ರಾಜ್ಯ ಸುದ್ದಿಗಳು
ದೇವನಹಳ್ಳಿ
ತಾಲೂಕಿನ ಕೊಯಿರ ಗ್ರಾಪಂ ವ್ಯಾಪ್ತಿಯ ಕೊಯಿರ ಕಾಲೋನಿಯ ಹಳೇ ಚರ್ಚ್ ಪಕ್ಕದಲ್ಲಿರುವ ಓವರ್‌ಟ್ಯಾಂಕ್‌ನಲ್ಲಿ ನೀರು ತುಂಬಿಕೊಂಡು ಲೀಕೆಜ್ ಆಗುತ್ತಿದ್ದು, ಟ್ಯಾಂಕಿನ ಅಕ್ಕಪಕ್ಕದಲ್ಲಿ ಗಿಡಗಂಟೆಗಳು ಯತೇಚ್ಚವಾಗಿ ಆಳುದ್ದ ಬೆಳೆದು ನಿಂತಿದೆ. ಕೂಡಲೇ ಗ್ರಾಪಂ ವತಿಯಿಂದ ಸ್ವಚ್ಛಗೊಳಿಸಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.ಸುಮಾರು ಕಡೆಗಳಿಗೆ ನೀರು ಸರಬರಾಜು ಮಾಡುವ ಓವರ್‌ಟ್ಯಾಂಕ್ ಸುತ್ತಲು ಬೆಳೆದಿರುವ ಅನುಪಯುಕ್ತ ಗಿಡಗಂಟೆಗಳನ್ನು ಸ್ವಚ್ಛಗೊಳಿಸಿ ಸಾರ್ವಜನಿಕರು ಟ್ಯಾಂಕ್ ಆವರಣಕ್ಕೆ ಹೋಗದಂತೆ ನಿಷೇಧದ ನಾಮಫಲಕ ಅಳವಡಿಸಿ ಗೇಟಿಗೆ ಬೀಗ ಜಡಿಯಬೇಕಿದೆ. ಟ್ಯಾಂಕ್‌ನೊಳಗೆ ಸ್ವಚ್ಚತೆ ಕಾಪಾಡಿ ಶುದ್ಧ ಕುಡಿಯುವ ನೀರು ಒದಗಿಸಿಕೊಡಬೇಕೆಂದು ಸುತ್ತಮುತ್ತಲಿನ ಜನರ ಮನವಿಯಾಗಿದೆ.
ಈಗಾಗಲೇ ವರ್ಷದಲ್ಲಿ ಎರಡು ಬಾರಿ ಟ್ಯಾಂಕ್ ಸುತ್ತಮುತ್ತಲು ಗಿಡಗಂಟೆಗಳನ್ನು ತೆಗೆದು, ಸ್ವಚ್ಛಗೊಳಿಸಲಾಗುತ್ತಿದೆ. ಮಳೆಯಾಗುತ್ತಿರುವುದರಿಂದ ಗಿಡಗಳು ಬೆಳೆಯುತ್ತಿವೆ. ಸ್ವಚ್ಛಗೊಳಿಸಲಾಗುತ್ತದೆ ಎಂದು ಗ್ರಾಪಂ ಸಿಬ್ಬಂದಿಗಳು ಹೇಳುತ್ತಾರೆ.ಟ್ಯಾಂಕ್ ಇರುವ ಜಾಗದಲ್ಲಿ ಬೆಳೆದಿರುವ ಗಿಡಗಂಟೆಗಳನ್ನು ಕೂಡಲೇ ಸ್ವಚ್ಛಗೊಳಿಸಲು ಸಿಬ್ಬಂದಿಗಳಿಗೆ ಸೂಚಿಸಲಾಗಿದೆ. ಟ್ಯಾಂಕಿನಲ್ಲಿ ಲೀಕೆಜ್ ಆಗುತ್ತಿಲ್ಲ. ನೀರು ತುಂಬಿ ಮೇಲ್ಭಾಗದಿಂದ ನೀರು ಸುರಿಯುವದನ್ನು ಕಂಡು ಲೀಕೆಜ್ ಎನ್ನುತ್ತಿದ್ದಾರೆ. ಆದಷ್ಟು ಬೇಗ ಸರಿಪಡಿಸಲಾಗುತ್ತದೆ. ಪಿಡಿಒ ವರ್ಗಾವಣೆಯಿಂದಾಗಿ ಯಾವುದೇ ಅಭಿವೃದ್ಧಿ ಕೆಲಸಗಳು ಆಗುತ್ತಿಲ್ಲ. ಮೂರುತಿಂಗಳಿಗೆ ಪಿಡಿಒ ಚೇಂಜ್ ಆಗುತ್ತಿದ್ದಾರೆ. ಜತೆಗೆ ಕಾರ್ಯದರ್ಶಿಯನ್ನು ಸಹ ಡೆಪ್ಟೇಷನ್ ಮೇಲೆ ಬೇರೆ ಗ್ರಾಪಂಗೆ ನೇಮಕ ಮಾಡುತ್ತಿರುವುದರಿಂದ ಗ್ರಾಪಂನಲ್ಲಿ ಆಗಬೇಕಿರುವ ಕೆಲಸಕಾರ್ಯಗಳಿಗೆ ಸಾಕಷ್ಟು ತೊಂದರೆಯಾಗುತ್ತಿದೆ. ವಿಜಯ್‌ಕುಮಾರ್ | ಉಪಾಧ್ಯಕ್ಷ, ಕೊಯಿರ ಗ್ರಾಮ ಪಂಚಾಯಿತಿ
Be the first to comment