ಸುದ್ದಿಗಳು 

ಅಜೀತ ನಾಡಿಗ್ ಸೇರಿದಂತೆ ಮೂರು ಜನರ ವಿರುದ್ಧ ಸುಲಿಗೆ ಪ್ರಕರಣ ದಾಖಲು – ಆರೋಪಿಗಳನ್ನು 24 ಗಂಟೆಯಲ್ಲಿ ಬಂಧಿಸಿದ ಪೊಲೀಸ್ ಇಲಾ

ಶಿರಸಿ

ಶಿರಸಿಯ ಅಜೀತ ಶ್ರೀಕಾಂತ ನಾಡಿಗ, ಧನುಶ್ಯ ಕುಮಾರ ದಿಲೀಪಕುಮಾರ ಶೆಟ್ಟಿ ಹಾಗೂ ಶಿವಮೊಗ್ಗದ ಶ್ರೀಮತಿ ಪದ್ಮಜಾ ಡಿ. ಎನ್. ಅವರ ಮೇಲೆ ಸುಲಿಗೆ (Extortion) ಶಿರಸಿಯ ಹೊಸ ಮಾರುಕಟ್ಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮೂವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.ಸರ್ಕಾರಿ ಖಾಯಂ ಉಪನ್ಯಾಸಕ ಹುದ್ದೆ ಕೊಡಿಸುತ್ತೇವೆ ಎಂದು ನಂಬಿಸಿ ದಿನಾಂಕ 17-01-2022 ರಂದು ಶಿವಮೊಗ್ಗಕ್ಕೆ ಕರೆಸಿಕೊಂಡು, ಕೋಣೆಯಲ್ಲಿ ಕೂಡಿಹಾಕಿ ನಗ್ನಗೊಳಿಸಿ, ದೂರುದಾರರ ಫೋಟೊ ಹಾಗೂ ವಿಡಿಯೋ ಚಿತ್ರೀಕರಣ ಮಾಡಿಕೊಂಡಿದ್ದಾರೆ.ದಿನಾಂಕ 18-01-2022 ರಂದು ದೂರುದಾರರ ತಂದೆಯವರನ್ನು ಭೇಟಿ ಮಾಡಿ ನಗ್ನ ಫೋಟೊ ಹಾಗೂ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಬಿಡುತ್ತೇವೆ ಅಥವಾ ಇದನ್ನು ಡಿಲೀಟ್ ಮಾಡಬೇಕು ಎಂದಾದರೆ, 15,00,000.00 (15 ಲಕ್ಷ) ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ.

CHETAN KENDULI

ಬಲವಂತವಾಗಿ ನಕಲಿ ದಾಖಲೆ ಸೃಷ್ಟಿಸಿ, ಕರಾರು ಪತ್ರ ಬರೆಸಿಕೊಂಡು, ಬ್ಲಾಂಕ್ ಚೆಕ್ ಪಡೆದುಕೊಂಡಿದ್ದಾರೆ. ಹಣ ಕೊಡದೇ ಇದ್ದರೆ ಕೊಲೆ ಮಾಡಲಾಗುವುದು ಎಂದು ಹೆದರಿಸಿದ್ದಾರೆ. ಎಂದು ಎಪ್‌ಐಆರ್ ನಲ್ಲಿ ದಾಖಲಿಸಲಾಗಿದೆ.ದೂರು ಬಂದ ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸ್ ಇಲಾಖೆ, ಎಸ್.ಪಿ. ಸುಮನ್ ಡಿ. ಪನ್ನೇಕರ್ ಅವರು ವಿಶೇಷ ತಂಡ ರಚಿಸಿ, ಆರೋಪಿಗಳನ್ನು ಹುಡುಕಿ 24 ಗಂಟೆಯೊಳಗೆ ಬಂಧಿಸಿದ್ದಾರೆ.ಈ ಮೂವರ ವಿರುದ್ಧ ಐಪಿಸಿ 386, 388, 406, 384, 342, 423 506 ಸಹಿತ 34 ಪ್ರಕರಣಗಳು ದಾಖಲಾಗಿವೆ.

1. ಅಜೀತ ಶ್ರೀಕಾಂತ ನಾಡಿಗ, ಪ್ರಾಯ: 25 ವರ್ಷ, ಕೆರೆಜಡ್ಡಿ, ಉಂಚಳ್ಳಿ ಶಿರಸಿ

2. ಧನುಶ್ಯ ಕುಮಾರ ದಿಲೀಪಕುಮಾರ ಶೆಟ್ಡಿ, ಪ್ರಾಯ: 25 ವರ್ಷ, ಗೊಲಗೇರಿ ಓಣಿ, ಬನವಾಸಿ ರಸ್ತೆ, ಶಿರಸಿ

3. ಶ್ರೀಮತಿ ಪದ್ಮಜಾ ಡಿ.ಎನ್, ತಂದೆ: ನಾರಾಯಣ ಡಿ.ಆರ್. ಪ್ರಾಯ: 50 ವರ್ಷ, ರಂಗನಾಥ ಬಡಾವಣೆ, ಗೋಪಾಳ, ಶಿವಮೊಗ್ಗ ಅವರುಗಳು ಬಂಧಿತರಾಗಿದ್ದಾರೆ.

 

ಈ ಕಾರ್ಯಾಚರಣೆಯು ಎಸ್. ಭದರಿನಾಥ, ಹೆಚ್ಚುವರಿ ಪೊಲೀಸ್ ಅಧೀಕ್ಷಕರು, ಕಾರವಾರ, ಉ.ಕ, ಡಿವೈಎಸ್‌ಪಿ ರವಿ ಡಿ ನಾಯ್ಕ ಮಾರ್ಗದರ್ಶನದಲ್ಲಿ, ತನಿಖಾಧಿಕಾರಿ ಸಿಪಿಐ ರಾಮಚಂದ್ರ ನಾಯಕ, ಮಾಹಂತೇಶ ಬಾರಕೇರ ಸಿಎಚ್‌ಸಿ 1501, ಅಶೋಕ ನಾಯ್ಕ ಸಿಪಿಸಿ-1938, ರಾಮಯ್ಯ ಪೂಜಾರಿ ಸಿಪಿಸಿ-922, ವಿದ್ಯಾ ಎಚ್‌ವಿ ಮ‌ಎಚ್‌ಸಿ-1586, ಯಶೋದಾ ನಾಯ್ಕ ಮಪಿಸಿ-1621, ಪಾಂಡು ನಾಗೋಜ ಅವರುಗಳು ಪ್ರಕರಣ ಭೇದಿಸಿದ್ದು, ಎಸ್‌ಪಿ ಸುಮನ್ ಡಿ. ಪೆನ್ನೇಕರ್ ಪ್ರಕರಣ ಭೇದಿಸುವಲ್ಲಿ ಶ್ರಮವಹಿಸಿದ್ದರು.

Be the first to comment

Leave a Reply

Your email address will not be published.


*