ರಾಜ್ಯ ಸುದ್ದಿಗಳು
ದೇವನಹಳ್ಳಿ
ಕೆಂಪೇಗೌಡ ಏರ್ ಪೋರ್ಟ್ ಹೊಂದಿರುವ, ಕೋಟಿಗಟ್ಟಲೇ ಆದಾಯ ಬರುವ ಇಡೀ ರಾಜ್ಯದ ದೇವನಹಳ್ಳಿ ತಾಲೂಕಿನ ಶ್ರೀಮಂತ ಅಣ್ಣೇಶ್ವರ ಗ್ರಾಮ ಪಂಚಾಯಿತಿ ಗೆ ಪಿಡಿಒ ಆಗಿ ಬಂದವರು, ವರ್ಗಾವಣೆಯಾದರೂ ಗ್ರಾಮ ಪಂಚಾಯಿತಿ ಪಿಡಿಒ ಪೋಸ್ಟ್ ಗೆ ಮಾತ್ರ ತಕರಾರು ಆಗುತ್ತಲೇ ಇದೆ.ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಪಿಡಿಒಗಳ ನೆಚ್ಚಿನ ಗ್ರಾಪಂ ಆಗಿರುವ ಅಣೇಶ್ವರ ಗ್ರಾಮಕ್ಕೆ ಎಲ್ಲರೂ ಟ್ರೈ ಮಾಡ್ತಾರೆ ಆದರೆ ಅದನ್ನು ಗಿಟ್ಟಿಸಿಕೊಂಡು ದಕ್ಕಿಸಿಕೊಳ್ಳೋದು ಕೆಲವರೇ ಮಾತ್ರ. ಅಂತಹ ಸಾಲಿನಲ್ಲಿ ನಿಲ್ಲುವವರಲ್ಲಿ ವೆಂಕಟೇಶ ಎಂ. ಇನಾಂದಾರ ಕೂಡ ಒಬ್ಬರು.ಅದ್ಯಾಕೋ ಇವರು ಅಣೇಶ್ವರ ಪಂಚಾಯಿತಿಗೆ ಪಿಡಿಒ ಆಗಿ ಬಂದ ಬಳಿಕ ಇಲ್ಲಿಂದ ಬೇರೆಕಡೆ ಪೋಸ್ಟಿಂಗ್ ಮಾಡಿದ್ರೆ ಅವರು ಅಲ್ಲಿ ಹೋಗಿ ಡ್ಯೂಟಿಗೆ ಜಾಯಿನ್ ಆಗುವುದಕ್ಕೆ ಬದಲಾಗಿ ಸೀದಾ ಕೋರ್ಟ್‌ಗೆ ಹೋಗಿ ಸ್ಟೇ ತಂದು ಮತ್ತೆ ಇದೇ ಪಂಚಾಯಿತಿಗೆ ಬಂದು ಠಿಕಾಣಿ ಹಾಕ್ತಾರೆ. ಕೆಲ ಗ್ರಾಮ ಪಂಚಾಯಿತಿ ಯಿಂದ ವರ್ಗಾವಣೆ ಆದ ಒಂದೆರಡು ತಿಂಗಳಲ್ಲಿ ರಾತ್ರೋರಾತ್ರಿ ಪಿಡಿಒ ಗಳ ಬದಲಾವಣೆಯಿಂದ ಅಭಿವೃದ್ಧಿ ಗೆ ಸಾಕಷ್ಟು ಹಿನ್ನಡೆಯಾಗುತ್ತಿದೆ ಎಂಬುದು ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.
ಸದ್ಯ ಅಣೇಶ್ವರ ಗ್ರಾಮ ಪಂಚಾಯಿತಿ ಪಿಡಿಒ ವರ್ಗಾವಣೆಗೆ ಕೋರ್ಟ್ ನಿಂದ ಆದೇಶವಾಗಿದೆ. ಈ ಹಿಂದೆ ಕೂಡ ಇನಾಂದಾರ ಅವರನ್ನು ಸರ್ಕಾರ ವರ್ಗಾವಣೆ ಮಾಡಿದಾಗ ಅವರು ಕೋರ್ಟ್‌ಗೆ ಹೋಗಿ ಸ್ಟೇ ತಂದು ವಾಪಾಸ್ ಬಂದಿದ್ದರು.ಆದರೀಗ ಕೋರ್ಟ್ ಸರ್ಕಾರಿ ಆದೇಶವನ್ನು ಎತ್ತಿಯಿಡಿದಿದ್ದು, ಅಣ್ಣೇಶ್ವರ ಪಂಚಾಯಿತಿ ಬಿಟ್ಟು ಹೊರಡಬೇಕು. ಆದರೆ ಇನಾಂದಾರ ಅವರು ಮಾತ್ರ ಈ ಪಂಚಾಯಿತಿ ಬಿಟ್ಟು ಕದಲುತ್ತಿಲ್ಲ. ಕೇಳಿದರೆ ಸರ್ಕಾರ ಆದೇಶ ಮಾಡಲಿ ಎಂಬ ಮಾತು ಕೇಳಿಬರುತ್ತಿದೆ.
ಇನ್ನು ಈ ಹಿಂದಿನ ಪಿಡಿಒ ಕುಮಾರ್ ಅವರಿಗೆ ಜಾಗ ಮಾಡಿಕೊಡಬೇಕಿತ್ತು. ಆದರೆ ಇನಾಂದರ ಅವರು ಇಲ್ಲಿಂದ ಕದಲದ ಹೊರತು ಅವರಿಗೆ ಇಲ್ಲಿ ಪೋಸ್ಟ್ ಸಿಗುವುದಿಲ್ಲ. ಹೀಗಾಗಿ ಈ ಬಾರಿ ಕೋರ್ಟ್ ಕೊಟ್ಟರು ಸರ್ಕಾರ ಮನಸು ಮಾಡದ ಹಿನ್ನೆಲೆಯಲ್ಲಿ ಇನಾಂದಾರ ಅವರೇ ಸರದಾರನಾಗಿ ಉಳಿದಿದ್ದಾರೆ.
ಮುಂದೆ ಕೋರ್ಟ್ ಆದೇಶದ ಮೇಲೆ ಇನಾಂದರ ಅವರನ್ನು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ವರ್ಗಾವಣೆ ಮಾಡುತ್ತದೋ ಇಲ್ಲವೋ ಸುಮ್ಮನೇ ಕೂರುತ್ತದೋ ಎಂಬುದನ್ನು ಕಾದುನೋಡಬೇಕಿದೆ.ಒಟ್ಟಿನಲ್ಲಿ ಅಣ್ಣೇಶ್ವರ ಪಂಚಾಯಿತಿ ಅಂದ್ರೆ ಸಾಕು ಇಲ್ಲಿಗೆ ಬರೋ ಪಿಡಿಒಗಳು ಚೇರ್ ಗೆ ಗಂ ಹಾಕಿ ಕೂತ್ಕೋತಾರೆ, ಬೇರೆ ಕಡೆ ಹೋಗಬೇಕು ಅಂದ್ರೆ ಮನಸು ಮಾಡೊಲ್ಲ., ಸದ್ಯ ಈಗ ನಮ್ಮ ಪಂಚಾಯಿತಿಗೆ ಇನಾಂದಾರ ಅವರೇ ಸರದಾರರು ಎಂಬಾತಾಗಿದೆ.
Be the first to comment