ಶಿರಸಿ: ದೇಶದಲ್ಲಿ ದಿನದಿಂದ ದಿನಕ್ಕೆ ಇಂಧನ ದರ ಹೆಚ್ಚುತ್ತಿರೋ ಹಿನ್ನೆಲೆಯಲ್ಲಿ ಸಿಹಿ ಹಂಚೋ ಮೂಲಕ ಕೇಂದ್ರ ಸರ್ಕಾರದ ಧೋರಣೆಯನ್ನು ವಿರೋಧಿಸಿ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. 

ವರದಿ-ಕುಮಾರ್ ನಾಯ್ಕ.ಭಟ್ಕಳ

ರಾಜ್ಯ ಸುದ್ದಿ 

CHETAN KENDULI

ಇಂಧನ ದರ ಹೆಚ್ಚಳ; ಕಾಂಗ್ರೆಸ್‍ನಿಂದ ಸಿಹಿ ಹಂಚಿ ಪ್ರತಿಭಟನೆಶಿರಸಿ ನಗರದಲ್ಲಿ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಭೀಮಣ್ಣ ನಾಯ್ಕ ನೇತೃತ್ವದಲ್ಲಿ ಶಿರಸಿಯ ಡೆವಲಪ್ಮೆಂಟ್ ಸೊಸೈಟಿ ಪೆಟ್ರೋಲ್ ಬಂಕ್ ಗೆ ತೆರಳಿದ ಕಾರ್ಯಕರ್ತರು ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ಧಿಕ್ಕಾರ ಕೂಗಿದರು. ಅಲ್ಲದೇ ಗ್ರಾಹಕರಿಗೆ ಸಿಹಿ ವಿತರಿಸೋ ಮೂಲಕ ದರ ಹೆಚ್ಚಳವನ್ನು ಖಂಡಿಸಿದರು.

ಶಿರಸಿ ನಗರದಲ್ಲಿ ವಾರದ ಹಿಂದೆಯೇ ಪೆಟ್ರೋಲ್ ದರ 100 ರೂ. ತಲುಪಿದ್ದು, ಇಂದು 101.40 ಪೈಸೆಗೆ ಬಂದು ನಿಂತಿದೆ. ಕೇಂದ್ರ ಸರ್ಕಾರ ಕರೋನಾ ನಿಯಂತ್ರಣದಲ್ಲೂ ಹಿಂದೆ ಬಿದ್ದಿದ್ದು, ಈಗ ಪೆಟ್ರೋಲ್ ದರವನ್ನೂ ಹೆಚ್ಚಿಸೋ ಮೂಲಕ ಜನರನ್ನು ಮತ್ತಷ್ಟು ಸಂಕಷ್ಟಕ್ಕೆ ದೂಡಿದೆ.

ಹಿಂದೇ ಇದೇ ಬಿಜೆಪಿಗರು ಪೆಟ್ರೋಲ್ ದರ ಹೆಚ್ಚಳ ಖಂಡಿಸಿ ಪ್ರತಿಭಟನೆ ನಡೆಸಿದ್ದರು. ಈಗ ಇವರೇ ಪೆಟ್ರೋಲ್ ದರ ಏರಿಕೆಯಲ್ಲಿ ಸೆಂಚುರಿ ಭಾರಿಸಿದ್ದಾರೆ ಅಂತ ಕಾಂಗ್ರೆಸ್ ಮುಖಂಡರು ಪ್ರತಿಭಟನೆಯಲ್ಲಿ ವ್ಯಂಗ್ಯವಾಡಿದರು.

Be the first to comment

Leave a Reply

Your email address will not be published.


*