ಜಿಲ್ಲಾ ಸುದ್ದಿಗಳು
ಭಟ್ಕಳ:
ನಿನಾದ ಸಾಹಿತ್ಯ ಸಂಗೀತ ಸಂಚಯ ವತಿಯಿಂದ ಶನಿವಾರ ಸಂಜೆ ೭ ಗಂಟೆಗೆ ನಿನಾದ ದಸರಾ ಕವಿಗೋಷ್ಠಿ ಆಯೋಜಿಸಲಾಗಿದೆ.
ತಾಲೂಕಿನ ವೆಂಕ್ಟಾಪುರದ ನೀರಕಂಠದಲ್ಲಿರುವ ಮಠದ ಶ್ರೀ ಸಿದ್ದಿವಿನಾಯಕ ದೇವಾಲಯದ ಶರನ್ನವರಾತ್ರಿ ಉತ್ಸವದ ಸಭಾ ವೇದಿಕೆಯಲ್ಲಿ ತಾಲೂಕಿನ ಕವಿಗಳಿಗಾಗಿ ನಿನಾದ ದಸರಾ ಕವಿಗೋಷ್ಠಿ ಆಯೋಜಿಸಲಾಗಿದೆ.ಸದಾ ಕ್ರಿಯಾತ್ಮಕ ಸಾಹಿತ್ಯ ಸಂಗೀತ ಚಟುವಟಿಕೆಗಳ ಮೂಲಕ ಜಿಲ್ಲೆಯಲ್ಲಿಯೇ ಗುರುತಿಸಿಕೊಂಡಿರುವ ನಿನಾದ ಸಾಹಿತ್ಯ ಸಂಗೀತ ಸಂಚಯ ಈ ಕವಿಗೋಷ್ಠಿ ಹಮ್ಮಿಕೊಂಡಿರುವುದಾಗಿ ಹಾಗೂ ತಾಲೂಕಿನ ಸಹೃದಯಿ ಕವಿಗಳು ಭಾಗವಹಿಸಬಹುದಾಗಿದೆ ಎಂದು ನಿನಾದ ಸಂಚಾಲಕರಾದ ಉಮೇಶ ಮುಂಡಳ್ಳಿ ಪ್ರಕಟಣೆಯಲ್ಲಿ ತಿಳಿಸಿರುತ್ತಾರಡ.ತಾಲೂಕಿನ ನಿಕಟಪೂರ್ವ ಕಸಾಪ ಅಧ್ಯಕ್ಷರಾದ ಹಿರಿಯ ನ್ಯಾಯವಾದಿಗಳು ಕವಿಗಳಾದ ಶಂಕರ್ ಕೆ ನಾಯ್ಕ ಅವರು ಕವಿಗೋಷ್ಠಿಯ ಅಧ್ಯಕ್ಷತೆ ವಹಿಸಲಿದ್ದು. ಅನೇಕ ಹಿರಿ ಕಿರಿಯ ಕವಿಗಳು ಭಾಗವಹಿಸಲಿದ್ದಾರೆ.
ದಸರಾ ಉತ್ಸವ ಮುಂಡಳ್ಳಿಯ ಶ್ರೀ ದುರ್ಗಾಪರಮೇಶ್ವರಿ ದೇವಾಲಯದಲ್ಲಿ ಹತ್ತು ದಿನಗಳ ಕಾಲ ವೈಭವಯುತವಾಗಿ ನಡೆಯಲ್ಲಿದ್ದು ಈ ಶರನ್ನವರಾತ್ರಿ ಮೊದಲ ದಿನವಾದ ಗುರುವಾರ ಶ್ರೀ ದುರ್ಗಾಪರಮೇಶ್ವರಿ ದೇವಾಲಯದಲ್ಲಿ ನಿನಾದ ಸಾಹಿತ್ಯ ಸಂಗೀತ ಸಂಚಯ ಭಟ್ಕಳ ಇವರಿಂದ ಭಕ್ತಿ ಸಂಗೀತ ಕಾರ್ಯಕ್ರಮ ನಡೆಯಿತು.
ನಿನಾದ ಸಂಚಾಲಕ ಹಾಗೂ ಯುವ ಪ್ರಶಸ್ತಿ ಪುರಸ್ಕೃತ ಸುಗಮ ಸಂಗೀತ ಗಾಯಕ ಉಮೇಶ ಮುಂಡಳ್ಳಿ ಅವರು ಭಕ್ತಿ ಸಂಗೀತ ನಡೆಸಿಕೊಟ್ಟರು. ಒಂದುವರೆ ಗಂಟೆಗಳ ಕಾಲ ನಡೆದ ಮುಂಡಳ್ಳಿ ಯವರ ಗಾಯನ ನೆರೆದ ಸಂಗೀತ ಆಸಕ್ತರ ಮೆಚ್ಚುಗೆಗೆ ಪಾತ್ರವಾಯಿತು.
ಇವರೊಂದಿಗೆ ತಬಲಾದಲ್ಲಿ ನವೀನ್ ಶೇಟ್ ಹೊನ್ನಾವರ, ಹಾರ್ಮೋನಿಯಂ ನಲ್ಲಿ ವಿನೋದ ಹೊನ್ನಾವರ ಹಾಗೂ ಪ್ಲೂಟ್ ನಲ್ಲಿ ವಿನಾಯಕ ಭಂಡಾರಿ ಸಾತ್ ನೀಡಿವರು.
Be the first to comment