ಜಿಲ್ಲಾ ಸುದ್ದಿಗಳು
ಹೊನ್ನಾವರ
ತಾಲೂಕಿನ ಎಸ್ ಡಿ ಎಮ್ ಕಾಲೇಜಿನ ಆವರಣದಲ್ಲಿ ಮಂಗಳವಾರ ನೂರಾರು ಜನರು ಆಗಮಿಸಿ ಡಾ ಎಂ ಪಿ ಕರ್ಕಿ ಅವರ ಅಂತಿಮ ದರ್ಶನ ಪಡೆದರು. ಬೆಳಿಗ್ಗೆ 8.30 ರಿಂದ 10.30 ರವರೆಗೆ ಕಾಲೇಜು ಆವರಣದಲ್ಲಿ ಅಂತಿಮ ದರ್ಶನಕ್ಕೆ ಅವಕಾಶ ಕಲ್ಪಿಸಲಾಯಿತು.
ಸಂಸದ ಅನಂತ್ ಕುಮಾರ್ ಹೆಗಡೆ, ಶಾಸಕ ದಿನಕರ ಶೆಟ್ಟಿ, ಮಾಜಿ ಶಾಸಕಿ ಶಾರದಾ ಶೆಟ್ಟಿ, ಪಟ್ಟಣ ಪಂಚಾಯತ್ ಅಧ್ಯಕ್ಷ ಶಿವರಾಜ್ ಮೇಸ್ತ, ಉಪಾಧ್ಯಕ್ಷ ಮೇಧಾ ನಾಯ್ಕ, ಜಿಲ್ಲಾ ಪಂಚಾಯತ್ ಅಧ್ಯಕ್ಷ ಶಿವಾನಂದ ಹೆಗಡೆ ಕಡತೋಕ, ಬಿಜೆಪಿ ಮುಖಂಡರಾದ ವಿನೋದ ಪ್ರಭು, ಶಿವಾನಿ ಶಾಂತಾರಾಮ್, ಎಮ್ ಜಿ ಭಟ್, ಡಾ ಜಿಜಿ ಹೆಗಡೆ, ಎಂ ಜಿ ನಾಯ್ಕ, ಉಮೇಶ್ ನಾಯ್ಕ, ರಾಜೇಶ್ ಬಂಡಾರಿ, ಲಯನ್ಸ್ ಕ್ಲಬ್ ಅಧ್ಯಕ್ಷ ವಿನೋದ್ ಮಾವಿನಹೊಳೆ, ಎಮ್ ಎಸ್ ಹೆಗಡೆ, ಎಚ್ ಆರ್ ಗಣೇಶ್, ಡಾ ಆಶಿಕ್ ಹೆಗಡೆ, ಕಾಲೇಜಿನ ಆಡಳಿತ ಮಂಡಳಿ ಸದಸ್ಯರು, ಉಪನ್ಯಾಸಕರು, ಸಿಬ್ಬಂದಿಗಳು, ಅಭಿಮಾನಿಗಳು ಪಾಲ್ಗೊಂಡಿದ್ದರು.
ನಂತರ ಪಾರ್ಥಿವ ಶರೀರವನ್ನು ಪಟ್ಟಣದ ಬಂದರ್ ರಸ್ತೆಯ ಮೂಲಕ ರುದ್ರಭೂಮಿಯಲ್ಲಿ ಧಾರ್ಮಿಕ ವಿಧಿ ವಿಧಾನದ ಮೂಲಕ ಅಗ್ನಿ ಸ್ಪರ್ಶ ಮಾಡಲಾಯಿತು. ನೂರಾರು ಜನ ಪಾಲ್ಗೊಂಡಿದ್ದರು.
Be the first to comment