ಪರಿಸರ ಸ್ನೇಹಿ ದೀಪಾವಳಿ ಆಚರಿಸಲು ಪರಿಸರ ಸ್ನೇಹಿ ಅಖಿಲೇಶ್ ಮನವಿ

ವರದಿ ಗ್ಯಾನಪ್ಪ ದೊಡ್ಡಮನಿ ಮಸ್ಕಿ

ರಾಜ್ಯ ಸುದ್ದಿಗಳು

 

ಮೈಸೂರು

CHETAN KENDULI

ಅಕ್ಟೋಬರ್ 22 : ದೀಪದಿಂದ ದೀಪ ಹಚ್ಚಿ ಪರಿಸರ ಸ್ನೇಹಿಯಾಗಿ ದೀಪಾವಳಿ ಆಚರಣೆ ಮಾಡುವಂತೆ ಪರಿಸರ ಪ್ರೇಮಿ, ಪತ್ರಕರ್ತ ಅಖಿಲೇಶ್ ಅವರು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.ಪಟಾಕಿ ಸಿಡಿಸುವುದರಿಂದ ಹಣ ಅನಗತ್ಯವಾಗಿ ಪೋಲಾಗುವುದರ ಜೊತೆಗೆ ಶಬ್ಧ ಮಾಲಿನ್ಯ ಉಂಟಾಗಲಿದೆ. ವಾತಾವರಣದಲ್ಲಿ ವಾಸಿಸುವ ಗುಬ್ಬಿ ಸೇರಿದಂತೆ ಹಲವು ಪಕ್ಷಿಗಳಿಗೆ ಮಾರಕವಾಗಲಿದ್ದು, ಪಟಾಕಿ ಸಿಡಿಸುವುದರಿಂದ ವಂಶಾಭಿವೃದ್ಧಿಗೆ ಸಾಕಷ್ಟು ತೊಡಕಾಗಲಿದ್ದು, ಪರಿಸರ ಸರಪಳಿಗೆ ಕುಂದು ಬರಲಿದೆ ಎಂದು ತಿಳಿಸಿದರು.ಅಲ್ಲದೇ, ಕಾರ್ತಿಕ ಮಾಸದುದ್ದಕ್ಕೂ ಪಾಟಕಿ ಸಿಡಿಸುವುದರಿಂದ ಜನರಿಗೆ ಸಾಕಷ್ಟು ಕಿರಿಯುಂಟಾಗುವುದಲ್ಲದೇ ಪಶು-ಪ್ರಾಣಿಗಳ ಆರೋಗ್ಯದ ಮೇಲೂ ವ್ಯತಿರಿಕ್ತ ಪರಿಣಾಮ ಉಂಟಾಗಲಿದ್ದು, ಸಿಡಿ ಮದ್ದಿನಿಂದ ಬರುವ ಶಬ್ಧ ಹಾಗೂ ಹೊಗೆಯಿಂದ ಪರಿಸರ ಕಲುಷಿತಗೊಂಡು, ಜನರಿಗೆ ಅದರಲ್ಲೂ ಮಕ್ಕಳು ಮತ್ತು ವೃದ್ಧರಲ್ಲಿ ಅಸ್ತಮ ಸೇರಿದಂತೆ ಉಸಿರಾಟದ ಖಾಯಿಲೆಗೆ ಮಾರಕವಾಗಲಿದೆ.

ಪಟಾಕಿ ಸಿಡಿತದಿಂದ ಪ್ರತಿವರ್ಷವು ಸಾವಿರಾರು ಮಂದಿ ಕಣ್ಣು ಕಳೆದುಕೊಂಡ‌ ಅಥವಾ ಕಣ್ಣಿನ ತೊಂದರೆಗೆ ತುತ್ತಾಗುವ ಸಂಭವ ಹೆಚ್ಚುತ್ತಿರುವುದು ವರದಿಯಾಗುತ್ತಿದ್ದು, ನಾಗರೀಕರು ಪಟಾಕಿ ಸಿಡಿಸಿ ಶಬ್ಧ ಹಾಗೂ ವಾಯು ಮಾಲಿನ್ಯ ಉಂಟು ಮಾಡಿ, ಪರಿಸರಕ್ಕೆ ಧಕ್ಕೆ ತರವುದಲ್ಲದೇ ತಮ್ಮ ಆರೋಗ್ಯವನ್ನ ಕೆಡಿಸಿಕೊಳ್ಳುವು ಎಷ್ಡು ಮಟ್ಟಿಗೆ ಸರಿ ಎನ್ನುವುದನ್ನ ನಾಗರೀಕರರು ಅರ್ಥ ಮಾಡಿಕೊಳ್ಳಬೇಕಿದೆ ಎಂದರು.ದೀಪಾವಳಿ ಪವಿತ್ರ ಹಬ್ಬವಾಗಿದ್ದು, ಹಣತೆಗಳನ್ನು ಹಚ್ವಿ ಸಂಭ್ರಮದಿಂದ ಹಬ್ಬ ಆಚರಣೆ ಮಾಡುವ ಮೂಲಕ ಸ್ಥಳೀಯವಾಗಿ ಕುಂಬಾರಿಕೆ ಮಾಡುವ ಹಣತೆಗಳನ್ನು ಖರೀದಿಸಿ, ಆ ಕುಟುಂಬಳ ಆರ್ಥಿಕವಾಗಿ ಸಬಲರಾಗಲು ದೀಪಾವಳಿ ಮೂಲಕ ಸರ್ವರು ಸಹಕಾರ ನೀಡಬೇಕೆಂದು ಅವರು ವಿನಂತಿಸಿದ್ದಾರೆ.ಹಬ್ಬವೊಂದು ಪರಿಸರದ ಮೇಲೆ ಹಾಗೂ ನಾಗರೀಕರ ಆರೋಗ್ಯದ ಮೇಲೆ‌ ಕೆಡುಕುಂಟು ಮಾಡಬಾರದು. ಅದ್ದರಿಂದ ಜನರು ದೀಪದಿಂದ ದೀಪಗಳನ್ನು ಬೆಳಗಿಸಿ ನಮ್ಮ ಸುಂದರ ನಾಳೆಗಳನ್ನು ಕಟ್ಟಲು ನಾವೆಲ್ಲರೂ ಮುಂದಾಗಬೇಕಿದೆ ಎಂದು ಅವರು ಕಳಕಳಿ ವ್ಯಕ್ತಪಡಿಸಿದ್ದಾರೆ.

Be the first to comment

Leave a Reply

Your email address will not be published.


*