ಜಿಲ್ಲಾ ಸುದ್ದಿಗಳು
ಹೊನ್ನಾವರ
ಅಕಾಲಿಕ ಮಳೆ ಅನೇಕ ರೈತರ ಭತ್ತದ ಬೆಳೆಗಳನ್ನು ಹಾನಿ ಮಾಡಿದ್ದು ತೀರಾ ಸಂಕಷ್ಟಕ್ಕೆ ರೈತ ಪರದಾಡುವಂತಹ ಸ್ಥಿತಿ ನಿರ್ಮಾಣವಾಗಿದೆ. ಕಷ್ಟಪಟ್ಟು ಬೆಳೆದ ಬೆಳೆಯು ಅಕಾಲಿಕ ಮಳೆಯಿಂದ ಬಹುತೇಕ ನೀರು ಪಾಲಾಗಿ ನಾಶವಾಗಿದೆ. ಇದನ್ನೇ ನಂಬಿದ ರೈತ ಕಂಗಾಲಾಗಿದ್ದಾನೆ.
ಕೃಷಿ ಅಧಿಕಾರಿ ಲಕ್ಷ್ಮಿ ದಳವಾಯಿ ಹಾನಿಯಾದ ಪ್ರದೇಶಕ್ಕೆ ಭೇಟಿ ನೀಡಿದ್ದು, ಅಪಾರ ನಷ್ಟ ಸಂಭವಿಸಿದ್ದನ್ನು ಮನಗಂಡಿದ್ದಾರೆ. ಯಾವ ರೈತರಿಗೆ ಮಳೆಯಿಂದ ಬೆಳೆಗಳು ಹಾನಿಯಾಗಿದೆಯೋ ಅವರು ಅವರು ಹೊನ್ನಾವರ ಕೃಷಿ ಇಲಾಖೆಗೆ ಪರಿಹಾರಕ್ಕಾಗಿ ಅರ್ಜಿ ಸಲ್ಲಿಸಬಹುದಾಗಿದೆ ಎಂದು ತಿಳಿಸಿದ್ದಾರೆ.
ಮಳೆಯಿಂದ ಬೆಳೆ ಹಾಳಾದ ರೈತರು ಆಧಾರ್ ಕಾರ್ಡ್, ಪಹಣ ಪತ್ರಿಕೆ ಹಾಗೂ ಬ್ಯಾಂಕ್ ಖಾತೆಯ ನಕಲು ಪ್ರತಿಯೊಂದಿಗೆ ಅರ್ಜಿ ಸಲ್ಲಿಸಬಹುದು ಎಂದು ಹೊನ್ನಾವರ ಕೃಷಿ ಅಧಿಕಾರಿ ಲಕ್ಷ್ಮೀ ದಳವಾಯಿ ತಿಳಿಸಿದ್ದಾರೆ.
Be the first to comment