ರಾಜ್ಯ ಸುದ್ದಿಗಳು
ದೇವನಹಳ್ಳಿ
ತಾಲೂಕಿನ ಸೋಲೂರು, ದೇವಗಾನಹಳ್ಳಿ, ಕೊಪ್ಪಲು ಮಾರ್ಗದ ಕೆರೆಯ ರಾಜಕಾಲೂವೆಯಿಂದ ನೀರಿನ ಪ್ರಮಾಣ ಹೆಚ್ಚಳಗೊಂಡು ರಾಜಕಾಲೂವೆಯಿಂದ ಉಕ್ಕಿದ ನೀರು ಅಕ್ಕಪಕ್ಕದ ಕೃಷಿ ಬೆಳೆಯ ಜಮೀನುಗಳಿಗೆ ನುಗ್ಗಿ ಬೆಳೆ ಹಾನಿಗೆ ಕಾರಣವಾಗಿದೆ.
ಸತತವಾಗಿ ಸುರಿಯುತ್ತಿರುವ ಮಳೆಯಿಂದಾಗಿ ತಾಲೂಕಿನ ಕೆರೆಯಂಚಿನಲ್ಲಿರುವ ಸುಮಾರು ಎಕರೆಯಷ್ಟು ಜಮೀನುಗಳಲ್ಲಿ ರಾಗಿ, ಭತ್ತ ಸೇರಿದಂತೆ ಇತರೆ ಬೆಳೆಗಳನ್ನು ಇಟ್ಟಿದ್ದ ರೈತರ ಜಮೀನುಗಳಿಗೆ ಕೆರೆಯ ನೀರು ಕೋಡಿ ಹರಿದು ದಾಂದುಡಿ ಇಡುತ್ತಿದೆ.
ರೈತರು ಕಂಗಾಲು: ಈ ಬಾರಿ ರಾಗಿ ಫಸಲು ನೀರಿಕ್ಷೆಯಲ್ಲಿದ್ದ ರೈತರ ಬದುಕಿಗೆ ಮಳೆ ಶಾಪವಾಗಿ ಪರಿಣಮಿಸಿದ್ದು, ಗ್ರಾಮೀಣ ಭಾಗದ ರೈತರ ಸ್ಥಿತಿ ಚಿಂತಾಜನಕವಾಗಿದೆ. ಕಳೆದ ವರ್ಷದಲ್ಲಿ ರಾಗಿ ಫಸಲು ಚೆನ್ನಾಗಿ ಬಂದಿತ್ತು. ಅಲ್ಲಲ್ಲಿ ಮಳೆ ಬಿದ್ದು, ಅಲ್ಪ ಪ್ರಮಾಣದಲ್ಲಿ ರಾಗಿಗೆ ಪೆಟ್ಟುಬಿದ್ದಿತ್ತು. ಆದರೆ ಈ ಬಾರಿಯ ರಾಗಿ ಫಸಲು ಕೈ ಸೇರುವುದಿಲ್ಲವೆಂದು ಅರಿತ ರೈತರು ಕಂಗಾಲಾಗಿದ್ದಾರೆ.
Be the first to comment