ಗೀತಂ ಯುನಿವರ್ಸಿಟಿ ಕ್ಯಾಂಪಸ್ನಲ್ಲಿ ಅಚಿವರ್ಸ್ ಡೇ ಆಚರಣೆ

ವರದಿ ಗುರುಮೂರ್ತಿ ಬೂದಿಗೆರೆ

ರಾಜ್ಯ ಸುದ್ದಿಗಳು

CHETAN KENDULI

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಜಿಲ್ಲಾಡಳಿತ ಭವನದ ಸಮೀಪದ ನಾಗದೇನಹಳ್ಳಿ ಬಳಿಯ ಗೀತಂ ಯುನಿವರ್ಸಿಟಿ ಕ್ಯಾಂಪಸ್ ನ ಶಿವಾಜಿ ಆಡಿಟೋರಿಯಂ ಸಭಾಂಗಣದಲ್ಲಿ  ಅಚೀರ್ವಸ್ರ್ ಡೇ ಸಂಭ್ರಮಾಚರಣೆ ಕಾರ್ಯಕ್ರಮ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು,ಯುನಿವರ್ಸಿಟಿಯು ಅಚೀವ‍‍ರ್ಸ್ ಡೇ ಆಚರಿಸುತ್ತಿದ್ದು, ನಮ್ಮ ವಿದ್ಯಾರ್ಥಿಗಳ ಸಾಧನೆ ಬಗ್ಗೆ ಹೆಮ್ಮೆ ಇದೆ. ವಿದ್ಯಾರ್ಥಿಗಳನ್ನು ಸಂಸ್ಥೆಗಳಿಗೆ ನೇಮಕ ಮಾಡಿಕೊಂಡ ಹೆಸರಾದಂತ ಕಂಪೆನಿಗಳಾದ, ಟಿಸಿಎಲ್, ತೋಶಿಬಾ, ಸೊಸೈಟಿ ಜನರಲ್, ಅಮೆಜಾನ್, ಎಚ್ ಡಿ ಎಫ್ ಸಿ ಲೈಫ್, ಸಿಸ್ಕೋ, ಆಕ್ಸೆಂಚುರ್, ಡೆಲ್ ಮೊದಲಾದ  100 ಕಂಪನಿಗಳು ಕ್ಯಾಂಪಸ್ ಸೆಲೆಕ್ಷನ್ ನಲ್ಲಿ ಭಾಗವಹಿಸಿ ವಿದ್ಯಾರ್ಥಿಗಳ ಜೀವನ ರೂಪಿಸಿಕೊಳ್ಳಲು ನೆರವಾಗಿದೆ,ಅವರಿಗೆ  ಧನ್ಯವಾದ ಹೇಳಲು ಬಯಸುತ್ತೇನೆ. ಅಮೆಜಾನ್ 18 ಲಕ್ಷಗಳ ಹೆಚ್ಚಿನ ಮೊತ್ತದ ಆಫರ್ ಕೊಟ್ಟರೆ, ಸಿಸ್ಕೋ 11 ಲಕ್ಷ, ಟಿಸಿಎಸ್ ಮತ್ತು ಡೆಲ್ 8 ಲಕ್ಷ ರೂ ಗಳ ಆಫರ್ ಗಳನ್ನು ವಿಧ್ಯಾರ್ಥಿಗಳಿಗೆ ನೀಡಿವೆ.

ವಿದ್ಯಾರ್ಥಿಗಳು ನಿಜಕ್ಕೂ ಒಂದು ಉತ್ತಮ ಪ್ಯಾಕೇಜ್ ನೊಂದಿಗೆ ಒಳ್ಳೆಯ ಕಂಪೆನಿಗಳಲ್ಲಿ ಕೆಲಸ ಪಡೆದಿದ್ದಾರೆ. ಗೀತಂ ಯೂನಿವರ್ಸಿಟಿ 100 ವಿಶ್ವವಿದ್ಯಾಯಲಗಳಲ್ಲಿ ಒಂದಾಗಿ ಎ ಶ್ರೇಣಿಯ ಕ್ರಮಾಂಕದಲ್ಲಿ ಇದೆ. ಆಂಧ್ರದ ವೈಜಾಕ್, ತೆಂಲಂಗಾಣದ ಹೈದ್ರಾಬಾದ್, ಕರ್ನಾಟಕದಲ್ಲಿ ಬೆಂಗಳೂರು ಹೀಗೆ ಗೀತಂ ಮೂರು ಪ್ರದೇಶಗಳಲ್ಲಿ ಕೆಲಸ ಮಾಡುತ್ತಿದೆ. 15 ಸಾವಿರ ಮಂದಿ ಪ್ರಾಧ್ಯಾಪಕರು, 25 ಸಾವಿರ ವಿದ್ಯಾರ್ಥಿಗಳನ್ನು ಹೊಂದಿದೆ. ವಿದ್ಯಾರ್ಥಿಗಳು ಇತರೆ ಗ್ಲೋಬಲ್ ಯೂನಿವರ್ಸಿಟಿಗಳಿಂದಲೂ ಕಲಿಯಲು ಸುಮಾರು 20 ಸಾವಿರ ಪರವಾನಿಗೆ ಪಡೆದಿದ್ದು ವಿದ್ಯಾರ್ಥಿಗಳಿಗೆ ಉತ್ತಮ ಭವಿಷ್ಯ ಹೊಂದಲು ನೆರವಾಗಿದ್ದೇವೆ. ಹೀಗೆ ಬಹಳಷ್ಟು ವಿಶೇಷತೆಗಳು, ವಿಶಿಷ್ಠ ಕೋರ್ಸ್ ಗಳು, ಸಂಶೋಧನೆಗಳು ನಡೆಸಲು ವಿದ್ಯಾರ್ಥಿಗಳಿಗೆ  ಉತ್ತಮ ವೇದಿಕೆಯಾಗಿದೆ ಎಂದು ಗೀತಂ ಸ್ಕೂಲ್ ಆಫ್ ಟೆಕ್ನಾಲಜಿ ವೈಸ್ ಚಾನ್ಸಿಲರ್ ಪ್ರೋ. ಡಿ.ಎಸ್.ರಾವ್ ತಿಳಿಸಿದರು.

