ರಾಜ್ಯ ಸುದ್ದಿಗಳು
ದೇವನಹಳ್ಳಿ
ವರುಣನ ರುಧ್ರ ನರ್ತನದಿಂದಾಗಿ ದೇವನಹಳ್ಳಿ ನಗರದ ಹೊರವಲಯದಲ್ಲಿರುವ ರೈಲ್ವೆ ಅಂಡರ್‌ಪಾಸ್‌ಗಳಲ್ಲಿ ಮೊಣಕಾಲುದ್ದ ನೀರು ನಿಂತು ಕೆರೆಯಂತಾಗಿದೆ. ನಗರದ ಬೊಮ್ಮವಾರ ಮಾರ್ಗದ ರೈಲ್ವೆ ಸೇತುವೆ, ಕೋಡಿಮಂಚೇನಹಳ್ಳಿ ಗ್ರಾಮಕ್ಕೆ ಹೋಗುವ ರೈಲ್ವೆ ಸೇತುವೆ ಮತ್ತು ಬೈಪಾಸ್‌ನಿಂದ ಐವಿಸಿ ರಸ್ತೆಗೆ ಸಂಪರ್ಕ ಕಲ್ಪಿಸುವ ರೈಲ್ವೆ ಸೇತುವೆಯ ಅಂಡರ್‌ಪಾಸ್‌ನಲ್ಲಿ ನೀರು ಹೆಚ್ಚು ನಿಂತಿರುವುದರಿಂದ ವಾಹನ ಸಂಚಾರಕ್ಕೆ ಅಡ್ಡಿಯನ್ನುಂಟು ಮಾಡಿದೆ. ವರುಣನ ಈ ರುಧ್ರ ನರ್ತನಕ್ಕೆ ಜನರು ತತ್ತರಿಸಿದ್ದಾರೆ. ಬೊಮ್ಮವಾರ, ಐವಿಸಿ, ಕೋಡಿ ಮಂಚೇನಹಳ್ಳಿ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ಮತ್ತೊಂದು ರಸ್ತೆಯನ್ನು ಸುತ್ತಿಬಳಸಿ ವಾಹನ ಸಂಚಾರ ಮಾಡುವ ಪರಿಸ್ಥಿತಿ ಎದುರಾಗಿದೆ.
ಪೊಲೀಸ್ ಇಲಾಖೆಯಿಂದ ಕೆರೆಗೆ ನಿಷೇಧ: ನಗರದ ಹೊರವಲಯದ ದೊಡ್ಡಕೆರೆಯಲ್ಲಿ ಕೋಡಿ ಹರಿಯುವಿಕೆ ವೇಗ ಹೆಚ್ಚಾಗಿದ್ದರಿಂದ ಕೆರೆಯ ಕೋಡಿ ಜಾಗದಲ್ಲಿ ಪೊಲೀಸ್ ಇಲಾಖೆ ನಿಷೇಧ ಹೇರಿದ್ದಾರೆ. ಕೆರೆಯ ಏರಿಯಿಂದ ದೊಡ್ಡಬಳ್ಳಾಪುರ ಮಾರ್ಗವಾಗಿ ಸಂಚರಿಸುವ ಅರಣ್ಯ ಇಲಾಖೆಯ ಮುಂಭಾಗದಲ್ಲಿರುವ ಕೋಡಿ ಮಂಚೇನಹಳ್ಳಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಹಳೇ ಮೇಲ್ಸೇತುವೆ ಕುಸಿಯುವ ಹಂತ ತಲುಪಿದ್ದು, ಯಾವ ಸಮಯದಲ್ಲಿ ಬೀಳುತ್ತದೆಯೋ ಎಂಬ ಆತಂಕದಲ್ಲಿ ಮುಂಜಾಗೃತ ಕ್ರಮವಾಗಿ ಆ ಪ್ರದೇಶವನ್ನು ಸಹ ಪೊಲೀಸರು ನಿಷೇಧ ಹೇರಿದ್ದಾರೆ.
Be the first to comment