ಜಿಲ್ಲಾ ಸುದ್ದಿಗಳು
ಭಟ್ಕಳ
ಸರಕಾರ ಪಾರದರ್ಶಕ ಕಾಯ್ದೆಯನ್ವಯದಂತೆ ಟೆಂಡರ್ ಮೂಲಕ ನೀಡಬೇಕಾದ ಕಾಮಗಾರಿಯನ್ನು ನೇರವಾಗಿ ನಿರ್ಮಿತಿ ಕೇಂದ್ರ, ಲ್ಯಾಡ್ ಆರ್ಮಿಗಳಿಗೆ ನೀಡಿ ರಾಜ್ಯದ ಎಲ್ಲಾ ಗುತ್ತಿಗೆದಾರರಿಗೆ ಸಂಕಷ್ಟಕ್ಕೀಡು ಮಾಡುವುದರೊಂದಿಗೆ ಅನ್ಯಾಯವೆಸಗುತ್ತಿದ್ದನ್ನು ವಿರೋಧಿಸಿ ಅಕ್ಟೋಬರ್ ೨೭ ಬುಧವಾರದಂದು ಕಾರವಾರ ಜಿಲ್ಲಾಧಿಕಾರಿ ಕಚೇರಿ ಎದುರಲ್ಲಿ ರಾಜ್ಯ ಗುತ್ತಿಗೆದಾರರ ಸಂಘದ ರಾಜ್ಯಾಧ್ಯಕ್ಷ ಕೆಂಪಣ್ಣ ಅವರ ಮುಂದಾಳತ್ವದಲ್ಲಿ ಬ್ರಹತ ಪ್ರತಿಭಟನೆ ನಡೆಯಲಿದೆ ಎಂದು ತಾಲೂಕು ಗುತ್ತಿಗೆದಾರರ ಸಂಘದ ಅಧ್ಯಕ್ಷ ಟಿ.ಡಿ. ನಾಯ್ಕ ತಿಳಿಸಿದರು.ಅವರು ಭಾನುವಾರದಂದು ಭಟ್ಕಳ ಪ್ರವಾಸಿ ಮಂದಿರದಲ್ಲಿ ಪತ್ರಕರ್ತರ ಜೊತೆಗೆ ಮಾತನಾಡುತ್ತಿದ್ದರು.‘ಗುತ್ತಿಗೆದಾರರು ಈಗಾಗಲೇ ಸಾಕಷ್ಟು ಕಾಮಗಾರಿಯನ್ನು ಮಾಡಿದ್ದು, ನಮಗೆ ಸಿಗಬೇಕಾದ ಕಾಮಗಾರಿಯ ಬಿಲ್ ಮೊತ್ತ ಇನ್ನು ಬಹುತೇಕ ಬಾಕಿಯಿದೆ. ಈ ಮಧ್ಯೆ ಸರಕಾರ ನಿರ್ಮಿತಿ ಕೇಂದ್ರ ಹಾಗೂ ಲ್ಯಾಡ್ ಆರ್ಮಿಗೆ ಕಾಮಗಾರಿಯನ್ನು ಅತಿ ಹೆಚ್ಚಿನ ರೀತಿಯಲ್ಲಿ ನೀಡುತ್ತಿದ್ದಾರೆ. ಇದರಲ್ಲಿ ಯಾವುದೇ ಟೆಂಡರ ಸಹ ಕರೆಯದೇ ನೇರವಾಗಿ ನೀಡುತ್ತಿದ್ದಾರೆ. ಇದನ್ನು ಗುತ್ತಿಗೆದಾರರ ಸಂಘ ವಿರೋಧಿಸುತ್ತದೆ. ಹಾಗೂ ೫ ಸಾವಿರ ಗುತ್ತಿಗೆದಾರರು ಅಕ್ಟೋಬರ್ ೨೭ ರಂದು ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ನಮ್ಮ ಉದ್ದೇಶ ಗುತ್ತಿಗೆದಾರರ ಸಂಕಷ್ಟವನ್ನು ಅರಿತು ನಮಗೆ ಸ್ಪಂದಿಸಿ ನ್ಯಾಯ ಒದಗಿಸುವ ಕೆಲಸ ಸರಕಾರ ಮಾಡಬೇಕಿದೆ ಎಂದು ಹೇಳಿದರು.
