ಕಾಡುಕೋಣ ಹಾವಳಿಗೆ ಕ್ರಮ ಕೈಗೊಳ್ಳುವಂತೆ ರೈತರಿಂದ ಒತ್ತಾಯ

ವರದಿ: ಸ್ಫೂರ್ತಿ ಎನ್ ಶೇಟ್

ಜಿಲ್ಲಾ ಸುದ್ದಿಗಳು

ಶಿರಸಿ:

CHETAN KENDULI

ತಾಲೂಕಿನ ಕುಳವೆ ಗ್ರಾ.ಪಂ ವ್ಯಾಪ್ತಿಯಲ್ಲಿ ಕುಳವೆಯ ಸೀತಾರಾಮ ಗಣಪತಿ ಹೆಗಡೆ, ಮೇಧಾತಿತಿ ಶಾಸ್ತ್ರೀ, ದೇವರು ನಾರಾಯಣ ಗೌಡ ಸೇರಿದಂತೆ ಅನೇಕ ರೈತರಿಗೆ ಸೇರಿರುವ ಹತ್ತಾರು ಎಕರೆ ಭತ್ತದ ಗದ್ದೆ ಕಾಡುಕೋಡಣ ದಾಳಿಯಿಂದ ನಾಶವಾಗಿದೆ.

ನಾಟಿ ಮಾಡಿ ಚಿಗುರಿದ ಭತ್ತದ ಸಸಿಗಳನ್ನು ತಿನ್ನುವುದರ ಜೊತೆಗೆ ಗದ್ದೆಗಳಲ್ಲಿ ಓಡಾಡಿ ನಾಶ ಮಾಡಿರುವುದು ರೈತರ ಆತಂಕಕ್ಕೆ ಕಾರಣವಾಗಿದೆ ಎಂದು ರೈತರು ತಿಳಿಸಿದ್ದು, ಸಂಬಂಧಪಟ್ಟ ಇಲಾಖೆ ಸೂಕ್ತ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.

ಮೂರು ಕಾಡುಕೋಣ ಹಾಗೂ ಒಂದು ಕರು ಭತ್ತದ ಗದ್ದೆಗಳಲ್ಲಿ ಓಡಾಡಿ ನಷ್ಟ ಮಾಡುತ್ತಿವೆ. ನೆಟ್ಟಿ ಮಾಡಿದ ಭತ್ತದ ಗದ್ದೆಗಳು ಸಂಪೂರ್ಣ ಹಾಳಾಗಿವೆ. ಗದ್ದೆಗಳಲ್ಲಿ ದೊಡ್ಡ ದೊಡ್ಡ ಹೊಂಡ ಬಿದ್ದಿದ್ದು, ಸಸಿಗಳನ್ನು ತಿಂದ ಪರಿಣಾಮ ತೀವ್ರ ನಷ್ಟ ಉಂಟಾಗಿದೆ. ಹೀಗಾಗಿ ಅರಣ್ಯ ಇಲಾಖೆ ಸೂಕ್ತ ಕ್ರಮ ಕೈಗೊಳ್ಳುವುದರ ಜೊತೆಗೆ ಸ್ಥಳಕ್ಕೆ ಭೇಟಿ ನೀಡಿ, ಪರಿಹಾರ ಒದಗಿಸಲು ಕ್ರಮ ಕೈಗೊಳ್ಳಬೇಕಿದೆ ಎಂದು ಕುಳವೆಯ ಮೇಧಾತಿತಿ ಶಾಸ್ತ್ರೀ ಒತ್ತಾಯಿಸಿದ್ದಾರೆ.

Be the first to comment

Leave a Reply

Your email address will not be published.


*