ರಾಜ್ಯ ಸುದ್ದಿಗಳು
ದೇವನಹಳ್ಳಿ
ಪ್ರಸ್ತುತ ಕೊರೊನಾ ಬಾರದಂತೆ ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳುವ ಕೋವಿಡ್ ಲಸಿಕೆ ಸಕಾಲದಲ್ಲಿ ಜನರಿಗೆ ಕೈಗೆಟುಕದಿರುವುದರಿಂದ ಕೋವಿಡ್ ಸಾಂಕ್ರಾಮಿಕ ರೋಗ ಹರಡುವ ಆತಂಕದಲ್ಲಿ ಜನರಿದ್ದಾರೆ.ಮೊದಲನೇ ಬಾರಿಯ ಲಸಿಕೆ ಸಂದರ್ಭದಲ್ಲಿ ಜನರು ನಿರಾಸಕ್ತಿ ತೋರುತ್ತಿದ್ದರು. ಆದರೆ, ಎರಡನೇ ಅಲೆಯಿಂದ ಸಾವು ನೋವುಗಳು ಹೆಚ್ಚಳವಾದ್ದರಿಂದ ಲಸಿಕಾ ಕೇಂದ್ರಗಳಿಗೆ ಗ್ರಾಮೀಣ ಭಾಗದ ಮತ್ತು ನಗರ ಪ್ರದೇಶದ ಜನರು ದೌಡಾಯಿಸಿದರೂ ಲಸಿಕೆ ಅಭಾವದಿಂದಾಗಿ ಸಾಕಷ್ಟು ಜನರಿಗೆ ಇದೊಂದು ದೊಡ್ಡ ತಲೆನೋವಾಗಿ ಪರಿಣಮಿಸಿದೆ.ಜಿಲ್ಲೆಯ ಸಾಕಷ್ಟು ಗ್ರಾಮೀಣ ಭಾಗದ ಪಿಎಚ್‌ಸಿಗಳಲ್ಲಿ ಕೋವಿಶೀಲ್ಡ್ ಲಸಿಕೆ ಮಾತ್ರ ಲಭ್ಯವಾಗುತ್ತಿದ್ದು, ನಗರ ಪ್ರದೇಶದ ತಾಲೂಕು ಕೇಂದ್ರಗಳಲ್ಲಿ ಕೋವ್ಯಾಕ್ಸಿನ್ ಲಸಿಕೆ ಲಭ್ಯವಾಗುತ್ತಿದೆ. ಲಸಿಕೆ ಪ್ರಮಾಣ ತೀರ ಕಡಿಮೆ ಇರುವುದರಿಂದ ಜನರು ಪರದಾಡುವ ಪರಿಸ್ಥಿತಿ ಇದೀಗ ಸೃಷ್ಠಿಯಾಗಿದೆ.
ಆದ್ಯತೆ ಮೇಲೆ ಲಸಿಕೆ: ಈಗಾಗಲೇ ೪೫ ವರ್ಷ ಮೇಲ್ಪಟ್ಟವರು ೧ ಬಾರಿ ಲಸಿಕೆ ಹಾಕಿಸಿಕೊಂಡು ೨ನೇ ಡೋಸ್ ಲಸಿಕೆಗಾಗಿ ಕಾಯುತ್ತಿದ್ದಾರೆ. ಮೊದಲನೆ ಲಸಿಕೆ ಪಡೆದು ೮೪ ದಿನ ಕಳೆದ ನಂತರವೇ ೨ನೇ ಡೋಸ್ ಲಸಿಕೆ ನೀಡಲಾಗುವುದು ಎಂದು ಆರೋಗ್ಯ ಇಲಾಖೆ ಸೂಚಿಸಿದೆ. ಅದರಂತೆ ೮೪ ದಿನ ಕಳೆದ ಸಾವಿರಾರು ಜನರು ಈಗ ಲಸಿಕೆಗಾಗಿ ಕಾಯುತ್ತಿದ್ದಾರೆ. ಆದರೆ, ಒಮ್ಮೆ ಹೋಬಳಿ ಕೇಂದ್ರಕ್ಕೆ ೧೦೦-೨೦೦ಲಸಿಕೆ ಮಾತ್ರ ಬರುತ್ತಿದ್ದು, ಆದ್ಯತೆ ಮೇರೆಗೆ ಆರೋಗ್ಯ ಇಲಾಖೆಯುವ ಹೋಬಳಿಯ ಪಿಎಚ್‌ಸಿಗಳಿಗೆ ಲಸಿಕೆಗಳನ್ನು ನೀಡುತ್ತಿದೆ.ಕೆಲ ಹೋಬಳಿಗಳ ಗ್ರಾಮಗಳಲ್ಲಿನ ಪಿಎಚ್‌ಸಿಗಳಲ್ಲಿ ಲಸಿಕೆ ಪಡೆಯಬೇಕಾದರೆ ಕಡ್ಡಾಯವಾಗಿ ಕೋವಿಡ್ ಟೆಸ್ಟ್ ಮಾಡಿಸುವಂತೆ ಒತ್ತಡ ಹೇರುತ್ತಿರುವುದು ಸಾರ್ವಜನಿಕರಲ್ಲಿ ಮತ್ತಷ್ಟು ಆತಂಕಗಳಿಗೆ ಎಡೆಮಾಡಿಕೊಡುವಂತೆ ಆಗಿದೆ. ಆರೋಗ್ಯ ಇಲಾಖೆ ಸಮರ್ಪಕ ಲಸಿಕೆಗಳನ್ನು ಪಿಎಚ್‌ಸಿಗಳಿಗೆ ನೀಡಿದರೆ, ಸಾರ್ವಜನಿಕರು ನಿಟ್ಟುಸಿರುವ ಬಿಡುವಂತೆ ಆಗುತ್ತದೆ ಎಂದು ಸಾರ್ವಜನಿಕರ ಒತ್ತಾಯವಾಗಿದೆ.