ತಾಲೂಕು ಸಂಘದ ಕಾರ್ಯದರ್ಶಿ ಸತೀಶಕುಮಾರ ನಾಯ್ಕ ಮಾತನಾಡಿ ೨ ವರ್ಷ ಕೋವಿಡನಿಂದ ಗುತ್ತಿಗೆದಾರರಿಗೆ ಸಕಾಲದಲ್ಲಿ ಕಾಮಗಾರಿ ಬಿಲ್ ಆಗದೇ ಅವರ ಆರ್ಥಿಕ ಸಂಕಷ್ಟದಿAದ ಆತ್ಮಹತ್ಯೆ ಮಾಡಿಕೊಂಡ ಘಟನೆ ಸಹ ನಡೆದಿದೆ. ಹಾಲಿ ಪರಿಸ್ಥಿತಿಯಲ್ಲಿ ಸರಕಾರ ಪಾರದರ್ಶಕ ಕಾಯ್ದೆ ಮೀರಿ ರಾಜಕಾರಣಿಗಳು, ಅಧಿಕಾರಿಗಳು ೫ ಲಕ್ಷಕ್ಕಿಂತ ಕಡಿಮೆ ಇರುವ ಕಾಮಗಾರಿ ಕೆಲಸವನ್ನು ನೇರವಾಗಿ ನೀಡುತ್ತಿರುವ ಹಿನ್ನೆಲೆ ಇದು ಗುತ್ತಿಗೆದಾರರಿಗೆ ಅನ್ಯಾಯ ಮಾಡಿದಂತೆ ಆಗಿದೆ. ಸರಕಾರದ ಪಾರದರ್ಶಕ ಕಾಯ್ದೆಯನ್ವಯ ಯಾವುದೇ ಕಾಮಗಾರಿಯನ್ನು ತುಂಡು ಕಾಮಗಾರಿಯನ್ನಾಗಿ ವಿಂಗಡಣೆ ಮಾಡಬಾರದು ಎಂಬ ಉದ್ದೇಶದಿಂದ ಅದನ್ನು ಪ್ಯಾಕೇಜ್ ಕಾಮಗಾರಿಯಾಗಿ ಪರಿಗಣಿಸಿ ನೀಡಬೇಕೆಂಬ ಕಟ್ಟುನಿಟ್ಟಿನ ಸೂಚನೆ ಇದೆ. ಇಂತಹ ಸಂದರ್ಭದಲ್ಲಿ ಸದ್ಯ ತಾಲೂಕು ಪಂಚಾಯತ, ಜಿಲ್ಲಾ ಪಂಚಾಯತ ಅಸ್ತಿತ್ವದಲ್ಲಿರದ ಕಾರಣ ಸರಕಾರದ ಅನುದಾನವನ್ನು ತುಂಡು ಕಾಮಗಾರಿಯನ್ನಾಗಿ (೫ ಲಕ್ಷಕ್ಕಿಂತ ಕಡಿಮೆ) ವಿಂಗಡಿಸಿ ತಮ್ಮ ಆಪ್ತರಿಗೆ ನೀಡುವ ಕೆಲಸ ಆಗುತ್ತಿದೆ. ಇದನ್ನು ಗುತ್ತಿಗೆದಾರರ ಸಂಘ ಖಂಡಿಸುತ್ತದೆ. ಇನ್ನು ಇಂದಿನ ಪೆಟ್ರೋಲ್, ಡಿಸೇಲ್ ದರ ಏರಿಕೆ, ಕಚ್ಚಾ ವಸ್ತುಗಳ, ಕಬ್ಬಿಣ ಸಹಿತ ಇನ್ನಿತರ ಕಾಮಗಾರಿ ಸಂಬAಧಿಸಿದ ಸಾಮಗ್ರಿಗಳ ದರ ಹೆಚ್ಚಳವಾಗಿದೆ. ಆದರೆ ಗುತ್ತಿಗೆದಾರರಿಗೆ ಮಾತ್ರ ಇನ್ನು ೨-೩ ವರ್ಷದ ಹಿಂದೆ ಇರುವ ಎಸ್.