ಕರಡಿಹಳ್ಳಿ: ಅಸ್ವಸ್ಥಗೊಂಡಿದ್ದ ಕರಡಿ ರಕ್ಷಿಸಿದ ಗ್ರಾಮಸ್ಥರು

ವರದಿ : ವಿ.ಜಿ.ವೃಷಭೇಂದ್ರ ಕೂಡ್ಲಿಗಿ

ಜಿಲ್ಲಾ ಸುದ್ದಿಗಳು

ವಿಜಯನಗರ:

CHETAN KENDULI

ಜಿಲ್ಲೆಯ ಕೂಡ್ಲಿಗಿ ತಾಲೂಕು ಕರಡಿಹಳ್ಳಿ ಹೊರವಲಯದಲ್ಲಿ,ಕರಡಿಯೊಂದು ತೀರಾ ಅಸ್ವಸ್ಥತೆಯಿಂದ ಬಳಲಿ ಬಿದ್ದುಕೊಂಡಿರುವ ರೀತಿಯಲ್ಲಿ ಪತ್ತೆಯಾಗಿದೆ.
ಕರಡಿ ಗ್ರಾಮದ ಹೊರವಲಯದ ತೋಪೊಂದರಲ್ಲಿ ಎಚ್ಚರವಿಲ್ಲದ ಸ್ಥಿತಿಯಲ್ಲಿ ಕಂಡುಬಂದ ಹಿನ್ನಲೆಯಲ್ಲಿ,ಗ್ರಾಮದ ಮುಖಂಡ ಮಾಳ್ಗಿ ಕೃಷ್ಣಪ್ಪ,ನಾಗರಾಜ ನೇತೃತ್ವದಲ್ಲಿ ಗ್ರಾಮಸ್ಥರು.ಸಮಯ ಪ್ರಜ್ಞೆಯಿಂದ ಕರಡಿಗೆ ಪ್ರಥಮ ಚಿಕಿತ್ಸೆ ನೀಡಿ ಸಂರಕ್ಷಿಸಿದ್ದಾರೆ.


 


ನಂತರ ಕರಡಿಯನ್ನ ಅರಣ್ಯ ಇಲಾ ಸಂಪರ್ಕಿಸಿ ಅವರಿಗೆ ಕರಡಿಯನ್ನ ಒಪ್ಪಿಸಿದ್ದಾರೆ.ಕೆಲ ಗ್ರಾಮಸ್ಥರೇ ಹೇಳುವಂತೆ ಕರಡಿಯು ತುಂಬಾ ದಿನಗಳಿಂದ ಕರಡಿಹಳ್ಳಿ ಹಾಗೂ ಸುತ್ತ ಕುತ್ತಲ ಗ್ರಾಮಗಳಲ್ಲಿ, ಬಹುದಿನಗಳಿಂದ ಕಾಣಿಸಿಕೊಂಡು ಆತಂಕ ಸೃಷ್ಠಿಸಿತ್ತು. ಈ ಹಿನ್ನಲೆಯಲ್ಲಿ ಕಿಡಿಗೇಡಿಗಳು ಕರಡಿಗೆ ಜೀವಕ್ಕೆ ಕುತ್ತುತರುವ ನಿಟ್ಟಿನಲ್ಲಿ ವಿಷಪೂರಿತ ಆಹಾರ ದೊರಕುವಂತೆ ಮಾಡಿರಬಹುದೆಂದು ಊಹಿಸಲಾಗಿದೆ.
ಕರಡಿ ತೀರಾ ಬಳಲಿದ್ದ ಹಿನ್ನಲೆಯಲ್ಲಿ ಅರಣ್ಯ ಇಲಾಖೆಯವರು ಕರಡಿಗೆ ಅಗತ್ಯ ಚಿಕಿತ್ಸೆ ನೀಡಿದ್ದಾರೆ,ಈಗ ಕರಡಿ ಸಹಜ ಸ್ಥಿತಿಗೆ ಮರಳಿದೆ ಎಂದು ಅರಣ್ಯ ಇಲಾಖೆಯ ಸಿಬ್ಬಂದಿ ಸ್ಪಷ್ಟಪಡಿಸಿದ್ದಾರೆ.ಗ್ರಾಮದ ಮಾಳ್ಗಿ ಕೃಷ್ಣಪ್ಪ ಹಾಗೂ ಯುವಕರ ತಂಡದ ವನ್ಯ ಮೃಗ ಪ್ರೀತಿಯನ್ನ ಕಂಡು ಅರಣ್ಯ ಇಲಾಖೆ ಶಹಬ್ಬಾಸ್ ಗಿರಿ ನೀಡಿದ್ದಾರೆ ಹಾಗೂ ಅಭಿನಂದಿಸಿದ್ದಾರೆ.ಈಗ ಕರಡಿ ದರೋಜಿ ಕರಡಿ ದಾಮದಲ್ಲಿ ಆರೋಗ್ಯವಾಗಿದೆ ಎಂದು ಅರಣ್ಯ ಇಲಾಖೆಯವರಜ ಸ್ಪಷ್ಟಪಡಿಸಿದ್ದಾರೆ.

Be the first to comment

Leave a Reply

Your email address will not be published.


*