ಸೆಲ್ಫಿ ಕ್ಲಿಕ್ಕಿಸಲು ಹೋಗಿ ಯುವಕ ಸಮುದ್ರ ಪಾಲು; ಮೃತ ದೇಹ ಪತ್ತೆ

ವರದಿ-ಕುಮಾರ್ ನಾಯ್ಕ.ಭಟ್ಕಳ

ರಾಜ್ಯ ಸುದ್ದಿ 

CHETAN KENDULI

ಕುಮಟಾ: ಪಟ್ಟಣದ ವನ್ನಳ್ಳಿ ಹೆಡ್ ಬಂದರ್‍ನ ಸಮುದ್ರ ತೀರದ ಬಂಡೆಕಲ್ಲಿನ ಮೇಲೆ ಸೆಲ್ಫಿ ತೆಗೆಯಲು ತೆರಳಿ ಸಮುದ್ರ ಪಾಲಾದ ಯುವಕನ ಮೃತ ದೇಹವು ಶುಕ್ರವಾರ ತಾಲೂಕಿನ ಅಳ್ವೆದಂಡೆಯ ಸಮುದ್ರ ತೀರದಲ್ಲಿ ಪತ್ತೆಯಾಗಿದೆ.

ಕೊಪ್ಪಳ ಮೂಲದ ಹೊಸಲಿಂಗಪುರದ ನಿವಾಸಿ ಅಭಿಷೇಕ ಹನುಮಂತ ಬೋಯ್ (25) ಮೃತ ದುರ್ದೈವಿಯಾಗಿದ್ದಾನೆ. ಈತನ ಅಕ್ಕ ಭಟ್ಕಳದ ಸ್ಟೇಟ್ ಬ್ಯಾಂಕ್ ಉದ್ಯೋಗಿಯಾಗಿದ್ದು, ಸದ್ಯ ಕುಮಟಾಕ್ಕೆ ವರ್ಗಾವಣೆಗೊಂಡ ಕಾರಣ ತನ್ನ ಅಕ್ಕನ ಮನೆಯನ್ನು ಸ್ಥಳಾಂತರಿಸುವ ನಿಟ್ಟಿನಲ್ಲಿ ಕುಮಟಾಕ್ಕೆ ಆಗಮಿಸಿದ್ದ ಎಂಬುದು ತಿಳಿದುಬಂದಿದೆ. ಲಾಕ್‍ಡೌನ್ ಜಾರಿಯಲ್ಲಿರುವುದರಿಂದ ಊರಿಗೆ ತೆರಳಲಾಗದೇ, ಕೆಲವು ದಿನಗಳಿಂದ ಕುಮಟಾದಲ್ಲಿಯೇ ವಾಸವಿದ್ದ ಎನ್ನಲಾಗಿದೆ.

ಗುರುವಾರ ಅಕ್ಕನನ್ನು ಬ್ಯಾಂಕಿಗೆ ಬಿಟ್ಟು, ಮರಳಿ ಮನೆಗೆ ಹೋಗುವಾಗ ದಾರಿ ಮಧ್ಯದಲ್ಲಿಯೇ ಈತನು ಬೀಚ್‍ಗೆ ತೆರಳಿದ್ದು, ಸೆಲ್ಫಿ ತೆಗೆಯುವ ಸಂದರ್ಭದಲ್ಲಿ ಆಯತಪ್ಪಿ ಸಮುದ್ರ ಪಾಲಾಗಿರುವುದು ತಿಳಿದುಬಂದಿದೆ. ಕುಮಟಾ ಪೆÇಲೀಸರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿಗಳು ಸ್ಥಳೀಯರ ಸಹಕಾರದಿಂದ ಮೃತದೇಹವನ್ನು ಪತ್ತೆಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ. ಈ ಕುರಿತು ಕುಮಟಾ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Be the first to comment

Leave a Reply

Your email address will not be published.


*