ಸಿಬ್ಬಂದಿ ವಿರುದ್ಧ ಸಿಡಿಮಿಡಿ: ದೇವನಹಳ್ಳಿ ತಾಲೂಕಿನ ವಿಶ್ವನಾಥಪುರ ಪಿಎಚ್‌ಸಿಯಲ್ಲಿ ಲಸಿಕೆ ನೀಡುವಂತೆ ಜನರು ಕೇಳಲಾಗಿ, ಕಳೆದ ಸೋಮವಾರದಂದು ಲಸಿಕೆ ಎಷ್ಟು ಬಂದಿದೆ ಎಂಬ ಅಂಕಿಅಂಶ ವ್ಯತ್ಯಾಸವಾಗುತ್ತಿರುವುದು ಗಮನಕ್ಕೆ ಬಂದಿದ್ದು, ಲಸಿಕೆ ಹಾಕಿಸಿಕೊಳ್ಳದ ಕೆಲ ಜನರು ಸಿಬ್ಬಂದಿ ವಿರುದ್ಧ ಸಿಡಿಮಿಡಿಗೊಂಡರು. ಕೆಲ ಕಾಲ ಮಾತಿನ ಚಕಮಕಿ ನಡೆಸಿದರು.ಅಧಿಕಾರಿಗಳ ಸಬೂಬು: ಯಾರೇ ಬಂದರೂ ಲಸಿಕೆಯನ್ನು ಹಾಕಿ ಕಳುಹಿಸಿಕೊಡುವುದು ನಮ್ಮ ಜವಾಬ್ದಾರಿಯಾಗಿದೆ. ಈಗಾಗಲೇ ನಮ್ಮ ಪಿಎಚ್‌ಸಿ ವ್ಯಾಪ್ತಿಗೆ ಬರದ ಕೆಲವು ಗ್ರಾಮಗಳಿಗೂ ಸಹ ಆದ್ಯತೆ ಮೆರೆಗೆ ಲಸಿಕೆ ಪೂರೈಸಲಾಗುತ್ತಿದೆ. ಆಯಾ ಸಂಬಂಧಿಸಿದ ಪಿಎಚ್‌ಸಿಗಳವರು ಹಳ್ಳಿಗಳಿಗೆ ಲಸಿಕೆ ನೀಡುವ ಕೆಲಸ ಮಾಡಬೇಕು. ಲಸಿಕೆ ಬಂದಾಗ ಕೂಡಲೇ ಬಂದು ಹಾಕಿಸಿಕೊಳ್ಳಿ ಎಂದು ಪಿಎಚ್‌ಸಿ ವೈದ್ಯರು ಸಬೂಬು ಉತ್ತರ ನೀಡುತ್ತಿದ್ದಾರೆ.
ಲಸಿಕೆ ಅಭಾವ ಎಲ್ಲಾ ಪಿಎಚ್‌ಸಿಗಳಲ್ಲಿ ಇದೆ. ಗ್ರಾಪಂ ವ್ಯಾಪ್ತಿಯಲ್ಲಿನ ಜನರಿಗೆ ಮೊದಲ ಆದ್ಯತೆ ನೀಡಬೇಕು. ಎಲ್ಲೋ ರಿಜಿಸ್ಟರ್ ಮಾಡಿಸಿ, ಎಲ್ಲೋ ಲಸಿಕೆ ಪಡೆಯುವುದನ್ನು ಮೊದಲು ನಿಲ್ಲಿಸಬೇಕು. ಸ್ಥಳೀಯರಿಗೆ ಮೊದಲ ಆದ್ಯತೆ ನೀಡಬೇಕು. ಈ ಅಭಾವ ನೀಗಿಸಲು ಖಾಸಗಿ ಕಂಪನಿಯೊಂದು ಮುಂದಿನ ತಿಂಗಳು ಪಂಚಾಯಿತಿ ವ್ಯಾಪ್ತಿಯಲ್ಲಿ ೮೦೦ಕ್ಕೂ ಹೆಚ್ಚು ಲಸಿಕೆ ಹಾಕುವ ಅಭಿಯಾನ ಮಾಡಲಾಗುತ್ತದೆ.
– ಮಂಗಳಾ ನಾರಾಯಣಸ್ವಾಮಿ, ವಿಶ್ವನಾಥಪುರ ಗ್ರಾಪಂ ಅಧ್ಯಕ್ಷೆಲಸಿಕೆಗಾಗಿ ಆಸ್ಪತ್ರೆಗೆ ಹೋದರೆ, ಘಂಟೆಗಟ್ಟಲೇ ಕಾದರೂ ಲಸಿಕೆ ಸಿಗುತ್ತಿಲ್ಲ. ಮೊನ್ನೆಯಷ್ಟೇ ಲಸಿಕೆ ಪಡೆಯಲು ಸಾಲುಗಟ್ಟಿ ನಿಲ್ಲಲಾಗಿತ್ತು. ಲಸಿಕೆ ಖಾಲಿಯಾಗಿದೆ ಎಂದು ಆಸ್ಪತ್ರೆ ಸಿಬ್ಬಂದಿ ವಾಪಾಸ್ ಕಳುಹಿಸಿದ್ದಾರೆ. ಲಸಿಕೆ ಅಭಾವನ್ನು ಸರಕಾರಕೂಡಲೇಇತ್ಯರ್ಥಗೊಳಿಸಬೇಕು. ಕೆ.ಶ್ರೀನಿವಾಸ್, ವಿಶ್ವನಾಥಪುರ ಗ್ರಾಪಂ ಸದಸ್ಯ
Be the first to comment