ಜಿಲ್ಲಾ ಸುದ್ದಿಗಳು
ಶಿರಸಿ
ಧಾರವಾಡ ಹಾಲು ಒಕ್ಕೂಟದ ಕಲ್ಯಾಣ ಸಂಘದ ವತಿಯಿಂದ ಗುಡ್ನಾಪುರ ಹಾಲು ಉತ್ಪಾದಕರ ಸಹಕಾರಿ ಸಂಘದ ಸದಸ್ಯ ಅಣ್ಣಪ್ಪ ಕಲ್ಲಪ್ಪ ನಾಯ್ಕ ಅವರ ಆಕಳು ಮರಣ ಹೊಂದಿದ ಕಾರಣ ಜಾನುವಾರು ವಿಮೆಯ ಅಡಿಯಲ್ಲಿ ರೂ.33,000 ಗಳ ಮೊತ್ತದ ಚೆಕ್’ನ್ನು ಕೆಎಂಎಫ್ ನಿರ್ದೆಶಕ ಸುರೇಶ್ಚಂದ್ರ ಹೆಗಡೆ ಕೆಶಿನ್ಮನೆ ವಿತರಿಸಿದರು.ಈ ಸಂದರ್ಭದಲ್ಲಿ ಮಾತನಾಡಿದ ಅವರು ಧಾರವಾಡ ಹಾಲು ಒಕ್ಕೂಟದ ವತಿಯಿಂದ ಆಯಾ ಉಪವಿಭಾಗದ ವ್ಯಾಪ್ತಿಯ ಒಕ್ಕೂಟದ ಪಶುವೈದ್ಯರ ಮೂಲಕ ಹಾಲು ಉತ್ಪಾದಕರ ಜಾನುವಾರುಗಳಿಗೆ ವಿಮಾ ಸೌಲಭ್ಯವನ್ನು ಕಲ್ಪಿಸಿಕೊಡುತ್ತಿದ್ದು, ಕೇವಲ ರೂ. 400ರಿಂದ 500ಗಳ ವಿಮಾಕಂತು ಉತ್ಪಾದಕರು ಪಾವತಿಸಬೇಕಾಗಿದ್ದು, ಇದರಿಂದ ಹಾಲು ಉತ್ಪಾದಕರುಗಳ ಜಾನುವಾರುಗಳು ಮರಣ ಹೊಂದಿದದಲ್ಲಿ ಜಾನುವಾರಿನ ವಿಮಾಮೊತ್ತ ಹಾಲು ಉತ್ಪಾದಕನಿಗೆ ದೊರೆಯುವಂತಾಗುತ್ತದೆ. ಇಲ್ಲವಾದಲ್ಲಿ ಹಾಲು ಉತ್ಪಾದಕನಿಗೆ ಜಾನುವಾರು ಮರಣ ಹೊಂದಿದ ದುಖಃ ಒಂದು ಕಡೆಯಾದರೆ, ಆರ್ಥಿಕ ಸೌಲಭ್ಯದ ವಂಚಿತ ಭಾವನೆ ಇನ್ನೊಂದು ಕಡೆಯಾಗುತ್ತದೆ.
ಆದ್ದರಿಂದ ಎಲ್ಲಾ ಹಾಲು ಉತ್ಪಾದಕರು ತಮ್ಮ ಆಕಳು ಅಥವಾ ಎಮ್ಮೆಗಳಿಗೆ ತಪ್ಪದೇ ವಿಮೆ ಮಾಡಿಸುವಂತೆ ಈ ಮೂಲಕ ಅವರುವಿನಂತಿಸಿಕೊಂಡರು.
ಈ ಸಂದರ್ಭದಲ್ಲಿ ಗುಡ್ನಾಪುರ ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷರಾದ ಮೋಹನ ಕನ್ನಪ್ಪ ನಾಯ್ಕ, ಸಂಘದ ಜಾನುವಾರು ವಿಮಾಫಲಾನುಭವಿಯಾದ ಅಣ್ಣಪ್ಪಕಲ್ಲಪ್ಪ ನಾಯ್ಕ ಶಿರಸಿ ಉಪವಿಭಾಗದ ಗುರುದರ್ಶನ ಭಟ್, ಅಭಿಷೇಕ ನಾಯ್ಕ, ಚಂದನ ನಾಯ್ಕ ಹಾಗೂ ಇತರರು ಉಪಸ್ಥಿತರಿದ್ದರು.
Be the first to comment