ರಾಜ್ಯ ಸುದ್ದಿಗಳು
ದೇವನಹಳ್ಳಿ
ತಾಲೂಕಿನ ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತ ಭವನದ ಮುಂಭಾಗದಲ್ಲಿರುವ ವಿಶ್ವನಾಥಪುರ ಪೊಲೀಸ್ ಠಾಣೆ ಆವರಣದಲ್ಲಿ ಬಿಕೆಎಸ್ ಪ್ರತಿಷ್ಠಾನದ ಅಧ್ಯಕ್ಷ ಬಿ.ಕೆ.ಶಿವಪ್ಪ ನೇತೃತ್ವದಲ್ಲಿ ಪದಾಧಿಕಾರಿಗಳೊಂದಿಗೆ ಜನಸ್ನೇಹಿ ಪೊಲೀಸ್ ಠಾಣೆಗೆ ಭೇಟಿ ನೀಡಿ ಪೊಲೀಸರೊಂದಿಗೆ ಪರಿಚಯ ಸಭೆ ನಡೆಸಿದರು.ಬಿಕೆಎಸ್ ಪ್ರತಿಷ್ಠಾನದ ಅಧ್ಯಕ್ಷ ಬಿ.ಕೆ.ಶಿವಪ್ಪ ಮಾತನಾಡಿ, ಪೊಲೀಸರು ಸಮಾಜದ ರಕ್ಷಕರಾಗಿದ್ದಾರೆ. ಅವರೊಂದಿಗೆ ಉತ್ತಮ ಬಾಂಧವ್ಯವನ್ನಿಟ್ಟುಕೊಂಡು ಕಾನೂನಿನ ಚೌಕಟ್ಟಿನಲ್ಲಿ ನಡೆಯಬೇಕು. ದೇಶ ಕಾಯುವ ಸೈನಿಕರಂತೆ ನಮ್ಮ ಸಮಾಜದ ಅಂಕುಡೊಂಕುಗಳನ್ನು ತಿದ್ದುವ ಮತ್ತು ಸಂವಿಧಾನಾತ್ಮಕವಾಗಿ ನ್ಯಾಯ ಒದಗಿಸುವಲ್ಲಿ ಪೊಲೀಸರ ಪಾತ್ರ ಹೆಚ್ಚು ಇರುತ್ತದೆ. ಇದೊಂದು ಅರ್ಥಪೂರ್ಣವಾದ ಸಭೆಯಾಗಿದ್ದು, ಕುಂದಾಣ ಗ್ರಾಪಂ ಘಟಕದ ಬಿಕೆಎಸ್ ಪ್ರತಿಷ್ಠಾನದ ಪದಾಧಿಕಾರಿಗಳನ್ನು ಪೊಲೀಸರಿಗೆ ಪರಿಚಯಿಸುವುದರ ಮೂಲಕ ತರಬೇತಿ ನೀಡುವ ಪ್ರಯತ್ನವಾಗಿದೆ. ನಿಮ್ಮ ವ್ಯಾಪ್ತಿಯಲ್ಲಿ ಯಾವುದೇ ರೀತಿಯ ಕಾನೂನು ಬಾಹಿರ ಚಟುವಟಿಕೆಗಳು ಕಂಡುಬಂದರೆ ಕೂಡಲೇ ಪೊಲೀಸರಿಗೆ ತಿಳಿಸುವ ಕೆಲಸ ಮಾಡಬೇಕು. ಅವರೊಂದಿಗೆ ಉತ್ತಮ ಬಾಂಧವ್ಯವನ್ನಿಟ್ಟುಕೊಳ್ಳಬೇಕು ಎಂದರು.
ಇದೇ ಸಂದರ್ಭದಲ್ಲಿ ವಿಶ್ವನಾಥಪುರ ಪೊಲೀಸ್ ಠಾಣೆಯ ಸಬ್‌ಇನ್ಸ್‌ಪೆಕ್ಟರ್ ವೆಂಕಟೇಶ್ ಅನುಪಸ್ಥಿತಿಯಲ್ಲಿ ಅವರಿಗೆ ಅಭಿನಂದನೆ ಸಲ್ಲಿಸಲಾಯಿತು. ಠಾಣೆಯ ಪೊಲೀಸರನ್ನು ಪರಿಚಯಿಸಿಕೊಡಲಾಯಿತು. ಠಾಣಾ ಎಎಸ್‌ಐಗಳಾದ ಶಿವರಾಜ್, ಹೆಚ್.ವೆಂಕಟೇಶ್, ಮುನಿರಾಜು ಹಾಗೂ ಸಿಬ್ಬಂದಿ ಸತೀಶ್ ಪದಾಧಿಕಾರಿಗಳಿಗೆ ಕೆಲ ಮಾಹಿತಿಯನ್ನು ನೀಡಿದರು.
ಈ ವೇಳೆಯಲ್ಲಿ ವಿಶ್ವನಾಥಪುರ ಪೊಲೀಸ್ ಎಎಸ್‌ಐಗಳು, ಸಿಬ್ಬಂದಿಗಳು, ಬಿಕೆಎಸ್ ಪ್ರತಿಷ್ಠಾನದ ಮಹಿಳಾ ಪದಾಧಿಕಾರಿಗಳಾದ ಅನುರಾಧ ಅಶೋಕ್, ವಿಜಯ ಯೋಗೇಶ್‌ಗೌಡ, ಅನಿತಾ ಮೋಹನ್, ಕುಂದಾಣ ಹೋಬಳಿ ಅಧ್ಯಕ್ಷ ಜಾಲಿಗೆ ವೆಂಕಟೇಶ್, ಉಪಾಧ್ಯಕ್ಷ ಮೋಹನ್, ಪ್ರಧಾನ ಕಾರ್ಯದರ್ಶಿ ಜಯಕುಮಾರ್, ನಿಕಟಪೂರ್ವ ಕಾರ್ಯದರ್ಶಿ ರವಿಕುಮಾರ್, ಖಜಾಂಚಿ ಮಧುಕುಮಾರ್, ಮಂಜುನಾಥ್, ಕುಂದಾಣ ಗ್ರಾಪಂ ಘಟಕ ಅಧ್ಯಕ್ಷ ಗೋವಿಂದಸ್ವಾಮಿ, ಅಂಬರೀಶ್, ರಾಜೇಶ್ ಹಾಗೂ ಪದಾಧಿಕಾರಿಗಳು ಮತ್ತಿತರರು ಇದ್ದರು.
Be the first to comment