ಯಾರೇ ಒಬ್ಬ ಮನುಷ್ಯ ತನ್ನ ಗುರಿಯನ್ನು ಮುಟ್ಟಬೇಕಾದರೆ ಸೋಲು, ಅವಮಾನ , ಗೆಲುವು ಅನುಭವಿಸಿದರೆ ಮಾತ್ರ ಗುರಿ ಮುಟ್ಟಲು ಸಾಧ್ಯ, ಎಲ್ಲವನ್ನು ಖುಷಿಯಿಂದ ಸ್ವೀಕರಿಸಿ ಅನುಭವಿಸಿ, ಮುಂದಿನ ದಿನಗಳಲಿ ನಿಮ್ಮ ಟ್ಯಾಲೆಂಟ್‌ ಸಮಾಜಕ್ಕೆ ನೀಡುವುದು ಮುಖ್ಯ, ನಾನು ಯಾವ ರೀತಿ ಮುಂದುವರಿಯಬೇಕೆನ್ನುವುದು ಮಾತ್ರ ನಿಮ್ಮ ಮನಸ್ಸಿನಲ್ಲಿರಲಿ  ಭೇದಬಾವ ಭಾವನೆ ನಿಮ್ಮ ಮನಸ್ಸಿನಿಂದ ತೆಗೆದುಹಾಕಿ ಆತ್ಮ ಧೈರ್ಯ ದಿಂದ, ವಿದ್ಯಾಭ್ಯಾಸದಲ್ಲಿ ಮುನ್ನುಗ್ಗಿ ಎಂದು ಅಲೈಕ್ಸೀಸ್ ನ ಜನರಲ್ ಮ್ಯಾನೇಜರ್ ಕೃಷ್ಣಕುಮಾರ್ ತಿಳಿಸಿದರು.ಇದೇ ಸಮಯದಲ್ಲಿ ಸಾಧಕರ ಪರವಾಗಿ ಮಾತನಾಡಿದ ,,, ವಿಧ್ಯಾರ್ಥಿ ದೀಪ್ತಿ ನಮ್ಮ ಸಾಧನೆಗೆ ಉತ್ತಮವಾದ ಅವಕಾಶ ದೊರೆತಿದೆ, ಸಾಧನೆಗೆ ಇಲ್ಲಿ ಉತ್ತಮ ವಾತವರಣ,ಪ್ರಾಧ್ಯಾಪಕ, ವರ್ಗ,ಉತ್ತಮ ಸ್ನೇಹಿತರು, ಗೀತಂ ಯುನಿವರ್ಸಿಟಿ ನಮಗೆ ಒಳ್ಳೆಯ ಅವಕಾಶ ಒದಗಿಸಿಕೊಟ್ಟಿದೆ ಎಂದರು,ಸಾಧಕರಾದ ಎಲ್ಲ ವಿಧ್ಯಾರ್ಥಿಗಳಿಗೆ ಪ್ರಮಾಣಪತ್ರ, ಖಾಸಗಿ ಕಂಪನಿಗಳಿಂದ ಕೆಲಸಕ್ಕೆ ಆದೇಶ ಪತ್ರವನ್ನು ವಿತರಿಸಿದರುಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ  ಗುಲ್ಹಟಿ, ಶ್ರೀನಿವಾಸ್ ರಾಮಾನುಜಂ ಕಂದೂರಿ, ಬಿನಾಯ್, ಬಿನಾಯ್ ಮೆಹೆತಾ, ಫ್ರೊ ದಿನೇಶ್ ಸೇತ್, ಶೈಲೇಂದ್ರ ದಾಸರಿ, ಅತುಲ್ ಕುಮಾರ್, ಇನ್ನೂ ಮತ್ತಿತರರು ಇದ್ದರು.

 

Be the first to comment

Leave a Reply

Your email address will not be published.


*