ಆರ್. ದರ ಈಗಾಗಲೇ ಪಾಲನೆ ಮಾಡಲು ಸಾಧ್ಯವಿಲ್ಲ. ಆಯಾ ವರ್ಷಕ್ಕೆ ಇತುವ ಕಚ್ಚಾ ವಸ್ತುಗಳ ದರದ ಮೇಲೆ ಆಧರಿಸಿ ಎಸ್. ಆರ್. ದರವನ್ನು ನಿಗದಿ ಮಾಡಬೇಕೆಂಬ ಆಗ್ರಹ ನಮ್ಮದಾಗಿದೆ. ಇವೆಲ್ಲ ಅಂಶಗಳೊAದಿಗೆ ಗುತ್ತಿಗೆದಾರರು ಅನಿವಾರ್ಯವಾಗಿ ಕಾಮಗಾರಿ ಮಾಡಲೇಬೇಕಾಗಿದೆ. ಈಗಾಗಲೇ ಈ ವ್ರತ್ತಿಗೆ ಬಂದಿರುವ ನಮಗೆ ಬೇರೆ ವ್ರತ್ತಿ ತಿಳಿದಿಲ್ಲವಾಗಿದೆ. ಈ ಬಗ್ಗೆ ಸರಕಾರದ ಸ್ಪಂದನೆ ಅಗತ್ಯ ಎಂಬ ಬೇಡಿಕೆಯಾಗಿದೆ ಎಂದರು.ಕಾಮಗಾರಿ ನಡೆಸಲು ಗುದ್ದಲಿ ಪೂಜೆ ಅಡ್ಡಿ: ಇಲಾಖೆಯ ಅಧಿಕಾರಿಗಳಿಂದ ಗುತ್ತಿಗೆದಾರರಿಗೆ ಹಿಂಸೆ
ಟೆAಡರ್ ಪಡೆದ ಗುತ್ತಿಗೆದಾರರಿಗೆ ಸರಕಾರದಿಂದ ಆದೇಶ ಸಿಕ್ಕು ಕಾಮಗಾರಿ ಆರಂಭಕ್ಕೆ ಇಲಾಖೆಯ ಅಧಿಕಾರಿಗಳು ಬಿಡುವುದಿಲ್ಲವಾಗಿದ್ದು ಕಾರಣ ಜನಪ್ರತಿನಿಧಿಗಳ ಗುದ್ದಲಿ ಪೂಜೆಯ ಬಳಿಕವೇ ಕಾಮಗಾರಿ ಆರಂಭಿಸಬೇಕೆAಬ ಹಿಂಸೆ ಒತ್ತಡ ಬರುತ್ತಲಿದೆ. ಒಂದು ಸರಕಾರದ ಆದೇಶದಂತೆ ಕಾಮಗಾರಿ ಆರಂಭಿಸಬೇಕೋ ಅಥವಾ ಅಧಿಕಾರಿಗಳ ಒತ್ತಡಕ್ಕೊಳಗಾಗಿ ಗುದ್ದಲಿ ಪೂಜೆಯ ತನಕ ಕಾಯಬೇಕೊ ಎಂಬುದು ಗುತ್ತಿಗೆದಾರರಿಗೆ ಅರ್ಥವಾಗುತ್ತಿಲ್ಲ ಎಂದು ತಾಲೂಕು ಗುತ್ತಿಗೆದಾರರ ಸಂಘದ ಅಧ್ಯಕ್ಷ ಟಿ.ಡಿ. ನಾಯ್ಕ ಅಸಮಾಧಾನ ವ್ಯಕ್ತಪಡಿಸಿದರು.ಈ ಸಂದರ್ಭದಲ್ಲಿ ಉಪಾಧ್ಯಕ್ಷ ಆನಂದ ದೇವಾಡಿಗ, ಸಹ ಕಾರ್ಯದರ್ಶಿ ಮೋಹನ ಮೋಗೇರ, ಹಿರಿಯ ಗುತ್ತಿಗೆದಾರರಾದ ಸುಲೇಮಾನ್, ಹಮ್ಮಿದ್ ಸಾಬ್ ಉಪಸ್ಥಿತರಿದ್ದರು.
Be the first to comment